Karnataka Reservoir: ಮಳೆ ದುರ್ಬಲ, ಜಲಾಶಯಗಳ ಒಳಹರಿವು ಕುಸಿತ: ಅ.20 ರಂದು ಪ್ರಮುಖ ಡ್ಯಾಂಗಳ ನೀರಿನ ಮಟ್ಟ?
ಬೆಂಗಳೂರು: ಕರ್ನಾಟಕದಾದ್ಯಂತ ಹಿಂಗಾರು ಮುಳೆ (Monsoon 2026) ಆರಂಭದಲ್ಲಿ ಕೊಂಚ ಸಕ್ರಿಯವಾಗಿದ್ದರೂ ಸಹಿತ ಕಳೆದ 48 ಗಂಟೆಗಳಲ್ಲಿ ಮತ್ತೆ ದುರ್ಬಲವಾಗಿದೆ. ಮಲೆನಾಡು ಭಾಗಗಳಲ್ಲಿ ಈ ವಾರಾಂತ್ಯದಲ್ಲಿ ಅತ್ಯಧಿಕ ಮಳೆ ನಿರೀಕ್ಷೆ ಇದೆ. ಮಳೆ ಕೊರತೆಯಿಂದಾಗಿ ಪಶ್ಚಿಮ ಘಟ್ಟಗಳ ಮೂಲಕ ಹರಿದು ಬರುವ ನದಿಗಳ ಒಳಹರಿವು ಕಡಿಮೆ ಆಗಿದೆ. ಇದರ ಪರಿಣಾಮ ರಾಜ್ಯದ ಪ್ರಮುಖ ಜಲಾಶಗಯಳ ಮೇಲಾಗಿದ್ದು, ಒಳ ಹರಿವು ತಗ್ಗಿದೆ. ಹೊರ ಹರಿವು ಏರಿಕೆ ಆಗಿದೆ. ಇಂದು ಅಕ್ಟೋಬರ್ 20ರಂದು KRS, ಆಲಮಟ್ಟಿ, ಕಬಿನಿ, ತುಂಗಭದ್ರಾ ಸೇರಿದಂತೆ ವಿವಿಧ ಅಣೆಕಟ್ಟುಗಳ ನೀರಿನ ಸಂಗ್ರಹ ಎಷ್ಟಿದೆ.
ತುಂಗಭದ್ರಾ ಜಲಾಶಯದಲ್ಲಿ ಗರಿಷ್ಠ 150 ಟಿಎಂಸಿಯಲ್ಲಿ ಕೇವಲ 53 ಟಿಎಂಸಿಯಷ್ಟು ಮಾತ್ರವೇ ನೀರಿದೆ. ಇದರಲ್ಲಿ ನವೆಂಬರ್ ಮತ್ತು 2027ರ ಮೇ ವರೆಗೆ ವಿವಿಧ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಬರಗಾಲ, ಬೇಸಿಗೆ ಹಿನ್ನೆಲೆಯಲ್ಲಿ ನೀರಾವರಿಗೆ ಈ ಅಣೆಕಟ್ಟಿನ ನೀರೇ ಆಧಾರವಾಗಿದೆ. ತುಂಗಭದ್ರಾ ಎಡದಂತೆ, ಬಲದಂಡೆ ಕಾಲುವೆ, ಗಣೇಕಲ ಜಲಾಶಯಕ್ಕೆ ಹಾಗೂ ವಿವಿಧ ನೀರಿನ ಮೂಲಗಳಿಗೆ ನೀರು ಬಿಡಲು ನಿರ್ಧರಿಸಲಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಅವರು ತಿಳಿಸಿದ್ದಾರೆ.

ಪ್ರಮುಖ ಜಲಾಶಯಗಳ ನೀರಿನ ಮಟ್ಟ
KRS ಜಲಾಶಯ
ಡ್ಯಾಂ ಗರಿಷ್ಠ ಮಟ್ಟ: 49.45 ಟಿಎಂಸಿ
ಇಂದಿನ ಮಟ್ಟ: 23.81 ಟಿಎಂಸಿ
ಒಳಹರಿವು: 4918 ಕ್ಯೂಸೆಕ್ಸ್
ಹೊರ ಹರಿವು: 1399ಕ್ಯೂಸೆಕ್ಸ್
ತುಂಗಭದ್ರಾ ಅಣೆಕಟ್ಟು
ಡ್ಯಾಂ ಗರಿಷ್ಠ ಮಟ್ಟ: 105.79 ಟಿಎಂಸಿ
ಇಂದಿನ ಮಟ್ಟ: 54.48 ಟಿಎಂಸಿ
ಒಳಹರಿವು: 00 ಕ್ಯೂಸೆಕ್ಸ್
ಹೊರ ಹರಿವು: 12088 ಕ್ಯೂಸೆಕ್ಸ್
ಕಬಿನಿ ಜಲಾಶಯ
ಡ್ಯಾಂ ಗರಿಷ್ಠ ಮಟ್ಟ: 19.52 ಟಿಎಂಸಿ
ಇಂದಿನ ಮಟ್ಟ: 11.12 ಟಿಎಂಸಿ
ಒಳಹರಿವು: 1448 ಕ್ಯೂಸೆಕ್ಸ್
ಹೊರ ಹರಿವು: 500 ಕ್ಯೂಸೆಕ್ಸ್
ಲಿಂಗನಮಕ್ಕಿ ಡ್ಯಾಂ ಮಟ್ಟ
ಡ್ಯಾಂ ಗರಿಷ್ಠ ಮಟ್ಟ: 151.75 ಟಿಎಂಸಿ
ಇಂದಿನ ಮಟ್ಟ: 77.52 ಟಿಎಂಸಿ
ಒಳಹರಿವು: 580 ಕ್ಯೂಸೆಕ್ಸ್
ಹೊರ ಹರಿವು: 2870 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ
ಡ್ಯಾಂ ಗರಿಷ್ಠ ಮಟ್ಟ: 123.08 ಟಿಎಂಸಿ
ಇಂದಿನ ಮಟ್ಟ: 89.27 ಟಿಎಂಸಿ
ಒಳಹರಿವು: 00 ಕ್ಯೂಸೆಕ್ಸ್
ಹೊರ ಹರಿವು: 1862 ಕ್ಯೂಸೆಕ್ಸ್
ಹಾರಂಗಿ ಜಲಾಶಯ
ಡ್ಯಾಂ ಗರಿಷ್ಠ ಮಟ್ಟ: 8.50 ಟಿಎಂಸಿ
ಇಂದಿನ ಮಟ್ಟ: 4.77 ಟಿಎಂಸಿ
ಒಳಹರಿವು: 613 ಕ್ಯೂಸೆಕ್ಸ್
ಹೊರ ಹರಿವು: 500 ಕ್ಯೂಸೆಕ್ಸ್
ಹೇಮಾವತಿ ಅಣೆಕಟ್ಟು
ಡ್ಯಾಂ ಗರಿಷ್ಠ ಮಟ್ಟ: 37.10 ಟಿಎಂಸಿ
ಇಂದಿನ ಮಟ್ಟ: 15.90 ಟಿಎಂಸಿ
ಒಳಹರಿವು: 1191 ಕ್ಯೂಸೆಕ್ಸ್
ಹೊರ ಹರಿವು: 300 ಕ್ಯೂಸೆಕ್ಸ್


Click it and Unblock the Notifications
