Rain Alert: ಮಳೆ.. ಮಳೆ.. ತುಂಬಿ ಹರಿಯುತ್ತಿರುವ ನದಿಗಳು!
ಮಳೆ.. ಮಳೆ.. ಕರ್ನಾಟಕದ ಪ್ರತಿಯೊಂದು ಜಿಲ್ಲೆಗೂ ಭರ್ಜರಿ ಮಳೆ ಬೀಳುತ್ತಿದೆ. ಇನ್ನು ಒಣಗಿ ಹೋಗಿದ್ದ ನೆಲ ಈಗ ಮತ್ತೆ ಜೀವ ಕಳೆ ತುಂಬಿಕೊಂಡಿದ್ದು, ಎಲ್ಲೆಲ್ಲೂ ಮಳೆ ಅಬ್ಬರ ಜೋರಾಗಿದೆ. ಭರ್ಜರಿ ಮಳೆ ಬೀಳುತ್ತಿರುವ ಕಾರಣಕ್ಕೆ ನದಿಗಳು ಕೂಡ ತುಂಬಿ ತುಳುಕುತ್ತಿವೆ. ಅದರಲ್ಲೂ ಮಲೆನಾಡು ಭಾಗ ಚಿಕ್ಕಮಗಳೂರಿನಲ್ಲಿ ನದಿಗಳು & ಹಳ್ಳಗಳು ಉಕ್ಕಿ ಹರಿದಿವೆ.
ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಲೆನಾಡು ಭಾಗ, ಕರ್ನಾಟಕದ ಕರಾವಳಿ ಪ್ರದೇಶ ಸೇರಿದಂತೆ ಇಡೀ ಕರ್ನಾಟಕದಲ್ಲಿ ಮಳೆ ಅಬ್ಬರಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ನಿನ್ನೆ ರಾತ್ರಿ ಪೂರ್ತಿ ಸುರಿದ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಚಿಕ್ಕಮಗಳೂರು ತಾಲೂಕಿನ ಕಳಸಾಪುರ, ಬೆಳವಾಡಿ, ಕೆ.ಬಿ. ಹಾಳ್, ಈಶ್ವರ ಹಳ್ಳಿ ಭಾಗದಲ್ಲಿ ಮಳೆ ಚಚ್ಚಿದೆ. ಈ ಮೂಲಕ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಆಗುತ್ತಿದೆ. ಮಳೆಯಿಂದ ತುಂಗ ಹಾಗೂ ಭದ್ರಾ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಆಗಿದ್ದು ಕುದುರೆಮುಖ ಪರ್ವತ ಶ್ರೇಣಿಯಲ್ಲಿ ಭಾರಿ ಮಳೆಯಾಗಿದೆ. ಮಳೆ ಜೊತೆ ಅವಾಂತರಗಳು ಕೂಡ ಸೃಷ್ಟಿ ಆಗಿದೆ.

ಹೆದ್ದಾರಿ ರಸ್ತೆ ಸಂಪರ್ಕ ಬಂದ್!
ಅಂದಹಾಗೆ ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ ಮುಂದುವರಿದ ಕಾರಣಕ್ಕೆ ಅವಾಂತರಗಳೂ ಸಂಭವಿಸಿವೆ. ಭಾರಿ ಮಳೆ ಮತ್ತು ಗಾಳಿಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರಗಳನ್ನ ತೆರವು ಮಾಡುವುದೇ ಸಮಸ್ಯೆ ಆಗುತ್ತಿದೆ. ಜೊತೆಗೆ ಮೇಲ್ಪಾಲ್, ಕೊಪ್ಪ, ಬಾಳೆಹೊನ್ನೂರು ರಸ್ತೆ ಸಂಪರ್ಕ ಕಡಿತವಾಗಿದ್ದು, ಪ್ರಯಾಣಿಕರು & ಸ್ಥಳೀಯ ಗ್ರಾಮಸ್ಥರು ಪರದಾಟ ಪಡ್ತಿದ್ದಾರೆ. ಇನ್ನು ಎನ್.ಆರ್. ಪುರ ತಾಲೂಕಿನ ಅರಳಿ ಕೊಪ್ಪ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ.
ವಿದ್ಯುತ್ ತಗುಲಿ ವ್ಯಕ್ತಿ ಸಾವು
ಹೀಗೆ ರಸ್ತೆಗೆ ಮರ ಬಿದ್ದ ಕಾರಣ ಶಾಲಾ & ಕಾಲೇಜಿಗೆ ವಿದ್ಯಾರ್ಥಿಗಳು ತೆರಳಲು ಮಾರ್ಗ ಬಂದ್ ಆಗಿದ್ದು, ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಅಲ್ಲದೆ ಬದಲಿ ಮಾರ್ಗದಲ್ಲಿ ಸುತ್ತಾಡಿ ಸಂಚಾರ ಮಾಡುವ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಎದುರಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನಲ್ಲಿ ಭೀಕರ ಮಳೆಯಿಂದ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಜಯಪುರ ಸಮೀಪದ ಗುಡ್ಡೇತೋಟದಲ್ಲಿ ಅಲ್ಯುಮಿನಿಯಂ ಏಣಿಗೆ ವಿದ್ಯುತ್ ತಂತಿಗೆ ತಗುಲಿ ವ್ಯಕ್ತಿ ಮೃತಪಟ್ಟಿದ್ದಾರೆ. ಹಲಸಿನ ಹಣ್ಣನ್ನು ಕುಯ್ಯಲು ಮರ ಹತ್ತುತ್ತಿರುವಾಗ ಈ ಘಟನೆ ಸಂಭವಿಸಿದೆ. ವಿಜಯಗೌಡ ಎಂಬುವವರು ಮೃತಪಟ್ಟಿದ್ದಾರೆ. ಸ್ಥಳೀಯರು ಮೆಸ್ಕಾಂಗೆ ಘಟನೆ ಬಗ್ಗೆ ಮಾಹಿತಿ ತಿಳಿಸಿದ್ದು, ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಗಾರು ಮಳೆಯೇ ಏನು ನಿನ್ನ...
ಮಳೆಗಳಲ್ಲೇ ಶ್ರೇಷ್ಠ ಮಳೆ ಅಂದ್ರೆ ಅದು ಮುಂಗಾರು ಮಳೆ. ಯಾಕಂದ್ರೆ ಮುಂಗಾರು ಮಳೆ ಇಡೀ ಭಾರತಕ್ಕೆ ನೀರು ಕೊಡುತ್ತದೆ. ಮುಂಗಾರು ಮಳೆ ಇಲ್ಲದೆ ಭಾರತೀಯರ ಬದುಕನ್ನೂ ಊಹೆ ಮಾಡಿಕೊಳ್ಳುವುದು ಕೂಡ ಕಷ್ಟ. ಹೀಗಾಗಿ ಮುಂಗಾರು ಮಳೆಯನ್ನು ಭಾರತೀಯರ ಬದುಕಿನ ಮಳೆ ಅಂತಾನು ಕರೆಯುತ್ತಾರೆ. ಭಾರತದಲ್ಲಿ ಕೃಷಿ ಚಟುವಟಿಕೆ ಆರಂಭ ಆಗುವುದು ಕೂಡ ಇದೇ ಮುಂಗಾರು ಮಳೆಯನ್ನು ನಂಬಿಕೊಂಡು. ಹೀಗಾಗಿ ಮುಂಗಾರು ಮಳೆ ಎಂಟ್ರಿ ಯಾವಾಗ ದೇವರೆ? ಅಂತಾ ಕನ್ನಡಿಗರು ಕಾಯುತ್ತಿದ್ದರು ಇದೀಗ ಭರ್ಜರಿ ಸುದ್ದಿ ಸಿಕ್ಕಿದ್ದು, ಜೂನ್ 7ಕ್ಕೆ ಕರ್ನಾಟಕ ರಾಜ್ಯಕ್ಕೆ ಮುಂಗಾರು ಮಳೆ ಎಂಟ್ರಿ ಕೊಡಲಿದೆಯಂತೆ.












Click it and Unblock the Notifications