ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ: ಎಲ್ಲರ ಆಸೆ ತೀರಿಸಿದ ಕರ್ನಾಟಕದ ಮತದಾರ

By Manjunatha
|
Google Oneindia Kannada News

ಕರ್ನಾಟಕ ರಾಜಕೀಯವು ತುರುಸಿನ ಹಂತ ದಾಟಿ ಒಂದು ಸಮಾಧಾನದ ಹಂತ ತಲುಪಿದೆ. ಯಡಿಯೂರಪ್ಪ ಅವರು ರಾಜಿನಾಮೆ ಸಲ್ಲಿಸಿದ್ದು, ಜೆಡಿಎಸ್-ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ.

58 ಗಂಟೆಗಳ ಕಾಲ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರು ಇಂದು ರಾಜ್ಯಪಾಲರಿಗೆ ರಾಜಿನಾಮೆ ನೀಡಿದ್ದಾರೆ, ನಾಳೆ ಬಹುಷಃ ರಾಜ್ಯಪಾಲರು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟವನ್ನು ಸರ್ಕಾರ ರಚನೆಗೆ ಕರೆಯಬಹುದು.

ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾದ ಯಡಿಯೂರಪ್ಪ ಎಡವಿದ್ದು ಎಲ್ಲಿ?ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾದ ಯಡಿಯೂರಪ್ಪ ಎಡವಿದ್ದು ಎಲ್ಲಿ?

ಯಾವ ಪಕ್ಷಕ್ಕೂ ಬಹುಮತ ಬರದಿದ್ದಾಗ ಕರ್ನಾಟಕದ ಮತದಾರರು ವಿಧಾನಸಭೆಯನ್ನು ಅತಂತ್ರ ಮಾಡಿಬಿಟ್ಟರು ಎಂಬ ಮಾತುಗಳು ಕೇಳಿಬಂದಿತ್ತು. ಅದು ನಿಜವೂ ಹೌದು, ಆದರೆ ಅತಂತ್ರ ವಿಧಾನಸಭೆ ಸೃಷ್ಠಿಸುವ ಮೂಲಕ ಎಲ್ಲ ರಾಜಕೀಯ ಪಕ್ಷಗಳ ಆಸೆಯನ್ನೂ ಕರ್ನಾಟಕ ಮತದಾರರು ಪೂರೈಸಿದ್ದಾರೆ.

ಹೌದು, ಚುನಾವಣಾ ಪ್ರಚಾರ ಸಮಯದಲ್ಲಿ ಯಾವ ಯಾವ ಪಕ್ಷಗಳ ಮುಖಂಡರು ರಾಜ್ಯದ ಜನತೆಯಲ್ಲಿ ಏನು ಮನವಿ ಮಾಡಿದ್ದರೊ ಅದನ್ನು ಕರ್ನಾಟಕದ ಜನ ನೆರವೇರಿಸಿದ್ದಾರೆ. ಹೇಗೆ ಎನ್ನುತ್ತೀರಾ ಇಲ್ಲಿದೆ ನೋಡಿ ಅದರ ಪಟ್ಟಿ.

ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ

ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ

ಬಿಜೆಪಿ ಈ ಬಾರಿ ಕರ್ನಾಟಕ ಚುನಾವಣೆ ಎದುರಿಸಿದ್ದು 'ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ' ಧ್ಯೇಯ ವಾಕ್ಯದ ಮೂಲಕ. ಮೋದಿ ಅವರಂತೂ ಹೋದಲ್ಲೆಲ್ಲಾ ಇದನ್ನೇ ಹೇಳದ್ದರು ಅವರ ಮಾತಿನಂತೆ ಕರ್ನಾಟಕದ ಜನ ಸರ್ಕಾರವನ್ನು ಬದಲಿಸಿದ್ದಾರೆ. ಅತಿ ಹೆಚ್ಚು ಸ್ಥಾನ ನೀಡುವ ಮೂಲಕ ಬಿಜೆಪಿಯನ್ನೂ ಗೆಲ್ಲಿಸಿದ್ದಾರೆ.

ಯಡಿಯೂರಪ್ಪ ರಾಜಿನಾಮೆ ಬೆನ್ನಲ್ಲೇ ಟ್ವಿಟ್ಟರ್ ವಾರ್ ಆರಂಭಯಡಿಯೂರಪ್ಪ ರಾಜಿನಾಮೆ ಬೆನ್ನಲ್ಲೇ ಟ್ವಿಟ್ಟರ್ ವಾರ್ ಆರಂಭ

ಯಡಿಯೂರಪ್ಪ ಅವರ ಆಸೆಯೂ ಈಡೇರಿದೆ

ಯಡಿಯೂರಪ್ಪ ಅವರ ಆಸೆಯೂ ಈಡೇರಿದೆ

ಯಡಿಯೂರಪ್ಪ ಅವರ ಬಹುದಿನಗಳ ಕನಸು ಮುಖ್ಯಮಂತ್ರಿ ಆಗುವುದು, ಮತದಾನ ನಡೆಯುವ ಮೊದಲೇ ಅವರು ಪ್ರಮಾಣ ವಚನದ ಸಮಯವನ್ನೂ ನಿಗದಿಪಡಿಸಿಕೊಂಡಿದ್ದರು. ಅದರಂತೆ ಅವರು ಮುಖ್ಯಮಂತ್ರಿ ಸಹ ಆದರೂ, ಜನ ಅವರ ಕನಸನ್ನೂ ಈಡೇರಿಸಿದರು.

ಒಂದು ಬಾರಿ ಅಧಿಕಾರ ಬೇಡಿದ್ದ ಕುಮಾರಣ್ಣ

ಒಂದು ಬಾರಿ ಅಧಿಕಾರ ಬೇಡಿದ್ದ ಕುಮಾರಣ್ಣ

ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರ ಪ್ರಾರಂಭವಾದಾಗಿನಿಂದಲೂ ಕೇಳಿದ್ದು, ಒಂದೇ, 'ಒಂದು ಬಾರಿ ಅಧಿಕಾರ ಕೊಡಿ ಎಂದು, ಅವರ ಜಾಹೀರಾತುಗಳಲ್ಲಿಯೂ ಅದೇ ಇತ್ತು, ಅದರಂತೆ ಜನ ಈಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಅದರ ಮೂಲಕ ದೇವೇಗೌಡರ ಆಸೆಯನ್ನೂ ಈಡೇರಿಸುತ್ತಿದ್ದಾರೆ.

'ಕೋಮುವಾದಿ ಶಕ್ತಿಗೆ ಅಧಿಕಾರ ಬೇಡ'

'ಕೋಮುವಾದಿ ಶಕ್ತಿಗೆ ಅಧಿಕಾರ ಬೇಡ'

ಬಿಜೆಪಿಯವರ 'ಕಾಂಗ್ರೆಸ್‌ ಮುಕ್ತ ಭಾರತ'ಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ನವರು 'ಬಿಜೆಪಿ ಮುಕ್ತ ಕರ್ನಾಟಕ'ಮಾಡಿ ಎಂದು ಪ್ರಚಾರದಲ್ಲಿ ಕೇಳಿಕೊಂಡಿದ್ದರು, ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಿ ಎಂದೂ ಅವರು ಮನವಿ ಮಾಡಿಕೊಂಡಿದ್ದರು. ಅದರಂತೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಅಧಿಕಾರದಿಂದ ದೂರ ಉಳಿಯುವಂತೆ ಆಗಿದೆ. ಆ ಮೂಲಕ ಕಾಂಗ್ರೆಸ್‌ನವರ ಮನವಿಯನ್ನೂ ಜನ ನಡೆಸಿಕೊಟ್ಟಿದ್ದಾರೆ.

ಮೋದಿ ಹೇಳಿದ್ದೇಲ್ಲಾ ಮಾಡಿದ ಜನ

ಮೋದಿ ಹೇಳಿದ್ದೇಲ್ಲಾ ಮಾಡಿದ ಜನ

ಸಿದ್ದರಾಮಯ್ಯ ಅವರನ್ನು ಸೋಲಿಸಿ ತಕ್ಕ ಪಾಠ ಕಲಿಸಿ ಎಂದು ಮೋದಿ ಹೇಳಿದ್ದರು, ಅದರಂತೆ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರು ಸೋಲಿನ ರುಚಿ ನೋಡಬೇಕಾಯಿತು.

English summary
Karnataka Voters full fills all parties requests. They give opportunity to BS Yeddyurappa to become CM, they changed the government, defeat Siddaramaiah, made Kumaraswamy as CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X