Get Updates
Get notified of breaking news, exclusive insights, and must-see stories!

ನಮ್ಮ ಕೆಎಸ್‌ಆರ್‌ಟಿಸಿ, ನಮ್ಮ ಹೆಮ್ಮೆ: ಕನ್ನಡಿಗರ ಸಾರಿಗೆ ಸಂಸ್ಥೆಗೆ ಒಲಿದು ಬಂದಿವೆ 5 ಪ್ರತಿಷ್ಠಿತ ಪ್ರಶಸ್ತಿಗಳು!

ಕರ್ನಾಟಕದಲ್ಲಿ ನಮ್ಮ ಕೆಎಸ್‌ಆರ್‌ಟಿಸಿ ಅಂದ್ರೆನೆ ಒಂದು ಹೆಮ್ಮೆ. ಯಾಕಂದ್ರೆ ಪ್ರತಿನಿತ್ಯವು ಕೋಟಿ ಕೋಟಿ ಜನರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳೇ ಆಧಾರ. ಹೀಗೆ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಕರ್ನಾಟಕದ ವಿವಿಧ ಭಾಗದಲ್ಲಿ, ಹಲವು ನಿಗಮ ನಿರ್ಮಾಣ ಮಾಡಲಾಗಿದೆ. ಇದೀಗ ಇದೇ ನಮ್ಮ ಹೆಮ್ಮೆಯ KSRTC ಸಂಸ್ಥೆಗೆ ದೇಶ ಮಟ್ಟದಲ್ಲಿ ದೊಡ್ಡ ಪ್ರಶಸ್ತಿಗಳೇ ಒಲಿದು ಬಂದಿವೆ. ಹಾಗಾದರೆ ಕೆಎಸ್‌ಆರ್‌ಟಿಸಿ ಪಡೆದ ಪ್ರಶಸ್ತಿಗಳು ಯಾವುವು?

ಕರ್ನಾಟಕದ ಸರ್ಕಾರಿ ಸಾರಿಗೆ ಸಂಸ್ಥೆ ಕೆಎಸ್‌ಆರ್‌ಟಿಸಿ ಒಂದು ಹೆಮ್ಮೆಯ ಸಂಕೇತ. ಯಾಕೆ ಅಂದ್ರೆ ಕರ್ನಾಟಕದ ಅಕ್ಕಪಕ್ಕದ ರಾಜ್ಯದಲ್ಲಿ ಇರುವ ಸರ್ಕಾರಿ ಸಾರಿಗೆಗಳಿಗೆ ಹೋಲಿಸಿದರೆ, ನಮ್ಮ ಕೆಎಸ್‌ಆರ್‌ಟಿಸಿ ಅತ್ಯುತ್ತಮ ಅನ್ನೋದು ಜನರ ಮಾತು. ಹೀಗಿದ್ದಾಗ ಉತ್ತಮ ಸೇವೆ ಒದಗಿಸುವ KSRTC ಸಂಸ್ಥೆ 'ಶಕ್ತಿ ಯೋಜನೆ' ಮೂಲಕ ಜಾಗತಿಕ ಮಟ್ಟದಲ್ಲಿ ಗಮನವನ್ನು ಸೆಳೆಯುತ್ತಿದೆ. ಇದೇ ಸಮಯದಲ್ಲಿ ನಮ್ಮ ಹೆಮ್ಮೆಯ KSRTC ಸಂಸ್ಥೆಗೆ ಪ್ರತಿಷ್ಠಿತ ಪ್ರಶಸ್ತಿಯು ಒಲಿದು ಬಂದಿದೆ. ಹಾಗಾದರೆ ಆ ಪ್ರಶಸ್ತಿಗಳು ಯಾವುವು? ಮುಂದೆ ಓದಿ.

Karnataka Road Transport Corporation The KSRTC Has Been Got 5 Awards In National Level

5 ಪ್ರಶಸ್ತಿಗಳು ಯಾವುವು ಗೊತ್ತೆ?

ಭಾರತದ 'ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ' (ASRTU)ದ ವತಿಯಿಂದ ವಿತರಣೆ ಮಾಡಿ ಇದೀಗ ನೀಡಲಾಗಿರುವ ಪ್ರಶಸ್ತಿ ಪಟ್ಟಿಯಲ್ಲಿ ನಮ್ಮ ಹೆಮ್ಮೆ ಕೆಎಸ್‌ಆರ್‌ಟಿಸಿ ಸಂಸ್ಥೆ ಸಾಧನೆ ಮಾಡಿದೆ. ಅದರಲ್ಲೂ ಕೆಎಸ್‌ಆರ್‌ಟಿಸಿ ಸೇರಿದಂತೆ ಕರ್ನಾಟಕದ ಒಟ್ಟು 4 ನಿಗಮಗಳಿಗೂ, ಇದೀಗ ಒಟ್ಟಾರೆ 5 ಪ್ರಶಸ್ತಿಗಳು ಒಲಿದು ಬಂದಿವೆ. ಹಾಗಾದರೆ ಕನ್ನಡಿಗರ ಹೆಮ್ಮೆಯ ಸಾರಿಗೆ ಈಗ ಪಡೆದಿರುವ ಪ್ರಶಸ್ತಿಗಳು ಯಾವುವು? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.

ಮೊದಲೇ ಹೇಳಿದಂತೆ ಭಾರತದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ (ASRTU) ವತಿಯಿಂದ, ಇದೀಗ ನೀಡಲಾಗಿರುವ ಪ್ರಶಸ್ತಿಯಲ್ಲಿ ಕರ್ನಾಟಕದ 4 ನಿಗಮಗಳಿಗೂ ಸನ್ಮಾನ ಸಿಕ್ಕಿದೆ. ಈ ಮೂಲಕ ಕರ್ನಾಟಕದ ಕೀರ್ತಿ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಹಾರಿದೆ. 2022 & 23ನೇ ಸಾಲಿನ ಒಟ್ಟು 5 ರಾಷ್ಟ್ರೀಯ ಸಾರ್ವಜನಿಕ ಬಸ್ ಸಾರಿಗೆ ಪ್ರಶಸ್ತಿಗಳು (National Transport Excellence Award) ನಮ್ಮ ರಾಜ್ಯದ ಸಾರಿಗೆಗೆ ಲಭಿಸಿವೆ. ಹಾಗಾದರೆ ಏನಿದು ಒಕ್ಕೂಟ? ನಮ್ಮ ಭಾರತದಲ್ಲಿ ವಿವಿಧ ರಾಜ್ಯದಲ್ಲಿ ಸಾರಿಗೆ ಸಂಸ್ಥೆಗಳ ವಿಚಾರದಲ್ಲಿ ಈ ಒಕ್ಕೂಟ ಬೀರುವ ಪಾತ್ರ ಎಂತಹದ್ದು? ಬನ್ನಿ ತಿಳಿಯೋಣ.

1965ರಲ್ಲಿ ಒಕ್ಕೂಟದ ಸ್ಥಾಪನೆ

ಅಷ್ಟಕ್ಕೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ (ASRTU)ದ ವ್ಯಾಪ್ತಿಯಲ್ಲಿ ದೇಶದ 62 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸದಸ್ಯತ್ವ ಹೊಂದಿವೆ. ಈ ಒಕ್ಕೂಟ 1965ರ ಆಗಸ್ಟ್ 13 ರಂದು ಇಡೀ ದೇಶದ ರಾಜ್ಯ ಸಾರಿಗೆಗಳ ನಡುವೆ ಒಕ್ಕೂಟವಾಗಿ ರೂಪುಗೊಂಡಿತ್ತು. ಭಾರತ ಸರ್ಕಾರದ ರಸ್ತೆ ಸಾರಿಗೆ & ಹೆದ್ದಾರಿ ಸಚಿವಾಲಯ ನಿರ್ದೇಶನದ ಅನುಸಾರ ಕಾರ್ಯನಿರ್ವಹಿಸುತ್ತದೆ. ಒಟ್ಟು 58 ವರ್ಷಗಳ ಇತಿಹಾಸ ಇರುವ ಈ ಒಕ್ಕೂಟ ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇದೇ ಸಮಯದಲ್ಲಿ ಕರ್ನಾಟಕದ ಸಾರಿಗೆ ಸಂಸ್ಥೆಗೂ ಪ್ರಶಸ್ತಿ ಸಿಕ್ಕಿದೆ. ಹಾಗಾದ್ರೆ ಈಗ ಸಿಕ್ಕಿರುವ ಪ್ರಶಸ್ತಿಗಳು ಯಾವುವು? ಮುಂದೆ ಓದಿ.

Karnataka Road Transport Corporation The KSRTC Has Been Got 5 Awards In National Level

ಕರ್ನಾಟಕದ ಸಾರಿಗೆಗೆ ಸಿಕ್ಕ ಪ್ರಶಸ್ತಿಗಳು

ಹೌದು ಕೆಎಸ್‌ಆರ್‌ಟಿ‌ಸಿ ಬ್ರ್ಯಾಂಡಿಂಗ್ & ವರ್ಚಸ್ಸು ಅಭಿವೃದ್ಧಿ ಉಪಕ್ರಮ, ಮತ್ತು ಸಿಬ್ಬಂದಿಯ ಕಲ್ಯಾಣಕ್ಕೆ ಕೈಗೊಂಡ ಹೊಸ ಯೋಜನೆಗಳಿಗಾಗಿ ಇದೀಗ 2 ಪ್ರಶಸ್ತಿ ಲಭಿಸಿವೆ. ಇದರ ಜೊತೆ ಇದೀಗ ಬಿಎಂಟಿಸಿಗೆ ವಿದ್ಯುತ್ ಚಾಲಿತ ವಾಹನಗಳಾದ ಅಸ್ತ್ರ ಕಾರ್ಯಾಚರಣೆಯ ಉಪಕ್ರಮಕ್ಕೆ ಪ್ರಶಸ್ತಿ ಸಿಕ್ಕಿದೆ. ಇದರ ಜೊತೆ ಮತ್ತೊಂದು ಖುಷಿ ವಿಚಾರ ಏನೆಂದರೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ರಸ್ತೆ ಸಾರಿಗೆ ಸುರಕ್ಷತೆಯ ಉಪಕ್ರಮ ಅನುಷ್ಠಾನಕ್ಕೆ ಪ್ರಶಸ್ತಿಯೂ ಸಿಕ್ಕಿದೆ.

ಹಾಗೇ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಸ್ತೆ ಸಾರಿಗೆ ಸುರಕ್ಷತೆ ಪದ್ಧತಿ ಅನುಷ್ಠಾನಕ್ಕೆ ಅಂತಾ ಪ್ರಶಸ್ತಿ ನೀಡಲಾಗಿದ್ದು, ಪ್ರಶಸ್ತಿ ಪ್ರಧಾನ ಸಮಾರಂಭ 15ನೇ ಮಾರ್ಚ್ 2024 ರಂದು ದೆಹಲಿಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದಲ್ಲಿ ನಡೆಯಲಿದೆ. ಈ ಮೂಲಕ ಕನ್ನಡಿಗರ ನಾಡಲ್ಲಿ ಕಟ್ಟಿ ಬೆಳೆಸಿರುವ ಸಂಸ್ಥೆಗೆ ಭಾರಿ ದೊಡ್ಡ ಗೌರವ ಸಿಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+