ಮಳೆ.. ಮಳೆ.. ಮುಂದಿನ 24 ಗಂಟೆ ಭರ್ಜರಿ ಮಳೆ!
ಮಳೆ ಅಬ್ಬರ ಶುರುವಾಗಿದ್ದು, ಕಳೆದ 1 ತಿಂಗಳಿಂದ ನಿರಂತವಾಗಿ ಕರ್ನಾಟಕದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಈ ಪೈಕಿ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕರಾವಳಿ ಪ್ರದೇಶ, ಮಲೆನಾಡು ಭಾಗ & ಉತ್ತರ ಹಾಗೂ ಮಧ್ಯ ಕರ್ನಾಕದಲ್ಲಿ ಕೂಡ ಮಳೆ ಅಬ್ಬರಿಸುತ್ತಿದೆ. ಹಾಗೇ ಮುಂದಿನ 24 ಗಂಟೆ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆಯ ನೀಡಲಾಗಿದೆ.
ಮಳೆ ಇಲ್ಲದೆ ಬೆಳೆ ಕಳೆದುಕೊಳ್ಳುವ ಹಂತಕ್ಕೆ ಬಂದು ಚಿಂತೆಯಲ್ಲಿ ಮುಳುಗಿದ್ದ, ಕನ್ನಡ ನಾಡಿನ ರೈತರಿಗೆ ಭಾರಿ ಸುದ್ದಿ ಸಿಕ್ಕಿದೆ. ಏನಂದರೆ ಕರ್ನಾಟಕದಲ್ಲಿ ಮಳೆ ಭಾರಿ ಆರ್ಭಟ ತೋರಿಸುತ್ತಿದ್ದು ಇದರ ಜೊತೆಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ಮುಂಗಾರು ಮಳೆಯ ಆಗಮನದ ವೇಳೆಗೆ, ಕರ್ನಾಟಕದಲ್ಲಿ ಭರ್ಜರಿ ಮಳೆಯಾಗುತ್ತೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿ ಮಳೆಯ ಅಬ್ಬರದ ಪರಿಣಾಮ ಈಗಾಗಲೇ ಕರ್ನಾಟಕದ ಡ್ಯಾಂಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಕೂಡ ಬರುತ್ತಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗೆ ಭರ್ಜರಿ ಮಳೆ ಬರಲಿದೆ? ಮುಂದೆ ಓದಿ.

ಯಾವೆಲ್ಲಾ ಜಿಲ್ಲೆಗೆ ಮಳೆ ಎಂಟ್ರಿ?
ಈಗಿರುವ ಮಾಹಿತಿ ಪ್ರಕಾರ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು & ಉಡುಪಿ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆ ಸೇರಿದಂತೆ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಿಗೆ ಭರ್ಜರಿ ಮಳೆ ಆಗಲಿದೆ. ಅದ್ರಲ್ಲೂ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಭಾರಿ ಮಳೆಯ ಸಿಂಚನ ಆಗಲಿದೆ.
ಯಾವೆಲ್ಲಾ ನದಿಗಳು ತುಂಬುತ್ತಿವೆ?
ಈಗ ಮಳೆ ಆರಂಭ ಆರಂಭವಾದ ಹಿನ್ನೆಲೆ ಕಾವೇರಿ, ತುಂಗಾ, ಭದ್ರಾ, ಹೇಮಾವತಿ ನದಿಗಳೂ ಸೇರಿದಂತೆ ಕಪಿಲಾ, ನೇತ್ರಾವತಿ ಸೇರಿದಂತೆ ಹತ್ತಾರು ನದಿಗಳು ಈಗ ನಿಧಾನವಾಗಿ ತುಂಬಿಕೊಳ್ಳುತ್ತಿವೆ. ಅದರಲ್ಲೂ ಮಲೆನಾಡು ಭಾಗದಲ್ಲಿನ ನದಿಗಳಿಗೆ ಜೀವಕಳೆ ಬರುತ್ತಿದ್ದು, ಈ ಹಿನ್ನೆಲೆ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಭರ್ಜರಿ ಮಳೆ ಆರಂಭವಾಗಿದ್ದು ಜನರಿಗೆ ಮಾತ್ರ ಅಲ್ಲ ಕಾಡಲ್ಲಿ ಇರುವ ಪ್ರಾಣಿಗಳಿಗೂ ಖುಷಿ ಆಗಿದೆ. ಯಾಕಂದ್ರೆ ನೀರು ಇಲ್ಲದೆ ಕರ್ನಾಟಕದಲ್ಲಿ ಕಾಡು ಪ್ರಾಣಿಗಳಿಗೆ ಕೂಡ ಸಾಕಷ್ಟು ಸಮಸ್ಯೆ ಆಗಿತ್ತು. ಮುಂದಿನ ಕೆಲವೇ ದಿನಗಳಲ್ಲಿ ಅಂದ್ರೆ ಮೇ 31ಕ್ಕೆ ಕರ್ನಾಟಕಕ್ಕೆ ಮಾನ್ಸೂನ್ ಮಾರುತಗಳು ಎಂಟ್ರಿ ಕೊಡುವ ನಿರೀಕ್ಷೆ ಇದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ.
2024ರಲ್ಲಿ ಕೈಕೊಟ್ಟಿದ್ದ ಮುಂಗಾರು ಮಳೆ!
2024ರಲ್ಲಿ ಭರ್ಜರಿ ಮುಂಗಾರು ಮಳೆ ಬರಲಿದೆ ಎಂದು ಈಗಾಗಲೇ ಹವಾಮಾನ ತಜ್ಞರು ಮಾಹಿತಿ ನೀಡಿದ್ದರು. ಆ ಮಾಹಿತಿ ನಿಜವಾಗುತ್ತಿದ್ದು ಮೇ 31ಕ್ಕೆ ಮುಂಗಾರು ಮಳೆ ಮಾರುತಗಳು ಕೇರಳಕ್ಕೆ ಎಂಟ್ರಿ ಕೊಡಲಿವೆ. ಮೇ 31ರಿಂದ ಕೇರಳ ರಾಜ್ಯದಲ್ಲಿ ಮುಂಗಾರು ಮಾರುತಗಳು ಭರ್ಜರಿಯಾಗಿ ಸದ್ದು ಮಾಡಲಿವೆ. ಆ ನಂತರ ಕರ್ನಾಟಕದ ಕಡೆಗೆ ಮಾನ್ಸೂನ್ ಅಂದ್ರೆ ಮುಂಗಾರು ಮಳೆ ಸುರಿಸುವ ಮೋಡಗಳು ಬರಲಿವೆಯಂತೆ. ಈ ಮೂಲಕ ರೈತರು ಉತ್ತಮವಾಗಿ ಬೆಳೆ ಬೆಳೆಯುವುದು ಕೂಡ ಇದರಿಂದ ಸಾಧ್ಯವಾಗಲಿದೆ ಅಲ್ಲದೆ ಈಗಾಗಲೇ ಕೃಷಿಗೆ ಬೇಕಾದ ತಯಾರಿ ಮಾಡಿಕೊಂಡಿದ್ದಾರೆ ಕನ್ನಡ ನಾಡಿನ ಕೃಷಿಕರು.
ಮರಗಳ ಕೆಳಗೆ ನಿಂತರೆ ಹುಷಾರ್!
ಮಳೆ ಜೋರಾಗಿ ಬರುವಾಗ ಮರಗಳೇ ನಿಮಗೆ ಮೊದಲ ಶತ್ರು ಆಗಿರುತ್ತವೆ. ಯಾಕಂದ್ರೆ ಈ ರೀತಿ ಭಾರಿ ಜೋರಾಗಿ ಮಳೆ ಬಂದು ಗಾಳಿ ಬೀಸುವಾಗ ಯಾವ ಸಮಯದಲ್ಲಿ ಬೇಕಾದರೂ ಮರ ಬೀಳಬಹುದು. ಹೀಗಾಗಿ ಮಳೆ ಬರುವಾಗ ಯಾವುದೇ ಕಾರಣಕ್ಕೂ ಮರಗಳ ಕೆಳಗಡೆ, ನಿಲ್ಲುವುದಕ್ಕೆ ಹೋಗಬೇಡಿ. ಸಾಧ್ಯವಾದಷ್ಟೂ ಮರಗಳಿಂದ ದೂರವೇ ಇರಿ. ಹತ್ತಿರ ಇರುವ ಬಸ್ ನಿಲ್ದಾಣದಲ್ಲಿ ಅಥವಾ ಕಟ್ಟಡಗಳಲ್ಲಿ ಆಶ್ರಯ ಪಡೆದರೆ ಉತ್ತಮ.
ಸಿಡಿಲು ಬಡಿಯುವುದು ಎಚ್ಚರ.. ಎಚ್ಚರ..!
ಮಳೆ ಬರುವಾಗ ನೀವು ಗಾಡಿ ಓಡಿಸುತ್ತಿದ್ದರೆ, ತಕ್ಷಣ ಗಾಡಿ ನಿಲ್ಲಿಸಿ. ಸೂಕ್ತ ಪ್ರದೇಶದಲ್ಲಿ ಆ ತಕ್ಷಣವೇ ಆಶ್ರಯ ಪಡೆಯಿರಿ. ಅಲ್ಲದೆ ಯಾವುದೇ ಕಾರಣಕ್ಕೂ ಖಾಲಿ ಜಾಗ ಹಾಗೂ ಎತ್ತರ ಇರುವ ಪ್ರದೇಶದಲ್ಲಿ ನಿಲ್ಲಬೇಡಿ. ಇಂತಹ ಜಾಗದಲ್ಲಿ ಸಿಡಿಲು ಬಡಿಯುವ ಸಾಧ್ಯತೆ ಹೆಚ್ಚು ಅಂತಾ ಹೇಳಲಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಕಟ್ಟಡಗಳು ಇರುವ ಕಡೆ ನಿಂತುಕೊಳ್ಳಿ ಆಗ ನೀವು ಸುರಕ್ಷಿತವಾಗಿ ಇರಬಹುದು.
ಬೆಂಗಳೂರು ಫುಲ್ ಕೂಲ್.. ಕೂಲ್..!
ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಭಾರಿ ಮಳೆ ಬೀಳುತ್ತಿದ್ದು, ನಾಳೆಯಿಂದ ಶುಕ್ರವಾರದ ತನಕ ಭಾರಿ ಮಳೆ ಆಗುತ್ತೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಅಲ್ಲದೆ, ಬೆಂಗಳೂರಿನ ಹಲವು ಏರಿಯಾಗೆ ಈಗಾಗಲೇ ಅಲರ್ಟ್ ನೀಡಲಾಗಿದೆ. ಭಾರಿ ಮಳೆಯು ಬೀಳುವ ಮುನ್ಸೂಚನೆ ಇದ್ದು, ಹವಾಮಾನ ವೈಪರಿತ್ಯದ ಪರಿಣಾಮ ಬೆಂಗಳೂರಿನ ವಾತಾವರಣ ಕೂಲ್ ಕೂಲ್ ಆಗ್ತಿದೆ. ಹೀಗಾಗಿ ಬಿಸಿಲಿನಿಂದ ಬೆಂದು ಹೋಗಿದ್ದ ಜನರಿಗೆ ಈಗ ಮಳೆ ಆಗಮನದ ನಂತರ ಒಂದಷ್ಟು ಹಿತ ಎನಿಸುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರು ಮತ್ತೆ ನ್ಯಾಚ್ಯುರಲ್ ಎಸಿ ಸಿಟಿ ಆಗಿ ಬದಲಾಗಿದೆ. ಮುಂದಿನ ದಿನಗಳಲ್ಲಿ, ವಾತಾವರಣ ಮತ್ತಷ್ಟು ಕೂಲ್ ಕೂಲ್ ಆಗುವ ನಿರೀಕ್ಷೆ ಇದೆ.
ಕರ್ನಾಟಕದ ಡ್ಯಾಂಗಳ ನೀರಿನ ಮಟ್ಟ
1) ಕೆಆರ್‌ಎಸ್ ಜಲಾಶಯ: 49.45 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್ ಡ್ಯಾಂ ಇದೀಗ 12.27 ಟಿಎಂಸಿ ನೀರು ಸಂಗ್ರಹ ಹೊಂದಿದೆ. ಹಾಗೇ ಕೆಆರ್‌ಎಸ್ ಜಲಾಶಯಕ್ಕೆ 2,893 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಈ ಸಮಯಕ್ಕೆ ಕೆಆರ್‌ಎಸ್ ಡ್ಯಾಂನಲ್ಲಿ ಭರ್ತಿ 11.13 ಟಿಎಂಸಿ ನೀರು ಸಂಗ್ರಹ ಆಗಿತ್ತು. ಇದೀಗ 537 ಕ್ಯುಸೆಕ್ ನೀರನ್ನು KRS ಡ್ಯಾಂನಿಂದ ಹೊರಗೆ ಬಿಡಲಾಗುತ್ತಿದೆ.
2) ಕಬಿನಿ ಜಲಾಶಯ: ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಬಿನಿ ಡ್ಯಾಂ ಕರ್ನಾಟಕದ ಪ್ರಮುಖ ಡ್ಯಾಂ ಪೈಕಿ ಒಂದಾಗಿದೆ. ಈ ಡ್ಯಾಂನಲ್ಲಿ 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹ ಮಾಡಬಹುದು. ಆದರೆ ಈಗ ಕೇವಲ 7.55 ಟಿಎಂಸಿ ನೀರು ಸಂಗ್ರಹ ಇದ್ದು, 1034 ಕ್ಯುಸೆಕ್ ನೀರು ಒಳಗೆ ಹರಿದು ಬರುತ್ತಿದೆ. ಹೀಗೆ ಭಾರಿ ಮಳೆಯ ಹಿನ್ನೆಲೆ ಮೈಸೂರಿನ ಈ ಜಲಾಶಯಕ್ಕೆ ಭಾರಿ ನೀರು ಬರುತ್ತಿದ್ದು, 300 ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.
3) ಹೇಮಾವತಿ ಡ್ಯಾಂ: ಕಾವೇರಿ ಉಪನದಿ ಹೇಮಾವತಿಗೆ ಕಟ್ಟಿದ ಡ್ಯಾಂ ಹೇಮಾವತಿ ಜಲಾಶಯ. ಇಲ್ಲಿ 37.10 ಟಿಎಂಸಿ ಸಾಮರ್ಥ್ಯ ಇದ್ದು, ಬರದ ಕಾರಣಕ್ಕೆ ಹೇಮಾವತಿ ಜಲಾಶಯ ಬರಿದಾಗುತ್ತಿದೆ. ಇದೀಗ 9.83 ಟಿಎಂಸಿ ಬಾಕಿ ಉಳಿದಿದೆ. ಆದರೆ ಕಳೆದ ವರ್ಷ ಇದೇ ವೇಳೆಗೆ ಬರೋಬ್ಬರಿ 17.17 ಟಿಎಂಸಿ ನೀರು ಹೇಮಾವತಿ ಡ್ಯಾಂನಲ್ಲಿ ಸಂಗ್ರಹ ಆಗಿತ್ತು. 769 ಕ್ಯುಸೆಕ್ ಒಳಹರಿವು ಇದ್ದು, 250 ಕ್ಯುಸೆಕ್ ಹೊರಗೆ ಬಿಡಲಾಗುತ್ತಿದೆ.
4) ತುಂಗಭದ್ರಾ ಜಲಾಶಯ: ತುಂಗಭದ್ರಾ ಡ್ಯಾಂನಲ್ಲಿ ನೀರೆ ಇಲ್ಲ, ಹೀಗಾಗಿ ಡೆಡ್ ಸ್ಟೋರೆಜ್‌ಗೆ ಡ್ಯಾಂ ತಲುಪಿದೆ. ಗರಿಷ್ಠ 105.79 ಟಿಎಂಸಿ ಸಾಮರ್ಥ್ಯ ಇರುವ ತುಂಗಭದ್ರಾ ಡ್ಯಾಂನಲ್ಲಿ ಕೇವಲ 3.35 ಟಿಎಂಸಿ ನೀರು ಸಂಗ್ರಹ ಉಳಿದಿದೆ. ಕಳೆದ ವರ್ಷ 4.30 ಟಿಎಂಸಿ ನೀರು ಸಂಗ್ರಹ ಇತ್ತು ಈ ವರ್ಷ ಜಲಾಶಯದಲ್ಲಿ ನೀರು ಡೆಡ್ ಸ್ಟೋರೇಜ್ ಹಂತ ತಲುಪಿದ್ದು, ಒಳಹರಿವು ನಿಂತು ಹೋಗಿದೆ.
5) ಆಲಮಟ್ಟಿ ಡ್ಯಾಂ: ಅತಿದೊಡ್ಡ ಡ್ಯಾಂಗಳ ಪೈಕಿ ಆಲಮಟ್ಟಿ ಕೂಡ ಒಂದಾಗಿದೆ. ಆದರೆ ಆಲಮಟ್ಟಿ ಕೂಡ ಮಳೆ ಇಲ್ಲದೆ ಬರಿದಾಗಿದ್ದು ಇಲ್ಲಿಗೆ ಮಹಾರಾಷ್ಟ್ರದಿಂದ ನೀರು ಬರಬೇಕಿದೆ. ಜಲಾಶಯದ ಒಟ್ಟು ಸಾಮರ್ಥ್ಯ 123.08 ಟಿಎಂಸಿ ಆಗಿದ್ರೂ 22.16 ಟಿಎಂಸಿ ನೀರು ಬಾಕಿ ಉಳಿದಿದೆ. ಕಳೆದ ವರ್ಷ ಈ ವೇಳೆಗೆ 21.90 ಟಿಎಂಸಿ ನೀರು ಆಲಮಟ್ಟಿ ಜಲಾಶಯದಲ್ಲಿ ಇತ್ತು. ಜಲಾಶಯದಿಂದ ಒಟ್ಟಾರೆ 3,530 ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದೆ.
ಈ ಜಿಲ್ಲೆಗಳಿಗೆ ಭಾರಿ ಮಳೆ!
ಇದೀಗ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕ ಸೇರಿದಂತೆ ಕರ್ನಾಟಕದ ಮಲೆನಾಡು ಭಾಗ ಮತ್ತು ಕರಾವಳಿ ಜಿಲ್ಲೆಗಳಿಗೆ ಭಾರಿ ಮಳೆ ಸುರಿಯಲಿದೆ. ಆ ಪ್ರಕಾರ ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ & ಯಾದಗಿರಿ ಜಿಲ್ಲೆಗಳು ಸಾಮಾನ್ಯ ಮಳೆ ಪಡೆಯಲಿವೆ. ಹಾಗೇ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ & ಬೆಂಗಳೂರು ನಗರ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದ್ದು, ಗುಡುಗು ಸಹಿತ ಭಾರಿ ಮಳೆ ಸುರಿಯಲಿದೆ ಎಂದು ಎಚ್ಚರಿಸಲಾಗಿದೆ. ಅದರಲ್ಲೂ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದ ಬೋರ್‌ಗಳಲ್ಲಿ ನೀರು ಖಾಲಿ!
ಅಂತರ್ಜಲ ಕುಸಿತ ದೊಡ್ಡ ಸಮಸ್ಯೆ ತಂದೊಡ್ಡಿದೆ, ಕರ್ನಾಟಕದ ಬಹುತೇಕ ಬೋರ್‌ಗಳಲ್ಲಿ ನೀರು ಖಾಲಿ ಆಗಿದೆ. ಅಂತರ್ಜಲ ಕುಸಿಯುತ್ತಿರುವ ಕಾರಣಕ್ಕೆ ಜನರೀಗ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಆದರೆ ಕಳೆದ ಒಂದು ತಿಂಗಳಿಂದ ಮಳೆ ಬರುತ್ತಿದ್ದು ಕೆರೆ ಮತ್ತು ತೊರೆಗಳು ನಿಧಾನವಾಗಿ ತುಂಬುತ್ತಿವೆ. ಈ ನೀರಿಂದ ಇನ್ನೂ ಒಂದು ಇಲ್ಲ 2 ತಿಂಗಳು ದಿನದೂಡಬಹುದು. ಆದರೆ ಜೂನ್ & ಜುಲೈಗೆ ಒಳ್ಳೆಯ ಮಳೆಯು ಬೀಳುವ ನಿರೀಕ್ಷೆ ಇರುವುದು ಖುಷಿ ಕೊಡುತ್ತಿದೆ. ಹೀಗೆ ರೈತರು ಉತ್ತಮವಾಗಿ ಮುಂಗಾರು ಮಳೆ ಬರಲಿದೆ ಅಂತಾ ಕಾಯುತ್ತಿದ್ದಾರೆ. ಈಗಾಗಲೇ, ಕೇರಳಕ್ಕೆ ಮುಂಗಾರು ಮಾರುತಗಳು ಎಂಟ್ರಿ ಕೊಟ್ಟಿದ್ದು. ಇನ್ನೇನು ಕರ್ನಾಟಕದಲ್ಲಿ ಕೂಡ ಮುಂಗಾರು ಮಳೆ ಅಬ್ಬರಿಸಲಿದೆ.












Click it and Unblock the Notifications