Karnataka Weather: ಕರಾವಳಿ-ಒಳನಾಡು ಜಿಲ್ಲೆಗಳಲ್ಲಿ ಹೆಚ್ಚುತ್ತಿದೆ ಉರಿ ಬಿಸಿಲು, ಹವಾಮಾನ ಮುನ್ಸೂಚನೆ
ಬೆಂಗಳೂರು: ಕರ್ನಾಟಕದಾದ್ಯಂತ ಸಂಪೂರ್ಣವಾಗಿ ಚಳಿ ಕಡಿಮೆ ಆಗಿಲ್ಲ. ರಾಜ್ಯದಲ್ಲ ಎಲ್ಲ ಜಿಲ್ಲೆಗಳಲ್ಲೂ ಶುಷ್ಕ ವಾತಾವರಣ ನಿರ್ಮಾಣವಾಗಿಲ್ಲ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಶುಷ್ಕ ವಾತಾವರಣ ಕಂಡು ಬಂದಿದೆ. ಜನರಿಗೆ ಸೆಕೆಯ ಅನುಭವವಾಗುತ್ತಿದೆ. ಬೆಂಗಳೂರು ನಗರ ಸೇರಿ ಕೆಲವು ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಬೆಳಗ್ಗೆ ಮಂಜಿನ ವಾತಾವರಣ ಹಾಗೂ ಚಳಿ ಕಂಡು ಬರುತ್ತಿದೆ. ಚಂಡಮಾರುತ ಪ್ರಸರಣ ಉಂಟಾಗಿರುವ ಕಾರಣ ಮುಂದಿನ 05 ದಿನ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಲಕ್ಷದ್ವೀಪ ಪ್ರದೇಶ ಹಾಗೂ ಕೇರಳ ಕರಾವಳಿಗೆ ಹೊಂದಿಕೊಂಡಂತೆ ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ಸರಾಸರಿ ಸಮುದ್ರಮಟ್ಟದಿಂದ 0.9 ಕಿಲೋ ಮೀಟರ್ ಎತ್ತರ ಮೇಲ್ಭಾಗದಲ್ಲಿ ವಾಯು ಚಂಡಮಾರುತ ಪರಿಚಲನೆ ಉಂಟಾಗಿದೆ. ಇನ್ನೂ ಕೊಮೋರಿಯನ್ ಪ್ರದೇಶ ಹಾಗೂ ನೆರೆ ಹೊರೆಗಳಲ್ಲಿ ಸರಸಾರಿ ಸಮುದ್ರಮಟ್ಟದಿಂದ 1.5 ಕಿಲೋ ಮೀಟರ್ ವರೆಗೆ ಇನ್ನೊಂದು ವಾಯು ಚಂಡಮಾರುತ ಪರಿಚಲನೆ ಮುಂದುವರಿದಿದೆ.

ಈ ವೈಪರೀತ್ಯ ಹಾಗೂ ವಾತಾವರಣದಲ್ಲಿ ಬದಲಾವಣೆಗಳು ಸಹ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ ಸೇರಿದಂತೆ ಇನ್ನಿತರ ಜಿಲ್ಲೆಗಳ ಕೆಲವೆಡೆ ಚಳಿ, ತಂಪು ಗಾಳಿ ಬೀಸಲು ಕಾರಣವಾಗಿದೆ. ಹಗಲು ಒಣಹವೆ ಕಂಡು ಬರುತ್ತಿದೆ. ಆದರೆ ಬೆಳಗ್ಗೆ ಮತ್ತು ರಾತ್ರಿ ಇನ್ನೂ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ಇದು ಮುಂದಿನ ಮೂರರಿಂದ ಐದು ದಿನ ಮುಂದುವರಿಯಲಿದೆ. ನಂತರ ಇಲ್ಲೂ ಸಹ ಬೆಳಗ್ಗೆ, ರಾತ್ರಿ ಚಳಿ ಮುಂದುವರಿಯಬಹುದೆಂಬ ಮುನ್ಸೂಚನೆ ಇದೆ.
ಕೆಲವೆಡೆ ಚಳಿ, ಕನಿಷ್ಠ ತಾಪಮಾನದಲ್ಲಿ ಇಳಿಕೆ
ಕಳೆದ 24 ಗಂಟೆಗಳಲ್ಲಿ ರಾಜ್ಯದ ಒಳನಾಡಿನ ಕೆಲವೆಡೆ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ -3.1 ಡಿಗ್ರಿ ಸೆಲ್ಸಿಯಸ್ ನಿಂದ -5.0 ಡಿ.ಸೆ.ವರೆಗೆ ಗಮನಾರ್ಹವಾಗಿ ಕಡಿಮೆಯಾಗಿದೆ. ಉತ್ತರ ಕರ್ನಾಟಕದ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ದಕ್ಷಿಣ ಕರ್ನಾಟಕದ ಕೆಲವು ಸ್ಥಳಗಳಲ್ಲಿ ವಾಡಿಕೆಗಿಂತ 1.6 ಡಿಗ್ರಿ ಸೆಲ್ಸಿಯಸ್ನಿಂದ -3.0 ಡಿ.ಸೆ ಕಡಿಮೆ ದಾಖಲಾಗಿದೆ. ಇದರೊಂದಿಗೆ ದಕ್ಷಿಣ ಒಳನಾಡು ಜಿಲ್ಲೆಗಳ ಹಲವೆಡೆ ಒಂದೆರಡು ಕಡೆಗಳಲ್ಲಿ ಮಂಜಿನ ವಾತವರಣ ದಾಖಲಾಗಿದೆ. ಅಲ್ಲಿ ಚಳಿ ಹೆಚ್ಚಿತ್ತು.
ಇನ್ನುಳಿದಂತೆ ರಾಜ್ಯದ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಹಾವೇರಿ, ಕೊಪ್ಪಳ, ಗದಗ, ದಾರವಾಡ, ಕಲಬುರಗಿ, ವಿಜಯನಗರ, ತುಮಕೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ಮಂಡ್ಯ, ಬಳ್ಳಾರಿ ಸೇರಿ ರಾಜ್ಯಾದ್ಯಂತ ಹಣ ಹವೆ ನಿರ್ಮಾಣವಾಗಿದೆ. ಗರಿಷ್ಠ ತಾಪಮಾನ ಇನ್ನಷ್ಟು ಹೆಚ್ಚಾಗಬಹುದು. ರಾಜ್ಯಾದ್ಯಂತ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಗರಿಷ್ಠ ತಾಪಮಾನದ ಜಿಲ್ಲೆಗಳಿವು
ಕಾರವಾರದಲ್ಲಿ ಅತ್ಯಧಿಕ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇನ್ನೂ ಹೊನ್ನಾವರ 36 ಡಿಗ್ರಿ ಸೆಲ್ಸಿಯಸ್, ಮಂಗಳೂರು ಏರ್‌ಪೋರ್ಟ್ 33.9 ಡಿಗ್ರಿ ಸೆಲ್ಸಿಯಸ್, ಕೊಪ್ಪಳ 34 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಕನ್ನಡ 33.7 ಡಿಗ್ರಿ ಸೆಲ್ಸಿಯಸ್, ಕಲಬುರಗಿ 32 ಡಿಗ್ರಿ ಸೆಲ್ಸಿಯಸ್, ಬೀದರ್ 28.6 ಡಿಗ್ರಿ ಸೆಲ್ಸಿಯಸ್, ವಿಜಯಪುರ, ರಾಯಚೂರು, ಬೆಳಗಾವಿ ವಿಮಾನ ನಿಲ್ದಾಣ ಮತ್ತು ಧಾರವಾಡ ಜಿಲ್ಲೆಗಳಲ್ಲಿ ತಲಾ 29. 5 ಡಿಗ್ರಿ ಸೆಲ್ಸಿಯಸ್, ಗದಗ, ಬಳ್ಳಾರಿ ಮತ್ತು ಹಾವೇರಿಯಲ್ಲಿ ತಲಾ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಗರಿಷ್ಠ ತಾಪಮಾನ ಹೆಚ್ಚಾಗುತ್ತಿದ್ದು, ಸೆಕೆ ಹಾಗೂ ಶಾಖದ ಅಲೆ ಮುನ್ಸೂಚನೆ ನೀಡಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ವರದಿಯು ತಿಳಿಸಿದೆ.












Click it and Unblock the Notifications