Get Updates
Get notified of breaking news, exclusive insights, and must-see stories!

Karnataka 14 Dams: ರಾಜ್ಯಕ್ಕೆ ನಿರ್ಣಾಯಕವಾದ 14 ಆಣೆಕಟ್ಟುಗಳಲ್ಲಿ ಈ ವರ್ಷ ಅತ್ಯಧಿಕ ನೀರು ಸಂಗ್ರಹ, ಅಂಕಿ-ಅಂಶ

ಹುಬ್ಬಳ್ಳಿ, ಜುಲೈ 08: ಕರ್ನಾಟಕ ರಾಜ್ಯದಲ್ಲಿ ಒಂದಲ್ಲಾ ಒಂದು ಭಾಗದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಳೆದ ವರ್ಷ ಬರಗಾಲ, ಮಳೆ ಕೊರತೆ ಹಾಗೂ ಅನಾವೃಷ್ಠಿ ಉಂಟಾಗಿ ಪರಿಸ್ಥಿತಿ ಶೋಚನೀಯವಾಗಿತ್ತು. ಆದರೆ ಈ ವರ್ಷ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಏಕೆಂದರೆ ಕರ್ನಾಟಕದ 14 ಪ್ರಮುಖ ಜಲಾಶಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈಗಾಗಲೇ ನೀರು ಸಂಗ್ರಹವಾಗಿದೆ.

ಹೌದು, ಅತೀವ ಮಳೆಯಿಂದಾಗಿ ಜಲಾಶಯಗಳು ತುಂಬಿಕೊಂಡಿವೆ. ಅಂತರ್ಜಲವು ಹೆಚ್ಚಾಗುತ್ತಿದೆ. ಇದರಿಂದಾಗಿ ನೀರಾವರಿ, ಕುಡಿಯುವ ನೀರಿನ ಅಗತ್ಯತೆ ಮತ್ತು ವಿದ್ಯುತ್ ಉತ್ಪಾದನೆಗೆ ನಿರ್ಣಾಯಕ ಆಗಿರುವ ರಾಜ್ಯದ 14 ಬಹುಮುಖ್ಯ ಆಣೆಕಟ್ಟುಗಳಲ್ಲಿ 2023ಕ್ಕಿಂತ ಸದರಿ ಮುಂಗಾರು ಋತುವಿನಲ್ಲಿ (2024) ಹೆಚ್ಚು ನೀರಿದೆ ಎಂದು 'ಡಿಎಚ್'‌ ವರದಿ ಮಾಡಿದೆ.

Karnataka s Major 14 Dams Have Higher Water Level This Year Against Last Year

ಇನ್ನೂ ರಾಜ್ಯದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ (Tungabhadra Dam), ಇದು ರಾಜ್ಯದ ನಾಲ್ಕನೇ ಅತಿದೊಡ್ಡ ಜಲಾಶಯವಾಗಿದೆ. ಇಲ್ಲಿ ನೀರಿನ ಸಂಗ್ರಹ ಬರೀ ಶೇಕಡಾ 13 ರಷ್ಟು ಸಂಗ್ರಹವಾಗಿದೆ.

ಪ್ರಮುಖ ಜಲಾಶಯಗಳಲ್ಲಿ 293.85 ಟಿಎಂಸಿ ಅಡಿ ನೀರು

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಜುಲೈ 6ರ ಶನಿವಾರದವರೆಗೆ 293.85 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಎಲ್ಲಾ ಆಣೆಕಟ್ಟುಗಳಲ್ಲಿ ನೀರಿನ ಒಟ್ಟು ಸಂಗ್ರಹ ಸಾಮರ್ಥ್ಯ 895.62 ಟಿಎಂಸಿ ಅಡಿ ಇದೆ. ಅಂದರೆ ಇದು ಕಳೆದ ವರ್ಷ ಇದೇ 14 ಜಲಾಶಯಗಳಲ್ಲಿ ಸಂಗ್ರಹವಾಗಿದ್ದ (178.06 ಟಿಎಂಸಿ) ನೀರಿಗಿಂತ ಬಹಪಾಲು ಹೆಚ್ಚು ಎಂಬುದು ಇಲ್ಲಿನ ಅಂಕಿ-ಅಂಶಗಳಿಂದ ಸಾಬೀತಾಗಿದೆ.

ಕೃಷ್ಣೆಗಿಂತಲೂ ಕಾವೇರಿ ಜಲಾನಯನ ಸ್ಥಿತಿ ಉತ್ತಮ

ಉತ್ತರ ಕರ್ನಾಟಕ ಭಾಗದಲ್ಲಿನ ಕೃಷ್ಣಾ ಜಲಾನಯನ (Krishna Catchment Area) ಪ್ರದೇಶಕ್ಕಿಂತಲೂ ಈ ವರ್ಷ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳು ಉತ್ತಮವಾಗಿವೆ. ಏಕೆಂದರೆ ಇಲ್ಲಿ ನೀರಿನ ಸಂಗ್ರಹ ಅಧಿಕವಾಗಿದೆ. ವಿವರವಾಗಿ ನೋಡುವುದಾದರೆ, ಹಾರಂಗಿ ಜಲಾಶಯ (Harangi Dam) ಶೇ.62, ಹೇಮಾವತಿ ಆಣೆಕಟ್ಟು (Hemavathi Reservoir) ಶೇ.46 ಮತ್ತು ಕೆಆರ್ ಎಸ್ ಜಲಾಶಯ (KRS Dam Water level) ಶೇ.48ರಷ್ಟು ಈಗಾಗಲೇ ಮೈದುಂಬಿಕೊಂಡಿದೆ.

ಕಬಿನಿ ಆಣೆಕಟ್ಟಿನಲ್ಲಿ (Kabini Dam level) ಒಟ್ಟು ನೀರು ಸಂಗ್ರಹಣಾ ಸಾಮರ್ಥ್ಯ ಪೈಕಿ ಶೇಕಡಾ 91ರಷ್ಟು ನೀರಿನ ಸಂಗ್ರಹ ಈಗಾಗಲೇ ಆಗಿದೆ. ಈ ಜಲಾಶಯ ರಾಜ್ಯದಲ್ಲಿ ಭರ್ತಿ ಆಗಲಿರುವ ಮೊದಲ ಜಲಾಶಯವಾದರೂ ಆಗಬಹುದು.

ವಿವಿಧ ಜಲಾಶಯಗಳ ನೀರಿನ ಪ್ರಮಾಣದ ವಿವರ

ಇನ್ನೂಳಿದಂತೆ ಕೃಷ್ಣಾ ಜಲಾನಯನದಲ್ಲಿ ಭದ್ರಾ ಜಲಾಶಯದಲ್ಲಿ (Bhadra Dam Water Level) ಸದ್ಯಕ್ಕೆ ಶೇ.29ರಷ್ಟು ನೀರು, ತುಂಗಭದ್ರಾ ಆಣೆಕಟ್ಟಿನಲ್ಲಿ ಶೇಕಡಾ 13, ಘಟಪ್ರಭಾ ಜಲಾಶಯ ಶೇ.30, ಮಲಪ್ರಭಾ ಆಣೆಕಟ್ಟು ಶೇ.23, ಆಲಮಟ್ಟಿ ಆಣೆಕಟ್ಟಿನಲ್ಲಿ (Alamatti Dam) ಶೇ.44 ಮತ್ತು ನಾರಾಯಣಪುರ ಜಲಾಶಯದಲ್ಲಿ (Narayanapura Dam) ಶೇ.64ರಷ್ಟು ನೀರು ತಂಬಿಕೊಂಡಿದೆ. ಹೀಗಾಗಿ ಇವೆಲ್ಲವು ಭವಿಷ್ಯದಲ್ಲಿ ಬರಗಾಲ ಎದುರಿಸುವ ಭರವಸೆ ನೀಡಿವೆ.

Karnataka s Major 14 Dams Have Higher Water Level This Year Against Last Year

ಬೇರೆ ಆಣೆಕಟ್ಟುಗಳಿಗೆ ಹೋಲಿಕೆ ಮಾಡಿದರೆ ಸೂಪಾ ಡ್ಯಾಂ (Sufa Dam) ಶೇ. 27, ಲಿಂಗನಮಕ್ಕಿ (Linganamakki dam) ಶೇ. 22 ಮತ್ತು ವಾರಾಹಿ ಶೇ. 19ರಷ್ಟು ನೀರಿನ ಸಂಗ್ರಹ ಮಾತ್ರ ಹೊಂದಿದೆ. ಮಳೆಗಾಲ ಇನ್ನೂ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಜಲಾಶಯಗಳಲ್ಲಿ ವಿದ್ಯುತ್ ಉತ್ಪಾದನೆಗೆ ಬೇಕಾದ ಅಗತ್ಯ ನೀರು ಸಂಗ್ರಹವಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ಆಲಮಟ್ಟಿ ಜಲಾಶಯಕ್ಕೆ ಅತ್ಯಧಿಕ ಒಳಹರಿವು ದಾಖಲು

ಭಾರೀ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ (Alamatti dam inflow) ಸುಮಾರು 62,073 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದು ರಾಜ್ಯದ ಇತರ ಜಲಾಶಯಗಳಿಗಿಂತಲೂ ಅತ್ಯಧಿಕ ಒಳಹರಿವು ಎನ್ನಲಾಗುತ್ತಿದೆ. ಇನ್ನೂ ನೆರೆ ರಾಜ್ಯ ಕೇರಳದಲ್ಲಿ ಕೆಲವು ವಾರಗಳಿಂದಲೂ ಧಾರಾಕಾರ ಮಳೆ (Heavy Rain) ಆಗುತ್ತಿದೆ. ಹೀಗಾಗಿ ಕಪಿಲಾ ನದಿಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಇದರೊಂದಿಗೆ ಒಟ್ಟು 19.52 ಟಿಎಂಸಿ ಅಡಿ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯದಲ್ಲಿ ಈಗಾಗಲೇ 17.83 ಟಿಎಂಸಿ ಅಡಿ ನೀರನ್ನು ಸಂಗ್ರಹವಾಗಿದೆ.

ಮೈಸೂರು-ಬೆಂಗಳೂರು ಬೆಲ್ಟ್ ಪ್ರಮುಖ ಪ್ರದೇಶಗಳಿಗೆ ವರ್ಷ ಪೂರ್ತಿ ನೀರುಣಿಸುವ ಸಾಮರ್ಥ್ಯ ಹೊಂದಿರುವ ಕೃಷ್ಣ ರಾಜಸಾಗರ ಒಟ್ಟು 49.45 ಟಿಎಂಸಿ ಅಡಿ ಸಾಮರ್ಥ್ಯದಲ್ಲಿ 23.52 ಟಿಎಂಸಿ ಅಡಿ ನೀರನ್ನು ಈಗಾಗಲೇ ಸಂಗ್ರಹಿಸಿಕೊಂಡಿದೆ.

ಹಿಡಕಲ್ ಡ್ಯಾಂ ಸುತ್ತಮುತ್ತ ಭಾರೀ ಮಳೆ

ಕರ್ನಾಟಕ ಹಾಗೂ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆ ಆಗುತ್ತಿರುವ ಕಾರಣದಿಂದ ಹಿಡಕಲ್ ಅಣೆಕಟ್ಟು ಮತ್ತು ಸವದತ್ತಿ ಬಳಿಯ ನವಿಲುತೀರ್ಥದ ರೇಣುಕಾಸಾಗರ ಜಲಾಶಯಕ್ಕೆ ಯಥೇಚ್ಛವಾಗಿ ನೀರು ಹರಿದು ಬರುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯ ಉತ್ತಮ ಸ್ಥಾನದಲ್ಲಿದ್ದೇವೆ. ಇದು ಮುಂದಿನ ಬೇಸಿಗೆ ಯಾವುದೆ ತೊಂದರೆ ಆಗುವುದಿಲ್ಲ ಎಂಬ ವಿಶ್ವಾಸದಲ್ಲಿದ್ದೇವೆ ಎಂದು ಜಲಸಂಪನ್ಮೂಲ ಇಲಾಖೆಯ ಜೊತೆಗೆ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+