ರಕ್ಷಣಾ ಇಲಾಖೆ: ಅಗತ್ಯತೆ ಪೂರೈಕೆಯಲ್ಲಿ ಕರ್ನಾಟಕದ ಪಾಲು 65% ರಷ್ಟು: CM
ಭಾರತದ ರಕ್ಷಣಾ ವಲಯದ ಬೇಡಿಕೆಯ ಪೂರೈಕೆಯಲ್ಲಿ ಕರ್ನಾಟಕದ ರಾಜ್ಯದ ಪಾಲು ಶೇಕಡಾ 65ರಷ್ಟು ಇದೆ. ಈಲಾಖೆಯ ಪರಿಸ್ಥಿತಿ ಹಿಂದೆ ಹೇಗಿತ್ತು, ಈಗ ಹೇಗಾಗಿದೆ ಎಂದು ವಿವರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಬೆಂಗಳೂರು, ಫೆಬ್ರವರಿ 15: ದೇಶದ ರಕ್ಷಣಾ ವಯಲದಲ್ಲಿ ಬಂಧನ ಎನ್ನುವುದು ರಕ್ಷಣಾ ಇಲಾಖೆ ಮತ್ತು ಸಾರ್ವಜನಿಕ ಸಂಸ್ಥೆಗಳ ಮಧ್ಯೆವಿರುವ ದೀರ್ಘಕಾಲದ ಸಂಬಂಧವಾಗಿದೆ. ಭಾರತದ ರಕ್ಷಣಾ ವಲಯದ ಬೇಡಿಕೆಯ ಪೂರೈಕೆಯಲ್ಲಿ ಕರ್ನಾಟಕದ ರಾಜ್ಯದ ಪಾಲು ಶೇಕಡಾ 65ರಷ್ಟು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಬುಧವಾರ 'ಏರೋ ಇಂಡಿಯಾ 2023' ಬಂಧನ್ - ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಸಹ ಪಾಲ್ಗೊಂಡಿದ್ದರು.
ಭಾರತ ದೇಶದಲ್ಲಿ ರಕ್ಷಣೆ ಹಾಗೂ ಏರೋಸ್ಪೇಸ್ ಕ್ಷೇತ್ರವು ಸ್ಥಾಪಿತ ವಲಯವಾಗಿದೆ. ಇದರಲ್ಲಿ ಪರಿಣಿತರು ಮಾತ್ರವೇ ಕಾರ್ಯವನ್ನು ಸಂಪೂರ್ಣವಾಗಿ ಸಾಧಿಸಬಲ್ಲರು. ಭಾರತ ರಕ್ಷಣಾ ವ್ಯವಸ್ಥೆ ಬೇಡಿಕೆಯ ಶೇಕಡಾ 80 ರಷ್ಟನ್ನು ಆಮದು ಮಾಡಿಕೊಳ್ಳುತ್ತಿದ್ದ ಕಾಲ ಹಿಂದೆ ಇತ್ತು. ಪ್ರಧಾನಮಂತ್ರಿಗಳು ಹಾಗೂ ರಕ್ಷಣಾ ಸಚಿವರಾದ ರಾಜ್ ನಾಥ್ ಸಿಂಗ್ ಅವರ ನೇತೃತ್ವದಲ್ಲಿ ಮುಖ್ಯವಾಗಿ ಮೇಕ್ ಇನ್ ಇಂಡಿಯಾ ಅಡಿ ಭಾರತದಲ್ಲಿ ಸ್ವದೇಶಿಯವಾಗಿ ವಲಯಕ್ಕೆ ಬೇಕಾದದ್ದನ್ನು ತಯಾರು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಭಾರತದ ರಕ್ಷಣಾ ಇಲಾಖೆಯ ಉತ್ಪಾದನೆ ಸಾಮರ್ಥ್ಯ ನಿರೀಕ್ಷೆಗಿಂತಲೂ ಹೆಚ್ಚಾಗಿಯೇ ಇದೆ. ದೇಶದ ಉತ್ಪಾದನಾ ಸಂಸ್ಥೆಗಳು ನಮ್ಮ ಬೇಡಿಕೆಯನ್ನು ಪೂರೈಸುವ ಎಲ್ಲ ಸಾಮರ್ಥ್ಯ ಹೊಂದಿವೆ. ಇಂದಿನ ಪರಿಸ್ಥಿತಿಯಲ್ಲಿ ರಕ್ಷಣಾ ವಸ್ತುಗಳ ಉತ್ಪಾದನಾ ಸಂಸ್ಥೆಗಳು ಅತ್ಯುನ್ನತ ತಂತ್ರಜ್ಞಾನವನ್ನು ಹೊಂದಿದ್ದು, ಅತ್ಯಂತ ದಕ್ಷವಾಗಿ ಕಾರ್ಯ ನಿರ್ವಹಿಸಬಲ್ಲದ್ದಾಗಿವೆ ಎಂದು ಅವರು ವಿವರಿಸಿದರು.
ರಕ್ಷಣಾ ವಲಯದಲ್ಲಿ ಅತ್ಯಧಿಕ ಅವಕಾಶ
ಉತ್ಪಾದನಾ ವಲಯದಲ್ಲಿ ಡೊಮೇನ್ ಬದಲಾವಣೆಯಿಂದ ಸಾಕಷ್ಟು ಅವಕಾಶಗಳು ನಿರ್ಮಾಣಗೊಂಡಿವೆ. ಆದ್ದರಿಂದ ನಾವು ಮಹತ್ವಾಕಾಂಕ್ಷೆಯಿಂದ ವೈಜ್ಞಾನಿಕವಾಗಿ ಯೋಚನೆ ಮಾಡಬೇಕಿದೆ. ಈ ಎಲ್ಲ ವಿಷಯಗಳನ್ನು ಬಂಧನ ಹೆಸರಲ್ಲಿ ಒಟ್ಟಿಗೆ ತರಲಾಗಿದೆ. ಈ ಹಿನ್ನೆಲಯಲ್ಲಿ ಒಪ್ಪಂದ-ಸಹಿ ಆಗಿದ್ದು, ಇದರಿಂದ ಭವಿಷ್ಯದ ಅಗತ್ಯ, ಬೆಳವಣಿಗೆ ಹಾಗೂ ಸಾಮರ್ಥ್ಯದ ಹೆಚ್ಚಳಕ್ಕೆ ಸಾಕ್ಷಿ ಆಗಲಿದೆ ಎಂದರು.
ಎಷ್ಟು ಒಪ್ಪಂದಗಳಿಗೆ ಸಹಿ ಆಗಿದೆ?
ಬೆಂಗಳೂರಿನಲ್ಲಿ ಏರೋ ಸ್ಪೇಸ್ ಪಾರ್ಕ್ ಸ್ಥಾಪನೆ ಮತ್ತದರ ಮೂಲಸೌಕರ್ಯ ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆ ನೀಡಿರುವ ಎಲ್ಲ ಅಧಿಕಾರಿಗಳಿಗೆ ಬೊಮ್ಮಾಯಿ ಅಭಿನಂದನೆ ತಿಳಿಸಿದರು. ರಾಷ್ಟ್ರದ ಒಟ್ಟು ರಕ್ಷಣಾ ಉತ್ಪಾದನೆಯಲ್ಲಿ ರಾಜ್ಯದ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗೀ ಸಂಸ್ಥೆಗಳು ಶೇಕಡಾ 65 ರಷ್ಟು ಪಾಲು ಹೊಂದಿದೆ. 2,900 ಕೋಟಿಗೂ ಹೆಚ್ಚು ಮೌಲ್ಯದ ಹೂಡಿಕೆಯ 32 ಒಪ್ಪಂದಗಳಿಗೆ ರಾಜ್ಯದ ಸಾರ್ವಜನಿಕ ವಲಯದ ಉದ್ಯಮಗಳು ಸಹಿ ಹಾಕಿದೆ. ಈ ಏರೋ ಇಂಡಿಯಾ ಪ್ರದರ್ಶನ 'ಟಾಕ್ ಆಫ್ ದಿ ಟೌನ್' ಆಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಮುರುಗೇಶ್ ನಿರಾಣಿ, ಕೇಂದ್ರ ಸರ್ಕಾರದ ರಕ್ಷಣಾ ಕಾರ್ಯದರ್ಶಿ ಶ್ರೀ ಗಿರಿಧರ್ ಅರಮಾನೆ, ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್, ಏರ್ ಛೀಫ್ ಮಾರ್ಷಲ್ ವಿ.ಆರ್.ಚೌಧರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.












Click it and Unblock the Notifications