KSRTC: ಹಬ್ಬಗಳ ವೇಳೆ ವಿಶೇಷ ಬಸ್‌ಗಳ ದರ ಏರಿಕೆ : ಸಾರಿಗೆ ಇಲಾಖೆ ಸ್ಪಷ್ಟನೆ

ಬೆಂಗಳೂರು, ಸೆಪ್ಟಂಬರ್ 29: ಕರ್ನಾಟಕ ಸಾರಿಗೆ ಇಲಾಖೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವತಿಯಿಂದ ದಸರಾ ಸೇರಿದಂತೆ ವಿವಿಧ ಹಬ್ಬಗಳಿಗೆ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತದೆ. ಹಬ್ಬಗಳ ವಿಶೇಷ ಸಂದರ್ಭದಲ್ಲಿ ವಿಶೇಷ ಪ್ರಯಾಣ ದರ ಆಕರಣೆ ಕಳೆದ 20 ವರುಷಗಳಿಂದ ನಿರ್ದಿಷ್ಟ ದಿವಸಗಳವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ವಿಶೇಷ ಬಸ್‌ಗಳ ಪ್ರಯಾಣ ದರ ಹೆಚ್ಚಿಸುವ ಅವಕಾಶ ಇದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ ವಿಶೇಷ ದಿನ/ಜಾತ್ರಾ/ಹಬ್ಬ ಹರಿದಿನಗಳ ರಜೆ ದಿನಗಳಂದು ಆಚರಣೆ ಮಾಡುವ ಕರಾರಸಾ ನಿಗಮದ ವಿಶೇಷ ಸಾರಿಗೆಗಳಿಗೆ ಪ್ರಯಾಣದರಗಳನ್ನು ಹೆಚ್ಚಿಸಲು ಅವಕಾಶವಿರುತ್ತದೆ. ಸದರಿ ದಿನಗಳಂದು ವಿಶೇಷ ಸಾರಿಗೆಗಳನ್ನು ಏಕಮುಖ ಸಾರಿಗೆಗಳಾಗಿ(One way) ಆಚರಣೆ ಮಾಡಿ ವಾಪಾಸ್ಸು (Return) ಬರುವಾಗ ಖಾಲಿ/ಕಡಿಮೆ ಪ್ರಯಾಣಿಕರಿಂದ ಕಾರ್ಯಾಚರಣೆ ಮಾಡಬೇಕಾಗಿರುತ್ತದೆ. ಅದ್ದರಿಂದ ಮತ್ತು ವಿಶೇಷ ವಾಹನಗಳನ್ನು ಇತರೇ ವಿಭಾಗಗಳಿಂದ ಪಡೆದು ಈ ಮಾರ್ಗಗಳಲ್ಲಿ ಆಚರಣೆ ಮಾಡುವುದರಿಂದ ಕಾರ್ಯಾಚರಣೆ ವೆಚ್ಚ ಹೆಚ್ಚಾಗಿರುವ ಕಾರಣ ಪ್ರಯಾಣ ದರಗಳನ್ನು ಹೆಚ್ಚಿಸಲಾಗುತ್ತಿದೆ.

Karnataka Trasnport Dept Clarify Over KSRTC Special Dasara Buses Fare Increased

ಅದರಂತೆ ಪ್ರತಿ ವರ್ಷ ನಡೆಯುವ ದಸರಾ ಹಬ್ಬದ ಅವಧಿಯಲ್ಲಿ ಬೆಂಗಳೂರು-ಮೈಸೂರು ಮಾರ್ಗದ ವೇಗದೂತ, ತಡೆರಹಿತ ಹಾಗೂ ಪ್ರತಿಷ್ಠಿತ ಸಾರಿಗೆಗಳಲ್ಲಿ ಕ್ರಮವಾಗಿ 20 ರೂಪಾಯಿಯಿಂದ 30ರೂಪಾಯಿ ಅನ್ನು ಹೆಚ್ಚಿಸಿ ವಿಶೇಷ ಪ್ರಯಾಣ ದರಗಳನ್ನು ಆಕರಣೆ ಮಾಡಲಾಗುತ್ತಿದೆ.

ಪ್ರತಿ ವರ್ಷದಂತೆ ಈ ವರ್ಷವು 2025ರ ದಸರಾ ಅವಧಿಯಲ್ಲಿ ದಿನಾಂಕ 26/09/2025 ರಿಂದ 08/10/2025 ರವರೆಗೆ ಬೆಂಗಳೂರು-ಮೈಸೂರು ಮಾರ್ಗದ ವೇಗದೂತ, ತಡೆರಹಿತ ಹಾಗೂ ಪ್ರತಿಷ್ಠಿತ ಸಾರಿಗೆಗಳಲ್ಲಿ ಕ್ರಮವಾಗಿ ರೂ.20/- ಹಾಗೂ ರೂ.30/- ನ್ನು ಹೆಚ್ಚಿಸಿ ವಿಶೇಷ ಪ್ರಯಾಣ ದರ ಆಕರಣೆಗಳನ್ನು ಜಾರಿ ಮಾಡಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+