ಕರ್ನಾಟಕದಲ್ಲಿ ಮತ್ತೆ ವ್ಯಾಕ್ಸಿನ್ ಕೊರತೆ; ಗುರಿ ಪರಿಷ್ಕರಣೆ!

ಬೆಂಗಳೂರು, ಜುಲೈ 02; ಕರ್ನಾಟಕದಲ್ಲಿ ಪ್ರತಿದಿನ ಲಸಿಕೆ ನೀಡುವ ಗುರಿಯನ್ನು ಪರಿಷ್ಕರಣೆ ಮಾಡಲಾಗಿದೆ. ಲಸಿಕೆ ಪೂರೈಕೆ ಕಡಿಮೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಪುನಃ ಲಸಿಕೆ ಕೊರತೆ ಉಂಟಾಗಿದೆ. ಲಸಿಕೆ ಇಲ್ಲ ಎಂಬ ಬೋರ್ಡ್‌ ಮತ್ತೆ ಕಾಣಿಸುತ್ತಿದೆ.

ಕರ್ನಾಟಕದಲ್ಲಿ ಜೂನ್ 21ರಂದು 11.52 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿತ್ತು. ಜುಲೈ 1ರ ಗುರುವಾರ ರಾತ್ರಿ 8 ಗಂಟೆಯ ತನಕ 1.88 ಲಕ್ಷ ಡೋಸ್ ಲಸಿಕೆ ಮಾತ್ರ ನೀಡಲಾಗಿದೆ. ರಾಜ್ಯಗಳಿಗೆ ಲಸಿಕೆ ಪೂರೈಕೆ ಹೊಣೆಯನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದ್ದು, ಅಲ್ಲಿಂದ ಲಸಿಕೆ ಬರಬೇಕಿದೆ.

ಬಿಬಿಎಂಪಿ ವ್ಯಾಪ್ತಿ, ಮೈಸೂರು, ಬೆಳಗಾವಿ, ತುಮಕೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ರಾಜ್ಯದಲ್ಲಿಯೇ ಹೆಚ್ಚು ಲಸಿಕೆ ನೀಡಲಾಗಿದೆ. ಹೆಚ್ಚು ಲಸಿಕೆ ನೀಡಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ.

ಜುಲೈ 1ರಂದು 8 ರಿಂದ 9 ಲಕ್ಷ ಡೋಸ್ ಲಸಿಕೆ ರಾಜ್ಯಕ್ಕೆ ಬಂದಿದೆ. ಇದರಲ್ಲಿ 1 ಲಕ್ಷ ಡೋಸ್ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಂಚಿಕೆಯಾಗಿದೆ. ಆದರೆ ಆರೋಗ್ಯ ಇಲಾಖೆ ಎಷ್ಟು ಲಸಿಕೆ ಬಂದಿದೆ? ಎಂಬ ಕುರಿತು ಖಚಿತ ಮಾಹಿತಿ ಕೊಟ್ಟಿಲ್ಲ.

ಯಾವ ಜಿಲ್ಲೆಯಲ್ಲಿ ಎಷ್ಟು ಲಸಿಕೆ?

ಯಾವ ಜಿಲ್ಲೆಯಲ್ಲಿ ಎಷ್ಟು ಲಸಿಕೆ?

ಬಳ್ಳಾರಿ ಜಿಲ್ಲೆಯಲ್ಲಿ ಜೂನ್ 21ರಂದು 64,406 ಜನರು ಲಸಿಕೆ ಪಡೆದಿದ್ದಾರೆ. ಬಳಿಕ ಐದು ಬಾರಿ ಮಾತ್ರ ಜಿಲ್ಲೆಗೆ ಲಸಿಕೆ ಬಂದಿದೆ. ಜೂನ್ 25ರಂದು 1,500 ಡೋಸ್ ಲಸಿಕೆ ಮಾತ್ರ ಲಭ್ಯವಾಗಿದೆ. ತುಮಕೂರು ಜಿಲ್ಲೆಯಲ್ಲಿ ಜೂನ್ 21ರಂದು 51,552 ಜನರು ಲಸಿಕೆ ಪಡೆದಿದ್ದಾರೆ. ಬಳಿಕ 6 ಬಾರಿ ಲಸಿಕೆ ಬಂದಿದ್ದು, ಜೂನ್ 29ರಂದು 6,500 ಡೋಸ್ ಲಸಿಕೆ ಮಾತ್ರ ಬಂದಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟು?

ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟು?

ಕರ್ನಾಟಕದಲ್ಲಿಯೇ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಗುರುವಾರದ ತನಕ 54.51 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಪ್ರತಿದಿನ 1 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಇತ್ತು. ಈಗ 50 ಸಾವಿರ ಜನರಿಗೆ ಲಸಿಕೆ ನೀಡುವಂತೆ ಗುರಿಯನ್ನು ಪರಿಷ್ಕರಣೆ ಮಾಡಲಾಗಿದೆ.

ಬಿಬಿಎಂಪಿ ನೀಡಿದ ಲಸಿಕೆ

ಬಿಬಿಎಂಪಿ ನೀಡಿದ ಲಸಿಕೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಜೂನ್ 21ರಂದು 1,73,045 ಜನರಿಗೆ ಲಸಿಕೆ ನೀಡಲಾಗಿದೆ. ದೇಶದ ಮೆಟ್ರೋ ನಗರಗಳಲ್ಲಿ ಅತಿ ಹೆಚ್ಚು ಜನರಿಗೆ ಲಸಿಕೆ ನೀಡಿದ ಹೆಗ್ಗಳಿಗೆ ಬೆಂಗಳೂರು ನಗರದ್ದು. ಜೂನ್ 30ರ ಬುಲೆಟಿನ್ ಪ್ರಕಾರ ಬೆಂಗಳೂರು ನಗರ, ಗ್ರಾಮಾಂತರ ಸೇರಿ 61,43,356 ಡೋಸ್ ಲಸಿಕೆಯನ್ನು ನೀಡಲಾಗಿದೆ.

50 ಸಾವಿರ ಡೋಸ್ ಲಸಿಕೆ ಗುರಿ

50 ಸಾವಿರ ಡೋಸ್ ಲಸಿಕೆ ಗುರಿ

ಪ್ರತಿದಿನ 50 ಸಾವಿರ ಡೋಸ್ ಲಸಿಕೆ ನೀಡುವ ಗುರಿ ಇದೆ. ಆದರೆ ಲಸಿಕೆ ಸಂಗ್ರಹದ ಬಗ್ಗೆ ಪ್ರತಿದಿನ ಸಂಜೆ ನಮಗೆ ಮಾಹಿತಿ ಸಿಗುತ್ತದೆ. ಲಸಿಕೆ ಹಂಚಿಕೆ ಮಾಡುವಾಗ ರಾತ್ರಿಯಾಗುತ್ತದೆ. ಕೆಲವು ದಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮರುದಿನ ಬೆಳಗ್ಗೆ ಲಸಿಕೆ ತಲುಪುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+