ಕರ್ನಾಟಕದ ಪ್ರಪ್ರಥಮ 'ಜಾನುವಾರು ಹಾಸ್ಟೆಲ್' ಮಾರ್ಚ್ ಅಂತ್ಯಕ್ಕೆ ಕಾರ್ಯಾರಂಭ, ಅದರ ವಿಶೇಷತೆ, ಅನೂಕೂಲ ಬಗ್ಗೆ ಮಾಹಿತಿ ಇಲ್ಲಿದೆ
ಕರ್ನಾಟಕದಲ್ಲೇ ಇದೇ ಮೊದಲ ಬಾರಿಗೆ 'ಜಾನುವಾರುಗಳ ವಸತಿ ನಿಲಯ' ಸ್ಥಾಪನೆಯಾಗಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಇದೇ ಮಾರ್ಚ್ ಅಂತ್ಯಕ್ಕೆ ಆರಂಭವಾಗಲಿದೆ. ಅದರ ವಿಶೇಷತೆ, ಅನುದಾನ ತಿಳಿಯಿರಿ.
ಗದಗ, ಮಾರ್ಚ್ 14: ಕರ್ನಾಟಕದಲ್ಲೇ ಇದೇ ಮೊದಲ ಬಾರಿಗೆ 'ಜಾನುವಾರುಗಳ ವಸತಿ ನಿಲಯ' ಸ್ಥಾಪನೆಯಾಗಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಇದೇ ಮಾರ್ಚ್ ಅಂತ್ಯಕ್ಕೆ ಅಂತ್ಯಕ್ಕೆ ಆರಂಭವಾಗುವ ಸಾಧ್ಯತೆ ಇದೆ.
ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಕುರ್ತುಕೋಟಿಗೆ ಶಾಸಕ ಎಚ್.ಕೆ.ಪಾಟೀಲ್ ಅವರು ಹಲವು ದಿನಗಳ ಹಿಂದೆ ಭೇಟಿ ನೀಡಿದ್ದರು. ಬಳಿಕ ಅಲ್ಲಿ ಜಾನುವಾರುಗಳ ಬೃಹತ್ ವಸತಿ ನಿಲಯ (cattle hostal) ನಿರ್ಮಾಣಕ್ಕೆಂದು ಸ್ಥಳ ಗುರುತಿಸಿದ್ದರು. ಬರೋಬ್ಬರಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹಾಸ್ಟೆಲ್ ಕಟ್ಟಡ ನಿರ್ಮಾಣವು ಇದೇ ತಿಂಗಳ ಮಾರ್ಚ್ ಅಂತ್ಯಕ್ಕೆ ಕಾರ್ಯಾರಂಭಗೊಳ್ಳಲಿದೆ ಎಂದು ಶಾಸಕರು ಹೇಳಿದರು.

ಗದಗ ಜಿಲ್ಲೆಯಲ್ಲಿ ರೈತರಿಗೆ ಜಾನುವಾರು ಸಾಕಲು ಸ್ಥಳಾವಕಾಶವಿಲ್ಲದಿದ್ದರೆ ಅಂತವರಿಗೆ ಈ ವಸತಿ ನಿಲಯ ಸಹಾಯವಾಗಲಿದೆ. ತಮ್ಮ ಜಾನುವಾರುಗಳನ್ನು ಅಲ್ಲಿಯೇ ಬಿಟ್ಟು,ದೈನಂದಿನ ಆಧಾರದಲ್ಲಿ ಹಾಲು ನೀಡಬಹುದು. ಜಾನುವಾರುಗಳನ್ನು ತಮಗೆ ಯಾವಾಗ ಬೇಕೋ ಆಗ ತೆಗೆದುಕೊಂಡು ಹೋಗಬಹುದು. ಇನ್ನೂ ಮುಖ್ಯವಾಗಿ ರೋಗಗಳಿಂದ ಬಳಲುತ್ತಿರುವ ಜಾನುವಾರುಗಳನ್ನೂ ಅಲ್ಲಿಯೇ ಬಿಡಬಹುದು. ಸದ್ಯ ಕಟ್ಟಡದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ, ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಅದರ ಬಾಡಿಗೆಯ ನಿರ್ಧಾರಕ್ಕೆ ಶೀಘ್ರವೇ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.
ಜಾನುವಾರು ಹಾಸ್ಟೆಲ್ ವಿಶೇಷತೆ ಏನು?
ಗದಗದಂತಹ ಜಿಲ್ಲೆಗಳಲ್ಲಿ ಜಾನುವಾರು ಸಾಕಲು ಸಾಕಷ್ಟು ರೈತರಿಗೆ ಸ್ಥಳಾವಕಾಶವಿಲ್ಲ. ರೈತರು ಜಾನುವಾರುಗಳನ್ನು ಹೇಗೆ ಸಾಕುವುದು ಹೇಗೆ ಎಂದು ಕಲಿಯುವವರೆಗೆ ವಸತಿ ನಿಲಯದಲ್ಲೇ ಬಿಡಬಹುದು. ಸಾಮಾನ್ಯ ಜಾನುವಾರುಗಳಿಗೆ ಒಂದು ದೊಡ್ಡ ಶೆಡ್ ಮತ್ತು ರೋಗಗಳಿಂದ ಬಳಲುತ್ತಿರುವವರಿಗೆ ಪ್ರತ್ಯೇಕವಾದ ಹಾಸ್ಟೆಲ್‌ನಲ್ಲಿ ನಿರ್ಮಿಸಲಿದ್ದೇವೆ.

1 ಕೋಟಿ ರೂಪಾಯಿ ವೆಚ್ಚದ ಈ ಜಾನುವಾರು ವಸತಿ ನಿಲಯ ಒಟ್ಟು 120 ಜಾನುವಾರುಗಳಿಗೆ ಸ್ಥಳಾವಕಾಶ ನೀಡುವ ಸಾಮರ್ಥ್ಯ ಹೊದಿದೆ. ಅಲ್ಲದೇ ಸಣ್ಣ ಸಣ್ಣ ಕರುಗಳಿಗೆ ಪ್ರತ್ಯೇಕ ಸ್ಥಳ ಸ್ಥಾಪಿಸುವ ಜೊತೆಗೆ ಪಶು ಕ್ಲಿನಿಕ್, ಸ್ಟೋರ್ ರೂಂ, ಹಾಲಿನ ಕೇಂದ್ರ, ನೀರಿನ ಟ್ಯಾಂಕ್, ಸಗಣಿ ಸಂಗ್ರಹ ಕೇಂದ್ರ ಮತ್ತು ಮಿನಿ ನೀರಿನ ಟ್ಯಾಂಕ್ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ ಎಂದರು.
ಗ್ರಾಮಸ್ಥರೇ ಜಾನುವಾರು ವಸತಿ ನಿಲಯವನ್ನು ನೋಡಿಕೊಳ್ಳುತ್ತಾರೆ. ಗದಗ ಸಮೀಪದ ಸಂಭಾಪುರದ ರೈತ ರಾಚಪ್ಪ ಸೊನ್ನದ ಮಾತನಾಡಿ, ಗಂಡು ಮತ್ತು ಹೆಣ್ಣು ಮಕ್ಕಳ ಹಾಸ್ಟೆಲ್ ಬಗ್ಗೆ ಕೇಳಿದ್ದೇವೆ, ಆದರೆ ಗೋಶಾಲೆ ಬಗ್ಗೆ ಕೇಳುತ್ತಿರುವುದು ಇದೇ ಮೊದಲು. ನಿರ್ಮಾಣ ಹಂತದಲ್ಲಿರುವ ವಸತಿ ನಿಲಯವನ್ನು ನೋಡಲು ಸೋಮವಾರ ಕುರ್ತಕೋಟಿಗೆ ಹೋಗಿದ್ದೆವು. ಪಾಟೀಲ್ ಮಾತನಾಡಿ, 'ಈಗ ಗ್ರಾಮದ ಕೆಲ ಮನೆಗಳಲ್ಲಿ ಮಾತ್ರ ಜಾನುವಾರು ಸಾಕಣೆ ಕಾಣುತ್ತಿದೆ. ಮಾರ್ಚ್ ಅಂತ್ಯಕ್ಕೆ ಜಾನುವಾರು ಹಾಸ್ಟೆಲ್ ಆರಂಭವಾಗಲಿದೆ. ಹೊಸ ಉಪಕ್ರಮವು ಹೈನುಗಾರಿಕೆ ಚಟುವಟಿಕೆಗಳು, ಕೃಷಿ ಮತ್ತು ಜಾನುವಾರುಗಳ ನಿರ್ವಹಣೆಗೆ ಸಮಯವನ್ನು ಉಳಿಯುವ ಬಗ್ಗೆ ಅವರು ತಿಳಿಸಿದ್ದಾರೆ ಎಂದು ಹೇಳಿದರು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications