ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2015 ಪ್ರಕಟ

Posted By:
Subscribe to Oneindia Kannada

ಬೆಂಗಳೂರು, ಸೆ. 27: 2015ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಗೊಂಡಿದೆ. ಐವರು ಗಣ್ಯರಿಗೆ 2015ರ ವರ್ಷದ ಗೌರವ ಪ್ರಶಸ್ತಿ ಲಭಿಸಿದೆ. ಇದರ ಜೊತೆಗೆ 2014ರ ವರ್ಷದ ಪುಸ್ತಕ ಬಹುಮಾನ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿವಿಧ ದತ್ತಿ ಪ್ರಶಸ್ತಿಗಳ ಪಟ್ಟಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ.

2015ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ: ಡಾ. ಕೃಷ್ಣಮೂರ್ತಿ ಹನೂರು, ಡಾ. ಎಚ್.ಎಸ್. ಶಿವಪ್ರಕಾಶ್, ಡಾ. ಎಲ್. ಹನುಮಂತಯ್ಯ, ಶ್ರೀಮತಿ ನೇಮಿಚಂದ್ರ, ಡಾ.ಎಚ್. ನಾಗವೇಣಿ ಅವರಿಗೆ ವರ್ಷದ ಗೌರವ ಪ್ರಶಸ್ತಿ ಪ್ರಕಟ.

2014ರ ವರ್ಷದ ಪುಸ್ತಕ ಬಹುಮಾನ

* ಕಾಫಿ ಕಪ್ಪಿನೊಳಗೆ ಕೋಲಂಬಸ್ (ಸಂಕೀರ್ಣ) ಕೃತಿಗೆ ಜಿ.ಎನ್. ಮೋಹನ್.
* ನನ್ನ ಶಬ್ದ ನಿನ್ನಲಿ ಬಂದು(ಕಾವ್ಯ) - ಕೆಪಿ ಮೃತ್ಯಂಜಯ್ಯ,
* ಆಡುಕಳ(ಕಾದಂಬರಿ) - ಶ್ರೀಧರ್ ಬಳಿಗಾರ,
* ದಿನಚರಿಯ ಕಡೆ ಪುಟದಿಂದ (ಸಣ್ಣಕತೆ) - ಜಯಶ್ರೀ ಕಾಸರವಳ್ಳಿ,
* ದೇವನಾಂಪ್ರಿಯ ಅಶೋಕ (ನಾಟಕ) - ಎಂ ಭೈರೇಗೌಡ,
* ಅರ್ಥಾರ್ಥ (ಲಿಲಿತ ಪ್ರಬಂಧ) - ಎಂ.ಎಸ್.ಶ್ರೀರಾಮ್,
* ಅಪೂರ್ವ ಪೂರ್ವ (ಪ್ರವಾಸ ಸಾಹಿತ್ಯ) - ವೆಂಕಟೇಶ ಮಾಚಕನೂರ,
* ಆನಂದ ಕುಮಾರಸ್ವಾಮಿ (ಜೀವನಚರಿತ್ರೆ) - ಜಿ.ಬಿ. ಹರೀಶ,
* ಬಯಲ ಬನಿ (ಸಾಹಿತ್ಯ ವಿಮರ್ಶೆ) - ರವಿಕುಮಾರ್ ನೀಹಾ,
* ಶ್ರೀ ಕನಕದಾಸರ ಕೀರ್ತನೆಗಳು (ಗ್ರಂಥ ಸಂಪಾದನೆ ) - ಟಿ.ಎನ್. ನಾಗರತ್ನ,
* ಬೆಳಗುತಿರುವ ಭಾರತ (ಮಕ್ಕಳ ಸಾಹಿತ್ಯ) - ಎ.ಕೆ.ರಾಮೇಶ್ವರ,
* ಕ್ವಾಂಟಂ ಜಗತ್ತು (ವಿಜ್ಞಾನ ಸಾಹಿತ್ಯ) ಅಗ್ನಿ ಶ್ರೀಧರ್,
* ನಂಬಿಕೆ, ಮೂಡನಂಬಿಕೆ, ವೈಜ್ಞಾನಿಕ ಮನೋವೃತ್ತಿ (ಮಾನವಿಕ) - ಎಂ.ಅಬ್ದುಲ್ ರೆಹಮಾನ್ ಪಾಷ,
* ಹಸ್ತಪ್ರತಿ ಸಂಕಥನ (ಸಂಶೋಧನೆ) - ವೀರೇಶ ಬಡಿಗೇರ,
* ಗಾಳಿ ಪಳಗಿಸಿದ ಬಾಲಕ (ಸೃಜನಶೀಲ ಅನುವಾದ -1) - ಕರುಣಾ ಬಿ.ಎಸ್.
* ಕಾರ್ಪೊರೇಟ್ ಕಾಲದಲ್ಲೂ ಕಾರ್ಲ್ ಮಾರ್ಕ್ಸ್ ಪ್ರಸ್ತುತ (ಸೃಜನೇತರ ಅನುವಾದ) - ಆರ್.ಕೆ. ಹುಡುಗಿ,
* ಆವರ್ತ (ಮೊದಲ ಕೃತಿ- ಕಾದಂಬರಿ) - ಆಶಾ ರಘು,

Karnataka Sahithya Academy Award 2015 Winners List

2014ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿವಿಧ ದತ್ತಿ ಪ್ರಶಸ್ತಿಗಳು:
* ವೈ.ಎಸ್.ಹರಗಿ, ಉರಿವ ಜಲ - ಕಾದಂಬರಿ (ಚದುರಂಗ ದತ್ತಿ ನಿಧಿ ಪ್ರಶಸ್ತಿ,)
* ಎಸ್.ಜಗದೀಶ್ ಕೊಪ್ಪ, ಬಿಳಿ ಸಾಹೇಬನ ಭಾರತ - ಜೀವನಚರಿತ್ರೆ- (ಸಿಂಪಿ ಲಿಂಗಣ್ಣ ದತ್ತಿನಿಧಿ ಪ್ರಶಸ್ತಿ,)
* ರಾಮಲಿಂಗಪ್ಪ ಟಿ. ಬೇಗೂರು - ಮಹಿಳೆ ಚರಿತ್ರ ಪುರಾಣ - ಸಾಹಿತ್ಯ ವಿಮರ್ಶೆ - (ಪಿ. ಶ್ರೀನಿವಾಸ್ ರಾವ್ ದತ್ತಿನಿಧಿ ಪ್ರಶಸ್ತಿ,
* ಬಸು ಬೇವಿನಗಿಡದ - ಸಮಕಾಲೀನ ಭಾರತೀಯ ಸಣ್ಣಕಥೆಗಳು - ಸೃಜನಶೀಲ ಅನುವಾದ ( ಎಲ್. ಗುಂಡಪ್ಪ ಮತ್ತು ಶಾರದಾ ದತ್ತನಿಧಿ ಪ್ರಶಸ್ತಿ
* ಪದ್ಮನಾಭ ಭಟ್ ಶೇವ್ಕಾರ್, ಕೇಪಿನ ಡಬ್ಬಿ - ಲೇಖಕರ ಮೊದಲ ಸ್ವತಂತ್ರ ಕೃತಿ (ಮಧುರ ಚೆನ್ನ ದತ್ತಿನಿಧಿ ಪ್ರಶಸ್ತಿ)
* ಡಾ. ಎಚ್.ಎಸ್.ಎಂ. ಪ್ರಕಾಶ್, ಹಿಸ್ಟರಿ ಆಫ್ ದಲಿತ್ ಮ್ಯೂಮೆಂಟ್ - ಕನ್ನಡದಿಂದ ಇಂಗ್ಲಿಷ್ ಗೆ ಅನುವಾದ (ಅಮೇರಿಕನ್ನಡ ದತ್ತಿ ಬಹುಮಾನ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Sahitya Academy Award 2015 Winners List announced. Dr Krishnamurthy Hanur, Dr. HS Shivaprakash, Dr. L Hanumanthaiah, Nemichandra, Dr. H Nagaveni are among the winners.
Please Wait while comments are loading...