ಕರ್ನಾಟಕ ಎಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ದಿನಾಂಕ ಪ್ರಕಟ
ಬೆಂಗಳೂರು, ಮೇ 09: ಎಸ್ಎಸ್ಎಲ್ಸಿ ಫಲಿತಾಂಶ ಮೇ 12ರಂದು ಹಾಗೂ ಪಿಯುಸಿ ಫಲಿತಾಂಶ ಮೇ 16ರಂದು ಪ್ರಕಟವಾಗುವ ಸಾಧ್ಯತೆ ಇದೆ.ಈ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣದ ಮುಖ್ಯ ಕಾರ್ಯದರ್ಶಿ ಅಜಯ್ ಸೇಠ್ ಸೋಮವಾರ ಮಾಹಿತಿ ನೀಡಿದ್ದಾರೆ.
ಮೇ 11ರಂದು ಮಧ್ಯಾಹ್ನ 3 ಗಂಟೆಯ ನಂತರ ಆನ್ ಲೈನ್ ನಲ್ಲಿ (karresults.nic.in) ಪ್ರಕಟಿಸಲಾಗುತ್ತದೆ ನಂತರ ಆಯಾ ಶಾಲೆಗಳಲ್ಲಿ ಮೇ 12ರಂದು ಬೆಳಗ್ಗೆ 10 ಗಂಟೆಗೆ ಪ್ರಕಟಿಸಲಾಗುತ್ತಿದೆ ಎಂದರು.

ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಮೇ 12ರಂದೇ ಪ್ರಕಟಗೊಳ್ಳಲಿದೆ ಎಂದು ಎಸೆಸೆಲ್ಸಿ ಬೋರ್ಡ್ ನಿರ್ದೇಶಕಿ ಯಶೋಧಾ ಬೋಪಣ್ಣ ಕೂಡಾ ಹೇಳಿದ್ದಾರೆ. ಆದರೆ, ಈ ಬಗೆ ಇಲಾಖೆ ಅಧಿಕೃತ ಪ್ರಕಟಣೆ ಇನ್ನೂ ಹೊರಡಿಸಿಲ್ಲ.












Click it and Unblock the Notifications