Rajyotsava Award 2026: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; 71 ಸಾಧಕರಿಗೆ ಒಲಿದ ಗೌರವ, ಇಲ್ಲಿದೆ ಸಂಪೂರ್ಣ ಪಟ್ಟಿ

ಬೆಂಗಳೂರು; ಕರ್ನಾಟಕ ರಾಜ್ಯ ಸರ್ಕಾರವು ನವೆಂಬರ್ 1ರಂದು ಅದ್ಧೂರಿ ರಾಜ್ಯೋತ್ಸವ 2026 ಆಚರಣೆಗೆ ಸಿದ್ಧವಾಗಿದೆ. ಇದರ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಕಲೆ, ಚಿತ್ರಕಲೆ, ಮಾಧ್ಯಮ, ಸಾಮಾಜ ಸೇವೆ, ಶಿಕ್ಷಣ, ಯಕ್ಷಗಾನ, ಸಂಗೀತ, ಕೃಷಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದವರಿಗೆ 'ರಾಜ್ಯೋತ್ಸವ 2026 ಪ್ರಶಸ್ತಿ' ಪ್ರಕಟಿಸಿದೆ. ಯಾವ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಸಿಕ್ಕಿದೆ ಎಂಬ ಸಂಪೂರ್ಣ ಮಾಹಿತಿ, ಪಟ್ಟಿ ಇಲ್ಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಹಿಂದೆ ರಚಿಸಿದ್ದ ಸಮಿತಿ ಕೈಗೊಂಡ ಅಂತಿಮ ನಿರ್ಧಾರದಡಿ ಒಟ್ಟು 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನವೆಂಬರ್ 1 ರಂದು ನೀಡಿ ಗೌರವಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ. ಈ ಕೆಳಗಿನ ಪಟ್ಟಿಯಲ್ಲಿ ಪ್ರಶಸ್ತಿಗೆ ಭಾಜನರಾದವರು ಹೆಸರು-ಕ್ಷೇತ್ರ ಮತ್ತು ಅವರ ಊರು/ಜಿಲ್ಲೆ ವಿವರ ನೀಡಲಾಗಿದೆ.

Karnataka Rajyotsava Awards 2026

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ‌ ಪಟ್ಟಿ

1. ದಾವಲಸಾಬ ಅತ್ತಾರ (ಜಾನಪದ), ಕೊಪ್ಪಳ
2. ಶ್ರೀಮತಿ ಗೌರಮ್ಮ (ಜಾನಪದ), ಚಾಮರಾಜನಗರ
3. ಪಾಂಡಪ್ಪ ದೇವಲಪ್ಪ ಲಮಾಣಿ (ಜಾನಪದ), ಗದಗ
4. ಎ.ಆರ್‌. ಸತ್ಯನಾರಾಯಣ (ಜಾನಪದ), ಬೆಂಗಳೂರು ದಕ್ಷಿಣ
5. ಈರಣ್ಣ ರುದ್ರಾಕ್ಷಿ (ಜಾನಪದ), ರಾಯಚೂರು

6. ಶಿವಲಿಂಗಪ್ಪ ತಂದೆ ರಾಮಣ್ಣ (ಜಾನಪದ), ಕೊಪ್ಪಳ
7. ಸುರೇಶ್‌ ರಾಮಚಂದ್ರ ಜೋಶಿ (ಜಾನಪದ), ವಿಜಯಪುರ
8. ಡಾ. ಸಿ.ಎ ಶ್ರೀಧರ್‌ (ಸಂಗೀತ), ಮೈಸೂರು
9. ಡಾ. ಎ. ನಾರಾಯಣ ಸ್ವಾಮಿ (ಸಂಗೀತ) ಹಾಸನ
10. ಬಿ.ಮುರುಳಿ (ಸಂಗೀತ), ಬೆಂಗಳೂರು ಗ್ರಾಮಾಂತರ
11. ಡಾ. ಸತ್ಯನಾರಾಯಣ ರಾಜು (ನೃತ್ಯ), ಬೆಂಗಳೂರು ನಗರ
12. ಬಾಬಜೀ ವೆಂಕಟರಮಣ, (ಚಲನಚಿತ್ರ) ಧಾರವಾಡ
13. ಅಶೋಕ್ - ಚಲನಚಿತ್ರ - ಬೆಂಗಳೂರು ಗ್ರಾಮಾಂತರ
14. ಕೆ. ಎಸ್. ರವೀಂದ್ರ ನಾಥ್ - ಕಿರುತೆರೆ - ಬೆಂಗಳೂರು ನಗರ
15. ಗೋಪಾಲ ಗಾಣಿಗ - ಯಕ್ಷಗಾನ - ಉಡುಪಿ
16. ಶ್ರೀಮತಿ ಹುಲಿಗೆಮ್ಮ - ಬಯಲಾಟ - ಬಳ್ಳಾರಿ
17. ಡಿ. ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ - ರಂಗಭೂಮಿ - ಬೆಂಗಳೂರು ಗ್ರಾಮಾಂತರ
18. ಶ್ರೀಮತಿ ಕೆ. ಜಯಲಕ್ಷ್ಮಿ ಪಾಟೀಲ್ - ರಂಗಭೂಮಿ - ಧಾರವಾಡ
19. ಜಿ. ಡಿ. ತಿಮ್ಮಯ್ಯ - ರಂಗಭೂಮಿ - ಚಿತ್ರದುರ್ಗ
20. ಶ್ರೀಮತಿ ಕೆ. ಆರ್. ಸುಮತಿ - ರಂಗಭೂಮಿ - ಮೈಸೂರು
21. ಹೆಚ್. ವಿ. ಪುಟ್ಟವೀರಪ್ಪ - ರಂಗಭೂಮಿ - ಬೆಂಗಳೂರು ದಕ್ಷಿಣ
22. ಹೊನ್ನ ನಾಯಕ್ - ರಂಗಭೂಮಿ - ಮೈಸೂರು
23. ಜಿ. ವಿ. ಹಂಸಾನಂದ ಆಚಾರ್ಯ - ಶಿಲ್ಪಕಲೆ - ವಿಜಯನಗರ
24. ಕಾಡಪ್ಪ - ಶಿಲ್ಪಕಲೆ - ಬೆಳಗಾವಿ
25. ಸಿ. ಬಿ. ಸೋಮಶೆಟ್ಟಿ - ಚಿತ್ರಕಲೆ - ಬೀದರ್
26. ಶ್ರೀಮತಿ ಶಾಂತಾಬಾಯಿ ಮೋಹನ್ ಕಾಂಬಳೆ - ಕರಕುಶಲ - ಬೀದರ್
27. ಹೆಚ್. ಕೆ. ಶ್ರೀಕಂಠು - ಕೃಷಿ - ಬೆಂಗಳೂರು ದಕ್ಷಿಣ
28.ಬಿ. ಎ. ಚನ್ನಪ್ಪಗೌಡ - ಕೃಷಿ - ಬೆಂಗಳೂರು ನಗರ
29. ಡಾ. ಸ್ವಾಮಿ ಆನಂದ್ ಆರ್. - ಪರಿಸರ - ಮೈಸೂರು
30. ಪ್ರೊ. ರಾಜಾಸಾಬ್ ಎ. ಎಚ್. - ವಿಜ್ಞಾನ-ತಂತ್ರಜ್ಞಾನ - ಕಲಬುರಗಿ
31. ಡಾ. ರಾಜಶೇಖರ ಮೂರ್ತಿ - ವಿಜ್ಞಾನ-ತಂತ್ರಜ್ಞಾನ - ಹೊರದೇಶ (ಕೆನಡಾ)
32. ಉಮಾಪತಿ - ಮಾಧ್ಯಮ - ಚಿತ್ರದುರ್ಗ
33. ಶ್ರೀಮತಿ ಎಂ. ಪಿ. ಸುಶೀಲ - ಮಾಧ್ಯಮ - ಬೆಂಗಳೂರು ನಗರ
34. ವಿಶ್ವನಾಥ್ ಸುವರ್ಣ - ಮಾಧ್ಯಮ/ಛಾಯಾಚಿತ್ರ - ದಕ್ಷಿಣ ಕನ್ನಡ
35. ಶ್ರೀಮತಿ ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ - ಸಂಕೀರ್ಣ - ಬಾಗಲಕೋಟೆ
36. ಡಿ. ಎಸ್. ಚೌಗಲೆ - ಸಂಕೀರ್ಣ - ಬೆಳಗಾವಿ
37. ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ - ಸಂಕೀರ್ಣ - ಬೆಂಗಳೂರು ನಗರ
38. ಬಿ. ಪಿ. ಆರಾಧ್ಯ - ಸಂಕೀರ್ಣ/(ವಾಸ್ತುಶಾಸ್ತ್ರ) - ಬೆಂಗಳೂರು ದಕ್ಷಿಣ
39. ರವಿ ಪ್ರವೀಣ್ ನೊರೋನಾ - ಸಂಕೀರ್ಣ - ಬೆಂಗಳೂರು ನಗರ
40. ಎಂ. ಆರ್. ಜೈಶಂಕರ್ - ಸಂಕೀರ್ಣ - ಚಿಕ್ಕಮಗಳೂರು
41. ಪ್ರಸಾದ್ ಬಿದ್ದಪ್ಪ - ಸಂಕೀರ್ಣ - ಕೊಡಗು
42. ವಾಸಪ್ಪ ಯಲ್ಲಪ್ಪ ಕುಸಗೂರ - ಸಂಕೀರ್ಣ - ಹಾವೇರಿ
43. ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿ - ಸಮಾಜ ಸೇವೆ - ಗದಗ
44. ಬಸವರಾಜು - ಸಮಾಜ ಸೇವೆ - ಮಂಡ್ಯ
45. ಕಾಗೋಡು ತಿಮ್ಮಪ್ಪ - ಸಮಾಜ ಸೇವೆ - ಶಿವಮೊಗ್ಗ
46. ಡಾ. ಎಸ್. ಎಮ್. ಎಲಿ - ಸಮಾಜ ಸೇವೆ - ದಾವಣಗೆರೆ
47. ಡಾ. ಜಿ. ಎಸ್. ಚಂದ್ರ ಶೇಖರ್ (ಆದರ್ಶ ಚಾರಿಟಬಲ್ ಟ್ರಸ್ಟ್) - ಸಮಾಜ ಸೇವೆ - ಉತ್ತರ ಕನ್ನಡ
48. ಡಾ. ಶಿವಾನಂದ ಮಹಾಸ್ವಾಮಿ - ಸಮಾಜ ಸೇವೆ - ಕಲಬುರಗಿ
49. ಕೃಷ್ಣೇಗೌಡ ಬಿನ್ ವೆಂಕಟರಾಯಪ್ಪ - ಸಮಾಜ ಸೇವೆ - ಚಿಕ್ಕಬಳ್ಳಾಪುರ
50. ಎ. ಸಿ. ಭಂಡಾರಿ (ಅ.ಭಾ. ತುಳು ಒಕ್ಕೂಟ) - ಸಮಾಜ ಸೇವೆ - ದಕ್ಷಿಣ ಕನ್ನಡ
51. ಶ್ರೀಮತಿ ಗುರಮ್ಮ ಹಂಪಯ್ಯ ಸಂಕಿನಮಠ - ಸಮಾಜ ಸೇವೆ - ಬಾಗಲಕೋಟೆ
52. ಡಾ. ವಿಜಯೇಂದ್ರ ಹೊನ್ನೂರಪ್ಪ - ವೈದ್ಯಕೀಯ - ಬೆಂಗಳೂರು ನಗರ
53. ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ - ವೈದ್ಯಕೀಯ - ಬೆಳಗಾವಿ
54. ಶ್ರೀಮತಿ ತೆರೆಸಾ ಭಟ್ಟಾಚಾರ್ಯ - ಆಡಳಿತ - ಬೆಂಗಳೂರು ನಗರ
55. ಡಾ. ಕೆ. ಎಸ್. ಸೋಮಶೇಖರ್ - ಆಡಳಿತ - ಹೊರನಾಡು
56. ಡಾ. ಕೆ. ಎನ್. ವೆಂಕಟ ಕೃಷ್ಣಾರಾವ್ - ಇಂಜಿನಿಯರಿಂಗ್ - ಚಿಕ್ಕಬಳ್ಳಾಪುರ
57. ಡಾ. ಇಂದಿರಾ ಹೆಗಡೆ - ಸಾಹಿತ್ಯ - ದಕ್ಷಿಣ ಕನ್ನಡ
58. ಶ್ರೀ ವೀರಹನುಮಾನ್ - ಸಾಹಿತ್ಯ - ರಾಯಚೂರು
59. ಪ್ರೊ. ನಾರಾಯಣಘಟ್ಟ - ಸಾಹಿತ್ಯ - ತುಮಕೂರು
60. ಸಿ. ಮಹೇಶ್ವರಪ್ಪ ಚಟ್ನಳ್ಳಿ - ಸಾಹಿತ್ಯ - ಚಿಕ್ಕಮಗಳೂರು
61. ಡಾ. ಕರೀಗೌಡ ಬೀಚನಹಳ್ಳಿ - ಸಾಹಿತ್ಯ - ತುಮಕೂರು
62. ಡಾ. ಸಿದ್ಧರಾಮ ಹೊನ್ಕಲ್ - ಸಾಹಿತ್ಯ - ಯಾದಗಿರಿ
63. ಫಾ|| ಜೋಸೆಫ್ (ಕ್ರೈಸ್ಟ್ ವಿಶ್ವವಿದ್ಯಾಲಯ, ಉಪ ಕುಲಪತಿಗಳು) - ಶಿಕ್ಷಣ - ಬೆಂಗಳೂರು ನಗರ
64. ಶಾಂತಪ್ಪ ದಶವಂತ - ಶಿಕ್ಷಣ - ವಿಜಯಪುರ
65. ಶ್ರೀಮತಿ ಸಂಗೀತಾ ಎನ್. ಕಟ್ಟಿಮನಿ - ಶಿಕ್ಷಣ - ಕಲಬುರಗಿ
66. ಡಾ. ಎನ್. ಎಸ್. ರಂಗರಾಜು - ಶಿಕ್ಷಣ - ಮೈಸೂರು
67. ಬಿ. ವಿ. ಆಚಾರ್ಯ - ನ್ಯಾಯಾಂಗ - ಉಡುಪಿ
68. ರಮೇಶ್ ಗೌಡ (ಮಾಜಿ ಅಧ್ಯಕ್ಷರು, ಅಕ್ಕ ಅಮೇರಿಕಾ) - ಹೊರನಾಡು/ಹೊರದೇಶ
69. ಜಿಮ್ ರವಿ - ಕ್ರೀಡೆ - ಕೋಲಾರ
70. ಡಾ. ಎ. ಬಿ. ಸುಬ್ಬಯ್ಯ - ಕ್ರೀಡೆ - ಕೊಡಗು
71. ಎಂ. ಗಿರೀಶ್ - ಕ್ರೀಡೆ - ಬೆಂಗಳೂರು ನಗರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+