ಬಿಜೆಪಿ ಮೀಸಲಾತಿ ವಿರೋಧಿಸಿದ್ಧ ಎಸ್‌ಸಿ ಸಮುದಾಯಕ್ಕೆ ಕೋಟಾದ ಶೇ.43ರಷ್ಟು ಸ್ಥಾನ
ಬೆಂಗಳೂರು, ಏಪ್ರಿಲ್ 14: ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಡಿಎಸ್ ಬಿಟ್ಟು ಎಲ್ಲ ಪಕ್ಷಗಳು 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬಹುತೇಕ ಸ್ಥಾನಗಳಿಗೆ ಅಭ್ಯರ್ಥಿ ಘೋಷಿಸಿವೆ. ಅದರಲ್ಲಿ ಮೀಸಲಾತಿ ಘೋಷಿಸಿದ್ದವರಿಗೆ ಎಸ್‌ಸಿ ಕೋಟಾದಲ್ಲಿ ಶೇ.43ರಷ್ಟು ಸ್ಥಾನ ಪಡೆದಿವೆ.
ಆಡಳಿತಾರೂಢ ಡಬಲ್ ಇಂಜಿನ್ ಸರ್ಕಾರದ ಪಕ್ಷ ಬಿಜೆಪಿಯು ಬುಧವಾರದವರೆಗೆ 212 ಅಭ್ಯರ್ಥಿಗಳ ಪೈಕಿ 35 ಪರಿಶಿಷ್ಟ ಜಾತಿ ಮತ್ತು 17 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ ಇನ್ನೂ ಎರಡು ಎಸ್‌ಸಿ ಮೀಸಲು ಹಾಗೂ ಒಂದು ಎಸ್‌ಟಿ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. 35 ಎಸ್‌ಸಿ ಅಭ್ಯರ್ಥಿಗಳಲ್ಲಿ ಭೋವಿ ಮತ್ತು ಲಂಬಾಣಿ ಸಮುದಾದಯದ ಟಿಕೆಟ್ ಆಕಾಂಕ್ಷಿಗಳಿಗೂ ಟಿಕೆಟ್ ಹಂಚಿಕೆ ಮಾಡಲಾಗಿದೆ.

ಎಲ್ಲ ಸಮುದಾಯದವರನ್ನು ಟಾರ್ಗೆಟ್ ಮಾಡಿರುವ ಬಿಜೆಪಿಯು ಈ ಚುನಾವಣೆ, ಟಿಕೆಟ್ ಘೋಷಣೆ ಮಧ್ಯ ತಿಂಗಳ ಹಿಂದಷ್ಟೇ ಘೋಷಿಸಿದ್ದ ಮೀಸಲಾತಿಯು ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಶೇಕಡಾ 17ರಷ್ಟು ಎಸ್‌ಸಿ ಕೋಟಾದೊಳಗೆ ತಮ್ಮ ಮೀಸಲಾತಿಯನ್ನು ಕೇವಲ ಶೇಕಡಾ 4.5ರಷ್ಟು ಸೀಮಿತಗೊಳಿಸಿದ್ದಕ್ಕಾಗಿ ಪರಿಶಿಷ್ಟ ಜಾತಿ ಸಮುದಾಯಗಳು ಬಿಜೆಪಿ ವಿರುದ್ಧ ಗುಡುಗಿದ್ದವು.
ಸರ್ಕಾರದ ಹೊಸ ಮೀಸಾಲತಿ ಕೋಟಾ (ಮ್ಯಾಟ್ರಿಕ್ಸ್) ಅಡಿಯಲ್ಲಿ, ಪರಿಶಿಷ್ಟ ಜಾತಿಗಳಿಗೆ ಎಡ ಮತ್ತು ಬಲ ಪಂಗಡಗಳು ಕ್ರಮವಾಗಿ ಶೇಕಾಡ 6ರಷ್ಟು ಮತ್ತು ಶೇಕಡಾ 5.5 ಪ್ರತಿಶತದಷ್ಟು ಅಧಿಕ ಮೀಸಲಾತಿಯನ್ನು ಹೊಂದಿವೆ.
ಅಧಿಕ ಪ್ರಮಾಣದಲ್ಲಿರುವ ಈ ಕಳಸಮುದಾಯಗಳನ್ನು ರಾಜಕೀಯವಾಗಿ ಮೀಸಲಾತಿಯಡಿ ಬಿಜೆಪಿ ಸರ್ಕಾರ ತಲುಪಲು ಪ್ರಯತ್ನಿಸುತ್ತಿದೆ. ಬಹುಸಂಖ್ಯಾತ ಎಸ್‌ಸಿ ಎಡ ಮತ್ತು ಬಲ ಪಂಥಗಳಿಗೆ ಆದ್ಯತೆ ನೀಡುತ್ತಿದೆ. ಏಕೆಂದರೆ ಈ ಎಡ ಮತ್ತು ಬಲ ಸಮುದಾಯಗಳು ಹೆಚ್ಚು ಮತಗಳನ್ನು ಹೊಂದಿವೆ. ಅದು ಸಹ ಚುನಾವಣೆಯಲ್ಲಿ ಕೆಲಸ ಮಾಡುತ್ತದೆ ಎಂಬುದು ಬಿಜೆಪಿಯ ಅಭಿಪ್ರಾಯವಾಗಿದೆ.

ಉತ್ತರ ಕರ್ನಾಟಕದಲ್ಲಿ ಬೋವಿ ಲಂಬಾಣಿ ಅಭ್ಯರ್ಥಿಗಳು
ಈಗಾಗಲೇ ಬಿಜೆಪಿ ಘೊಷಿಸಿರುವ ಅಭ್ಯರ್ಥಿಗಳಲ್ಲಿ ಸ್ಥಾನ ಪಡೆದ 15 ಭೋವಿ ಮತ್ತು ಲಂಬಾಣಿ ಅಭ್ಯರ್ಥಿಗಳ ಬಹುಪಾಲು ಸ್ಥಾನಗಳು ಉತ್ತರ ಕರ್ನಾಟಕದಲ್ಲಿವೆ. ಇಲ್ಲಿ ಲಿಂಗಾಯತರೇ ನಿರ್ಣಾಯಕರಾದರೂ ಸಹ ಈ ಸಮುದಾಯಗಳ ಹಿತ, ಅವರ ಮುಖಂಡರಿಗೆ ಟಿಕೆಟ್ ನೀಡುವುದು ಬಿಜೆಪಿಗೆ ಅನಿವಾರ್ಯವು ಆಗಿತ್ತು ಎನ್ನಲಾಗಿದೆ. ಸರ್ಕಾರ ತಳ ಸಮುದಾಯಗಳು ಬಲಶಾಲಿಗಳು. ಇದು ಈ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಸಾಬೀತಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ರಾಜ್ಯದಲ್ಲಿ ಕಳೆದ ಎರಡು ದಶಕಗಳಲ್ಲಿ ಯಶಸ್ವಿ ಸ್ಪರ್ಧೆಯನ್ನು ಖಚಿತಪಡಿಸಿಕೊಳ್ಳಲು ಹಣದ ಬಲವು ಪ್ರಮುಖ ಪಾತ್ರವಹಿಸಿದೆ ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ. ಹೀಗಿದ್ದರೂ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವಾಗ ಪರಿಗಣಿಸಲಾದ ಏಕೈಕ ಅಂಶವೆಂದರೆ ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕುವುದು. ಅವರಿಗೆ ಟಿಕೆಟ್ ನೀಡುವುದೇ ಆಗಿದೆ. ಈ ಕಾರಣದಿಂದ ಎಲ್ಲ ಸಮುದಾಯಗಳ ಗೆಲ್ಲುವ ಅಭ್ಯರ್ಥಿಗಳ ರಾಜಕಾರಣಕ್ಕೆ ಅವಶ್ಯಕತೆ ಇದೆ ಎಂದು ಬಿಜೆಪಿ ರಾಜ್ಯ ಎಸ್‌ಸಿ ಮೋರ್ಚಾ ಅಧ್ಯಕ್ಷ ಮತ್ತು ಎಂಎಲ್‌ಸಿ ಚಲುವಾದಿ ನಾರಾಯಣಸ್ವಾಮಿ ಮಾಹಿತಿ ನೀಡಿದರು.
ಮುಸ್ಲಿಂರಿಗೆ ನೀಡಿದ್ದ ಮೀಸಲಾತಿ ರದ್ದು
ಮೀಸಲಾತಿ ಘೊಷಣೆ ಬಳಿಕ ಬಿಜೆಪಿ ವಿರುದ್ಧ ಕಾಂಗ್ರೆಸ್ ಹಾಗೂ ಮುಸ್ಲಿಂ ಸಮುದಾಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದರೆ ಬಿಜೆಪಿ ನೀಡಿದ ಮೀಸಲಾತಿ ರದ್ದು ಮಾಡಿ ಅಲ್ಪಸಂಖ್ಯಾತರ ಹಿತಿ ಕಾಯಲಾಗುವುದು ಎಂದು ಹೇಳಿತ್ತು.
ಈ ಮಧ್ಯೆ ಒಬಿಸಿ ಕೆಟಗರಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇಕಡಾ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ನಿರ್ಧಾರವನ್ನು ಏಪ್ರಿಲ್ 18ರವರೆಗೂ ಜಾರಿಗೊಳಿಸುವುದಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ಗೆ ಗುರುವಾರ ಭರವಸೆ ನೀಡಿದೆ. ನ್ಯಾಯಾಲಯದ ಮೆಟ್ಟಿಲೇರಿರುವ ಈ ವಿವಾದಾತ್ಮಕ ನಿರ್ಧಾರದ ಮುಂದಿನ ವಿಚಾರಣೆ ಏ. 18ಕ್ಕೆ ನಡೆಯಲಿದೆ. ಅಲ್ಲಿಯವರೆಗೆ ಮೀಸಲಾತಿ ಅನುಷ್ಠಾನ ಮಾಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ.












Click it and Unblock the Notifications