ಒಕ್ಕಲಿಗರ ಸಂಘ: ಚುನಾವಣಾ ಫಲಿತಾಂಶ ಪ್ರಕಟ
ಬೆಂಗಳೂರು, ಜ.10- ಐದು ದಿನಗಳ ಹಿಂದೆ ನಡೆದಿದ್ದ ಪ್ರತಿಷ್ಠಿತ ಒಕ್ಕಲಿಗರ ಸಂಘದ ಚುನಾವಣಾ ಫಲಿತಾಂಶ ತಡವಾಗಿ ಹೊರಬಿದ್ದಿದೆ.
ಚುನಾವಣೆ ನಂತರ ಮತ ಎಣಿಕೆಯಲ್ಲಿ ಅಕ್ರಮಗಳು ನಡೆದಿವೆಯೆಂದು ಫಲಿತಾಂಶ ಪ್ರಕಟಣೆ ವಿಳಂಬವಾಗಿತ್ತು. ಮರುಚುನಾವಣೆಯೂ ನಡಯಬೇಕು ಎಂಬ ಮಾತೂ ಕೇಳಿಬಂದಿತ್ತು. ಆದರೆ ಅದಕ್ಕೆಲ್ಲಾ ಕೊನೆಹಾಡಿ ಇಂದು ಬೆಳಗ್ಗೆ ವೇಳೆಗೆ ಫಲಿತಾಂಶ ಪ್ರಕಟಿಸಲಾಗಿದೆ.

ಸಂಘದ ಹಾಲಿ ಅಧ್ಯಕ್ಷ, ವಿವಾದಿತ ಬಿ ಕೆಂಚಪ್ಪಗೌಡ ಹೀನಾಯ ಸೋಲುಕಂಡಿದ್ದಾರೆ. ವಿರೋಧಿ ಪಾಳಯದ ಪ್ರೊ. ಅಪ್ಪಾಜಿಗೌಡ ಸಿಂಡಿಕೇಟ್ ಭಾರಿ ಜಯ ದಾಖಲಿಸಿದೆ. ಪ್ರೊ. ಅಪ್ಪಾಜಿಗೌಡ ಅವರು ಸಂಘದ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.
ಪ್ರೊ. ಅಪ್ಪಾಜಿಗೌಡ ಅವರು 50 ಸಾವಿರಕ್ಕೂ ಅಧಿಕ ಮತಗಳನ್ನು ಗಳಿಸಿ, ಮಾಜಿ ಅಧ್ಯಕ್ಷ ಕೆಂಚಪ್ಪಗೌಡರನ್ನು ಬಗ್ಗುಬಡಿದಿದ್ದಾರೆ. ಕೆಂಚಪ್ಪಗೌಡ ಕೇವಲ 20 ಸಾವಿರ ಮತಗಳನ್ನು ಪಡೆದಿದ್ದಾರೆ. ನೂತನ ನಿರ್ದೇಶಕರುಗಳಾಗಿ ಆಯ್ಕೆಯಾದ ಇತರರೂ ಸಹ ತಲಾ 40 ಸಾವಿರಕ್ಕಿಂತ ಹೆಚ್ಚು ಮತಗಳಿಸಿದ್ದಾರೆ. ಕೆಂಚಪ್ಪಗೌಡ 21ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಸಂಘವು ರಾಜ್ಯಾದ್ಯಂತ 3,15,000 ಮಂದಿ ಮತದಾರರನ್ನು ಹೊಂದಿದೆ.
ಗೆಲುವಿನ ನಗೆ ಬೀರಿರುವ ಪ್ರೊ. ಅಪ್ಪಾಜಿಗೌಡ ಅವರು ಇದು ನ್ಯಾಯ, ಪ್ರಮಾಣಿಕತೆಗೆ ಸಂದ ಜಯ ಎಂದಿದ್ದಾರೆ. ಸುಮಾರು 2,000 ಕೋಟಿ ರೂ. ಪ್ರಮಾಣದ ಸಂಘದ ಆಸ್ತಿಯನ್ನು ನುಂಗಿ ನೀರುಕುಡಿದಿರುವ ಸಂಘದ ಮಾಜಿ ಅಧ್ಯಕ್ಷ ಕೆಂಚಪ್ಪಗೌಡ ಅವರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಸಂಘದಲ್ಲಿ ಅವರು ಎಸಗಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲಾಗುವುದು. ಕಬಳಿಸಿರುವ ಅಮೂಲ್ಯ ಆಸ್ತಿಯನ್ನು ಸಂಘದ ಸ್ವಾಧೀನಕ್ಕೆ ಪಡೆಯಲು ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಪ್ರೊ. ಅಪ್ಪಾಜಿಗೌಡ ಅವರು ಹೇಳಿದ್ದಾರೆ.
ಒಕ್ಕಲಿಗ ಸಂಘದ ಚುನಾವಣೆ ಫಲಿತಾಂಶ ರಾತ್ರೋರಾತ್ರಿ ಪ್ರಕಟವಾಗಿದೆ. ಬಿ. ಕೆಂಚಪ್ಪಗೌಡ ಬಣಕ್ಕೆ ಭಾರೀ ಮುಖಭಂಗವಾಗಿದೆ.
ಸಾಕಷ್ಟು ಕುತೂಹಲ ಮೂಡಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯ ಮತ ಎಣಿಕೆ ಕಾರ್ಯ ಅಂತೂ ಮುಗಿದಿದೆ. ಬೆಂಗಳೂರಿನ ಬನಶಂಕರಿಯಲ್ಲಿರುವ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಮತ ಎಣಿಕೆ ಕಾರ್ಯ ಪೂರ್ಣಗೊಂಡು ನಿನ್ನೆ ತಡ ರಾತ್ರಿ ಪಲಿತಾಂಶ ಪ್ರಕಟಿಸಿಲಾಗಿದೆ. ಇದರಲ್ಲಿ ಡಾ. ಅಪ್ಪಾಜಿಗೌಡರ ಭಣ ಭರ್ಜರಿ ಜಯಗಳಿಸಿವ ಮೂಲಕ ಗೆಲುವಿನ ನಗೆ ಬೀರಿದ್ದರೆ, ಮಾಜಿ ಅಧ್ಯಕ್ಷ ಕೆಂಚ್ಚಪ್ಪಗೌಡರು ಪರಾಭವಗೊಂಡು ಮುಖಭಂಗ ಅನುಭವಿಸಿದ್ದಾರೆ
ರಾಜ್ಯದ 11 ಜಿಲ್ಲೆಗಳ 34 ಸದಸ್ಯ ಸ್ಥಾನಗಳಿಗೆ 354 ಮಂದಿ ಸ್ಪರ್ಧಿಸಿದ್ದರು. ಇದರಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಗಳಿಂದ 15 ಸದಸ್ಯರ ಸ್ಥಾನಗಳಿಗೆ 140 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಒಟ್ಟಾರೆ ಒಕ್ಕಲಿಗ ಸಂಘದಲ್ಲಿ ಐದು ಸಿಂಡೀಕೇಟ್ ಗಳಿದ್ದು. ಅಧಿಕಾರ ಹಿಡಿಯಲು 18 ನಿರ್ದೇಶಕ ಬಲ ಬೇಕಿದ್ದು. ಯಾರು ಸಂಘದ ಅಧಿಕಾರ ಹಿಡಿಲಿದ್ದಾರೆಂಬುದು ಕುತೂಹಲ ಮುಡಿಸಿದೆ.
ಗೆಲಲುವಿನ ನಗೆ ಕಂಡವರು
ಅಭ್ಯರ್ಥಿ / ಪಡದ ಮತ
ಅಪ್ಪಾಜಿ ಗೌಡ - 51,276
ಪ್ರೊ. ನಾಗರಾಜ್ - 40,803
ಹುಲ್ಲೂರು ಮಂಜುನಾಥ್ - 43,555
ಆ. ದೇವೇಗೌಡ - 35,181
ಜಯ ಮುತ್ತು - 32,154
ಪ್ರಸಾದ್ - 26,576
ಅಶ್ವತ್ - 28,762
ಜಾಲಹಳ್ಳಿ ರವಿ - 27,500
ಎಂ ಎ ಆನಂದ್ - 29,834
ಕೃಷ್ಣಮೂರ್ತಿ - 31,501
ಡಾ. ನಿಸರ್ಗ - 26,035
ಪ್ರೊ ಕೆ ಮಲಯ್ಯ - 26,062
ಕಾಳೆಗೌಡ - 25,580
ಹಚ್ಚೇಗೌಡ ಶಿವಣ್ಣ - 26,120
ಪಾಳ್ಯದ ಮುನೇಗೌಡ - 25,260
ಮಾಜಿ ಅಧ್ಯಕ್ಷಗೆ ಸೋಲು
ಕೆಂಚಪ್ಪಗೌಡ - 20,191












Click it and Unblock the Notifications