ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ಮಾದರಿ ಉತ್ತರ ಪ್ರಕಟ
ಬೆಂಗಳೂರು, ಜೂನ್ 27 : ಜೂನ್-2018ರ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗೆ ಸಂಬಂಧಪಟ್ಟಂತೆ ಪ್ರಥಮ ಭಾಷೆ ಹಾಗೂ ಗಣಿತ ವಿಷಯಗಳ ಮಾದರಿ ಉತ್ತರ ಹಾಗೂ Scheme of Evaluation ಕುರಿತು ದಿನಾಂಕ: 27.06.2018ರಂದು ಮಂಡಳಿಯ ಅಂತರ್ಜಾಲದಲ್ಲಿ (www.kseeb.kar.nic.in) ಪ್ರಕಟಿಸಲಾಗಿದೆ.
ಪ್ರಕಟಿಸಿದ ಮೂರು ದಿನಗಳೊಳಗೆ ವಿದ್ಯಾರ್ಥಿಗಳು ಮಾದರಿಉತ್ತರ ಹಾಗೂ Scheme of Evaluation ಕುರಿತು Online ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದೆ.

ಆಕ್ಷೇಪಣೆ ಸಲ್ಲಿಸುವ ವಿದ್ಯಾರ್ಥಿಯು, ಮಂಡಳಿಯ ಅಂತರ್ಜಾಲದಲ್ಲಿ ಲಾಗಿನ್ ಆಗಿ, ವಿದ್ಯಾರ್ಥಿಯು ನೋಂದಣಿ ಸಂಖ್ಯೆಯನ್ನುಎಂಟ್ರಿ ಮಾಡುವುದು. ನಂತರ OTP (One Time Password ಯು ವಿದ್ಯಾರ್ಥಿಯ ಮೊಬೈಲ್‍ನಲ್ಲಿ ಸ್ವೀಕೃತಿಯಾಗುತ್ತದೆ.
ನಂತರ ವಿದ್ಯಾರ್ಥಿಯು ಆನ್‍ಲೈನ್‍ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಸಲ್ಲಿಸಿದ ಆಕ್ಷೇಪಣೆಯು 100 ಪದಗಳೊಳಗೆ ಇರುವುದು ಕಡ್ಡಾಯ. ಆಕ್ಷೇಪಣೆ ಸಲ್ಲಿಸಲು ದಿನಾಂಕ: 28.06.2018 ರಿಂದ 30.06.2018ರವರೆಗೆ ಕಾಲಾವಕಾಶ ಕಲ್ಪಿಸಲಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಜು.8ರಿಂದ ಮೌಲ್ಯಮಾಪನ: ಆಯ್ದ ಒಂಭತ್ತು ಜಿಲ್ಲೆಗಳಲ್ಲಿ ವಿಷಯವಾರು 54 ಮೌಲ್ಯಮಾಪನಾ ಕೇಂದ್ರಗಳಲ್ಲಿ ಜು.8ರಿಂದ 14ರವರೆಗೆ ಮೌಲ್ಯಮಾಪನ ನಡೆಯಲಿದೆ. ಮೌಲ್ಯಮಾಪನ ಕಾರ್ಯಕ್ಕಾಗಿ ಒಟ್ಟು 18 ಸಾವಿರ ಶಿಕ್ಷಕರನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಸ್ಟೂಡೆಂಟ್ ಅಚೀವ್‌ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದೆ.












Click it and Unblock the Notifications