ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಹಸಿರು ಕಟ್ಟಡ ಪರಿಷತ್ತಿನ ಪಟ್ಟಿಯಲ್ಲಿ ಕರ್ನಾಟಕ ನಂ.2

|
Google Oneindia Kannada News

ಅಮೆರಿಕದ ಹಸಿರು ಕಟ್ಟಡ ಪರಿಷತ್ತು (ಯುಎಸ್ ಜಿಬಿಸಿ) ಇತ್ತೀಚೆಗಷ್ಟೇ 'ಲೀಡ್' (ಇಂಧನ ಹಾಗೂ ಪರಿಸರದ ವಿನ್ಯಾಸ)- ವಿಶ್ವದ ಅತ್ಯಂತ ಪ್ರಮುಖ ಹಸಿರು ಕಟ್ಟಡ ರೇಟಿಂಗ್ ವ್ಯವಸ್ಥೆ, ಭಾರತದ ಹತ್ತು ಪ್ರಮುಖ ರಾಜ್ಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಭಾರತದಲ್ಲಿ ಎರಡನೇ ವರ್ಷ ಈ ಪಟ್ಟಿ ಬಿಡುಗಡೆಯಾಗುತ್ತಿದ್ದು, ಇದು ಲೀಡ್ ನ ಒಟ್ಟು ಚದರ ಅಡಿ (ಜಿಎಸ್ ಎಫ್) ನಿಯಮಗಳ ಅನುಸಾರ 2018ರ ಡಿಸೆಂಬರ್ 31ರಂದು ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಶ್ರೇಯಾಂಕ ಪಟ್ಟಿ ತಯಾರಿಸಲಾಗುತ್ತದೆ.

ಈ ಕುರಿತು ವಿವರಣೆ ನೀಡಿರುವ ಯುಎಸ್ ಜಿಬಿಸಿ ಹಾಗೂ ಗ್ರೀನ್ ಬ್ಯುಸಿನೆಸ್ ಸರ್ಟಿಫಿಕೇಷನ್ ಐಎನ್ ಸಿ (ಜಿಬಿಸಿಐ) ಆಗ್ನೇಯ ಏಷಿಯಾ ಹಾಗೂ ಮಧ್ಯಪೂರ್ವ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣನ್ ಪದ್ಮನಾಭನ್, 'ಭಾರತ ಹಸಿರು ಕಟ್ಟಡ ವಲಯದಲ್ಲಿ ಮುಂಚೂಣಿಯಲ್ಲಿದ್ದು, ಪ್ರತಿ ವರ್ಷದ ನಿರಂತರ ಪ್ರಗತಿ ಕಾಣುತ್ತಿದೆ' ಎಂದಿದ್ದಾರೆ.

ಇನ್ಫೋಸಿಸ್ ಮೈಸೂರು ಕ್ಯಾಂಪಸ್‍ಗೆ ಅಮೆರಿಕದ ಗ್ರೀನ್ ಪ್ರಶಸ್ತಿಇನ್ಫೋಸಿಸ್ ಮೈಸೂರು ಕ್ಯಾಂಪಸ್‍ಗೆ ಅಮೆರಿಕದ ಗ್ರೀನ್ ಪ್ರಶಸ್ತಿ

'ಹಲವು ಸರ್ಕಾರಿ ಏಜೆನ್ಸಿಗಳು ಹಾಗೂ ರಾಜ್ಯ ಸರ್ಕಾರಗಳು ಲೀಡ್ ಯೋಜನೆ ಅಡಿಯಲ್ಲಿ ಪ್ರೋತ್ಸಾಹಧನವನ್ನು ನೀಡಲು ಆರಂಭಿಸಿವೆ. ಹಾಗೂ, ವ್ಯವಹಾರ, ಶೈಕ್ಷಣಿಕ ಸಂಸ್ಥೆಗಳು ಹಾಗೂ ದೇಶದ ಎಲ್ಲಾ ವಲಯದ ಲಾಭರಹಿತಗಳು ಸಂಸ್ಥೆಗಳು (ಎನ್ ಜಿಒ) ಲೀಡ್ ಗೆ ಬದ್ಧವಾಗಿವೆ. ಈ ನಾಯಕರು ಆಸಕ್ತಿ ತೋರಿ, ಹಸಿರು ಕಟ್ಟಡದ ಕರೆಯನ್ನು ಸ್ವೀಕರಿಸುತ್ತಿದ್ದಾರೆ. ಸುಸ್ಥಿರತೆಯನ್ನು ಸುಧಾರಣೆ ತರುತ್ತಿದ್ದಾರೆ. ಆರೋಗ್ಯ ಹಾಗೂ ಪರಿಸರ ಸ್ನೇಹಿ ಕಟ್ಟಡಗಳು ಹಾಗೂ ಸಮುದಾಯದ ಜನರ ಜೀವನ ಗುಣಮಟ್ಟ ಸುಧಾರಣೆಗೆ ಕೆಲಸ ಮಾಡುವತ್ತ ಆಸಕ್ತಿ ತೋರುತ್ತಿದ್ದಾರೆ' ಎಂದರು.

ಅಂತಾರಾಷ್ಟ್ರೀಯ ಸುಸ್ಥಿರತೆಯ ಉತ್ಕೃಷ್ಟತೆಯ ಚಿಹ್ನೆ

ಅಂತಾರಾಷ್ಟ್ರೀಯ ಸುಸ್ಥಿರತೆಯ ಉತ್ಕೃಷ್ಟತೆಯ ಚಿಹ್ನೆ

ಲೀಡ್ ಒಂದು ಅಂತಾರಾಷ್ಟ್ರೀಯ ಸುಸ್ಥಿರತೆಯ ಉತ್ಕೃಷ್ಟತೆಯ ಚಿಹ್ನೆಯಾಗಿದ್ದು, ಕಟ್ಟಡಗಳು ಇಂಗಾಲವನ್ನು ಹೊರಸೂಸುವುದನ್ನು ಕಡಿಮೆಗೊಳಿಸುವ, ಸಂಪನ್ಮೂಲಗಳನ್ನು ಸಂರಕ್ಷಣೆ ಹಾಗೂ ವೆಚ್ಚದ ಕಡಿತವನ್ನು ಸೂಚಿಸುವುದರ ಜೊತೆಗೆ, ಸುಸ್ಥಿರ ಅಭ್ಯಾಸಕ್ಕೆ ಒತ್ತು ನೀಡಿ ಆರೋಗ್ಯಪೂರ್ಣ ಪರಿಸರ ಸೃಷ್ಟಿಗೆ ಹೆಚ್ಚಿನ ಮಹತ್ವ ನೀಡುತ್ತದೆ. ಲೀಡ್ ಪ್ರಮಾಣಪತ್ರ ಪಡೆದಿರುವ ಕಟ್ಟಡಗಳು ಕಡಿಮೆ ಇಂಧನ ಹಾಗೂ ನೀರಿನ ಬಳಕೆ, ವಾಯು ಮಾಲಿನ್ಯ ಕಡಿತ, ಒಳಾಂಗಣದಲ್ಲಿ ಸ್ವಚ್ಛ ಗಾಳಿ ಒದಗಿಸುವ ಮೂಲಕ ಜನರಿಗೆ ಆರೋಗ್ಯಪೂರ್ಣ ಸ್ಥಳ ಒದಗಿಸುತ್ತದೆ. ಹಾಗೂ ವ್ಯವಹಾರಗಳು ಹಾಗೂ ಕುಟುಂಬಗಳ ಹಣ ಉಳಿಕೆಗೆ ನೆರವಾಗುತ್ತದೆ. ಇವು ಸಾಂಪ್ರದಾಯಿಕ ಕಟ್ಟಡಗಳಿಗೆ ಹೋಲಿಸಿದರೆ, ಇವುಗಳು ನಿರ್ಮಾಣ ಹಂತದಲ್ಲಿ ಮಾತ್ರವಲ್ಲದೆ, ಅದನ್ನು ಬಳಕೆ ಮಾಡುವಾಗ ಹಾಗೂ ಕಟ್ಟಡದ ಸಂಪೂರ್ಣ ಜೀವಿತಾವಧಿಯಲ್ಲಿ ಕಡಿಮೆ ಮಾಲಿನ್ಯ ಉತ್ಪಾದಿಸುತ್ತದೆ.

ಶ್ರೇಯಾಂಕ-ರಾಜ್ಯ- ಲೀಡ್- ಪ್ರಮಾಣೀಕೃತ ಯೋಜನೆಗಳ ಸಂಖ್ಯೆ

ಶ್ರೇಯಾಂಕ-ರಾಜ್ಯ- ಲೀಡ್- ಪ್ರಮಾಣೀಕೃತ ಯೋಜನೆಗಳ ಸಂಖ್ಯೆ

ಶ್ರೇಯಾಂಕ-ರಾಜ್ಯ- ಲೀಡ್- ಪ್ರಮಾಣೀಕೃತ ಯೋಜನೆಗಳ ಸಂಖ್ಯೆ -ಪ್ರಮಾಣಿಕೃತಿ ಒಟ್ಟು ಚದರ ಅಡಿ (ಜಿಎಸ್ ಎಫ್)- ದಶಲಕ್ಷಗಳಲ್ಲಿ
1. ಮಹಾರಾಷ್ಟ್ರ -334-106,057,234
2. ಕರ್ನಾಟಕ-232-85,887,580
3.ತಮಿಳುನಾಡು-157-58,809,553
4.ಹರಿಯಾಣ-125-56,351,837
5.ಉತ್ತರಪ್ರದೇಶ-82-45,734,497
6. ತೆಲಂಗಾಣ-91-40,609,702
7.ದೆಹಲಿ-57-27,929,152
8.ಗುಜರಾತ್ -53-23,990,638
9.ಪಶ್ಚಿಮ ಬಂಗಾಳ-35-20,898,539
10.ರಾಜಸ್ತಾನ -19-9,221,494

ಅಮೆರಿಕದ ಹಸಿರು ಕಟ್ಟಡ ಪರಿಷತ್ತಿನ ಲೀಡ್

ಅಮೆರಿಕದ ಹಸಿರು ಕಟ್ಟಡ ಪರಿಷತ್ತಿನ ಲೀಡ್

ಪಟ್ಟಿಯ ಪ್ರಕಾರ, ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನಂತರ, ತಮಿಳುನಾಡು ಹಾಗೂ ಹರಿಯಾಣ ಸ್ಥಾನ ಪಡೆದುಕೊಂಡಿದೆ. ಲೀಡ್ ನ ಈ ಪ್ರಮುಖ ಹತ್ತು ರಾಜ್ಯಗಳು 840 ದಶಲಕ್ಷ ಭಾರತೀಯರಿಗೆ ಆಶ್ರಯ ನೀಡಿದ್ದು, ಒಟ್ಟಾರೆ 475 ಒಟ್ಟು ಚದರ ಅಡಿ ಲೀಡ್- ಪ್ರಮಾಣೀಕೃತ ಸ್ಥಳವನ್ನು ಹೊಂದಿದೆ.

ಅಮೆರಿಕದ ಹಸಿರು ಕಟ್ಟಡ ಪರಿಷತ್ತಿನ ಲೀಡ್ ಹಸಿರು ಕಟ್ಟಡ ಪ್ರಮಾಣೀಕರಣ ವ್ಯವಸ್ಥೆ, ಹಸಿರು ಕಟ್ಟಡಗಳು ವಿನ್ಯಾಸ, ನಿರ್ಮಾಣ, ನಿರ್ವಹಣೆ ಹಾಗೂ ಕಾರ್ಯ ಚಟುವಟಿಕೆಗಳಿಗೆ ಪ್ರಮುಖ ಕಾರ್ಯಕ್ರಮವಾಗಿದೆ. ವಾಣಿಜ್ಯ ಲೀಟ್ ರೇಟಿಂಗ್ ವ್ಯವಸ್ಥೆಯಲ್ಲಿ ಸದ್ಯ 98 ಸಾವಿರಕ್ಕೂ ಹೆಚ್ಚು ಯೋಜನೆಗಳು ಭಾವಹಿಸಿದ್ದು, 175 ದೇಶಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 21 ಶತಕೋಟಿ ಚದರ ಅಡಿಯ ನಿರ್ಮಾಣ ಪ್ರದೇಶವನ್ನು ಒಳಗೊಂಡಿದೆ.

ಅಮೆರಿಕದ ಗ್ರೀನ್ ಕಟ್ಟಡ ಪರಿಷತ್ತಿನ ಕುರಿತು

ಅಮೆರಿಕದ ಗ್ರೀನ್ ಕಟ್ಟಡ ಪರಿಷತ್ತಿನ ಕುರಿತು

ಅಮೆರಿಕದ ಗ್ರೀನ್ ಕಟ್ಟಡ ಪರಿಷತ್ತು (ಯುಎಸ್ ಜಿಬಿಸಿ), ಇಂಧನ ಉಳಿತಾಯ ಹಸಿರು ಕಟ್ಟಡಗಳ ಮೂಲಕ ಸಮೃದ್ಧ ಹಾಗೂ ಸುಸ್ಥಿರ ಭವಿಷ್ಯವನ್ನು ಒದಗಿಸಲು ಬದ್ಧವಾಗಿದೆ. ಯುಎಸ್ ಜಿಬಿಸಿ , ಲೀಡ್ ಹಸಿರು ಕಟ್ಟಡಗಳ ನಿರ್ಮಾಣ ಯೋಜನೆ, ತ್ವರಿತ ಶಿಕ್ಷಣ ಯೋಜನೆಗಳು, ಸ್ಥಳೀಯ ಸಮುದಾಯಗಳ ನಾಯಕರ ಅಂತಾರಾಷ್ಟ್ರೀಯ ಸಂಪರ್ಕ ಜಾಲ, ವಾರ್ಷಿಕ ಹಸಿರು ಕಟ್ಟಡ ಅಂತಾರಾಷ್ಟ್ರೀಯ ಸಮಾವೇಶ ಹಾಗೂ ಪ್ರದರ್ಶನ, ಹಸಿರು ಶಾಲೆಗಳ ಕೇಂದ್ರ ಹಾಘೂ ಸಮುದಾಯಗಳಲ್ಲಿ ಹಸಿರು ಕಟ್ಟಡಗಳನ್ನು ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಹಾಗೂ ಪ್ರೋತ್ಸಾಹಿಸುವ ಸಾರ್ವಜನಿಕ ನೀತಿಯ ಪರ ನಿಲುವುಗಳ ಮೂಲಕ ಮಾರುಕಟ್ಟೆಯಲ್ಲಿ ಪರಿವರ್ತನೆ ತರುವ ಯೋಜನೆಯತ್ತ ಕೆಲಸ ಮಾಡುತ್ತಿದೆ. ಹೆಚ್ಚಿನ ಮಾಹಿತಿಗೆ usgbc.org ಗೆ ಭೇಟಿ ನೀಡಿ, ಜೊತೆಗೆ, ಟ್ವಿಟರ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಹಾಗೂ ಲಿಂಕೆಡೆನ್ ಮೂಲ ಕೂಡ ಸಂಪರ್ಕ ಹೊಂದಬಹುದು.

English summary
Today, the U.S. Green Building Council (USGBC) released the list of India’s Top 10 States for LEED (Leadership in Energy and Environmental Design), the world’s most widely used green building rating system. This is the second year that the list has been released in India and it ranks states in terms of cumulative gross
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X