ಟೀ ತಡವಾಗಿದ್ದಕ್ಕೆ ಮುಖ ಊದಿಸಿ, ಸಿಕ್ಕಾಪಟ್ಟೆ ಬಯ್ದ ಸಚಿವ ಆಂಜನೇಯ

Posted By:
Subscribe to Oneindia Kannada

ಕೊಪ್ಪಳ, ನವೆಂಬರ್ 13: ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸಿಟ್ಟು ಮಾಡಿಕೊಂಡು, ಕೆಟ್ಟ ಮಾತುಗಳಿಂದ ಬಯ್ದಿದ್ದಾರೆ. ಈ ರೀತಿ ಅವರು ಸಿಟ್ಟಾಗಿ ಬಯ್ಯುವುದಕ್ಕೆ ಕಾರಣ ಏನು ಗೊತ್ತೆ? ಟಿ ಮಾಡುವುದು ಹಾಗೂ ಅದನ್ನು ಆ ನಂತರ ವಿತರಿಸುವುದು ತಡವಾಯಿತು ಎಂಬುದೇ ಸಚಿವರ ಸಿಟ್ಟಾಗಲು ಕಾರಣವಾಗಿದೆ.

ವಿದ್ಯಾರ್ಥಿನಿ ಹಾಕಿದ ಓಪನ್ ಚಾಲೆಂಜಿಗೆ ಸಚಿವ ಆಂಜನೇಯ ಬೇಸ್ತು!

ಕೊಪ್ಪಳದಲ್ಲಿ ಸಮಾವೇಶವೊಂದು ನಡೆಯುತ್ತಿದ್ದು, ಅದರಲ್ಲಿ ಮೀರಾ ಕುಮಾರ್ ಸಹ ಭಾಗವಹಿಸಿದ್ದರು. ಈ ಸಮಾವೇಶದ ವೇಳೆ ವ್ಯಕ್ತಿಯೊಬ್ಬರು ಟೀ ಮಾಡುವುದಕ್ಕೆ ಮತ್ತು ಅದನ್ನು ವಿತರಿಸುವುದಕ್ಕೆ ತಡವಾಗಿದೆ. ಈ ಕಾರಣದಿಂದ ವಿಪರೀತ ಸಿಟ್ಟಾದ ಸಚಿವ ಎಚ್.ಆಂಜನೇಯ ಆ ವ್ಯಕ್ತಿಯನ್ನು ಸಿಕ್ಕಾಪಟ್ಟೆ ಬಯ್ದಿದ್ದಾರೆ.

Karnataka Social Welfare Minister H. Anjaneya abused a cook for delay in serving Tea

ಈ ಬಗ್ಗೆ ಮಾಧ್ಯಮದವರು ಆಂಜನೇಯ ಅವರ ಬಳಿ ವಿಚಾರಿಸಿದ್ದಾರೆ. ಅದಕ್ಕೆ ಸ್ಪಷ್ಟನೆ ನೀಡಿದ ಅವರು, ಆತ ನಮ್ಮ ಹುಡುಗ. ಹೌದು ಕೋಪದದಲ್ಲಿ ಅಂಥ 'ಭಾಷೆ' ಬಳಸಿದ್ದು ನಿಜ. ಅದಕ್ಕಾಗಿ ಆತನಲ್ಲಿ ಕ್ಷಮೆ ಕೂಡ ಕೇಳಿದ್ದೇನೆ. ಈ ವಿಚಾರವನ್ನು ಇನ್ನಷ್ಟು ಎಳೆಯುವುದು ಬೇಡ ಎಂದು ಹೇಳಿದ್ದಾರೆ.

ಹೌದು, ಸಾಮಾಜಿಕ ನ್ಯಾಯದ ಬಗ್ಗೆ ಅಷ್ಟೊಂದು ಕಾಳಜಿ ಇರುವ ಸಿದ್ದರಾಮಯ್ಯ ಅವರ ಸಂಪುಟ ಸಹೋದ್ಯೋಗಿ, ಸಮಾಜ ಕಲ್ಯಾಣ ಸಚಿವರು ಅಪ್ಪಣೆ ಕೊಟ್ಟ ಮೇಲೆ ಈ ವಿಚಾರ ಮತ್ತೂ ದೊಡ್ಡದು ಮಾಡುವ ಅಗತ್ಯ ಏನಿದೆ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Social Welfare Minister H. Anjaneya abused a cook for delay in serving Tea in Koppal. See he is our boy, yes in anger I used that language but then I said sorry to him.No need to drag the issue: Karnataka Minister H Anjaneya on abusing cook.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ