Karnataka Heavy Rain Alert: ಈ 6 ಜಿಲ್ಲೆಗಳೀಗೆ ನಾಳೆ ಶುಕ್ರವಾರ ಭಾರಿ ಮಳೆ, 'ಯೆಲ್ಲೋ ಅಲರ್ಟ್' ಘೋಷಣೆ

ಬೆಂಗಳೂರು, ಜನವರಿ 04: ಕರ್ನಾಟಕ ರಾಜ್ಯದಲ್ಲಿ ಮತ್ತೆ ವರುಣಾರ್ಭಟ ಶುರುವಾಗು ಮುನ್ಸೂಚನೆ ದೊರೆತಿದೆ. ಬದಲಾದ ಹವಾಮಾನ ವೈಪರಿತ್ಯ, ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯದ ಒಟ್ಟು 6 ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಮುನ್ಸೂಚನೆ ಇದೆ. ಹೀಗಾಗಿ ಈ ಜಿಲ್ಲೆಗಳು 'ಹಳದಿ ಎಚ್ಚರಿಕೆ' (Yellow Alert) ಪಡೆದುಕೊಂಡಿದೆ. ಯಾವ ದಿನ ವ್ಯಾಪಕ ಮಳೆ?, ದಿಢೀರ್ ಹವಾಮಾನ ಬದಲಾವಣೆಗೆ ಕಾರಣಗಳನ್ನು ತಿಳಿಯಲು ಮುಂದೆ ಓದಿ.

ಕರ್ನಾಟಕದಲ್ಲಿ ಚಂಡಮಾರುತ (ಮೈಚಾಂಗ್) ಅಬ್ಬರ ಬಳಿಕ ತಮಿಳುನಾಡಿನ ಭಾಗದಲ್ಲಿನ ವೈಪರಿತ್ಯದಿಂದಾಗಿ ಮಳೆ ಆಗಿತ್ತು. ಅದನ್ನು ಬಿಟ್ಟರೆ, ಇತ್ತೀಚಿನ ದಿನಗಳಲ್ಲಿ ಚಳಿ, ಒಣಹವೆ, ತುಂತುರು ಮಳೆಯಷ್ಟೇ ಮುಂದುವರಿದಿತ್ತು.

Karnataka Rains:IMD Predicts Heavy Rain for 6 districts on Friday Jan 5, Yellow Alert declared

ಇದೀಗ ಮತ್ತೆ ಧಾರಾಕಾರ ಮಳೆಯ ಮುನ್ಸೂಚನೆ ಲಭಿಸಿದೆ. ಕರ್ನಾಟಕದ ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಶುಕ್ರವಾರ ಜನವರಿ 5ರಂದು ಒಂದು ದಿನ ಭಾರೀ ಮಳೆ ಸುರಿಯಲಿದೆ. ಈ ಪೈಕಿ ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಮೈಸೂರು, ಚಿಕ್ಕಮಗಳೂರು ಮತ್ತು ಹಾಸನ ಸೇರಿ ಆರು ಜಿಲ್ಲೆಗಳಲ್ಲಿ ನಾಳೆ ಅತ್ಯಧಿಕ ಮಳೆ ಆಗಲಿದೆ. ಈ ಸಂಬಂಧ ಈ ಜಿಲ್ಲೆಗಳಿಗೆ ಒಂದು ದಿನ ಯೆಲ್ಲೋ ಅಲರ್ಟ್ ಎಚ್ಚರಿಕೆ ಕೋಡಲಾಗಿದೆ.

ಶನಿವಾರ ಒಂದು ದಿನ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಮಳೆ ಅಬ್ಬರ ಹೆಚ್ಚಿರುವ ಕಾರಣ ಅಂದು ಹಳದಿ ಎಚ್ಚರಿಕೆ ಕೊಡಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಿಢೀರ್ ಭಾರಿ ಮಳೆ ಮುನ್ಸೂಚನೆಗೆ ಕಾರಣವೇನು?

ಕರ್ನಾಟಕಕ್ಕೆ ಹತ್ತಿರದಲ್ಲಿ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಪ್ರಾಥಮಿಕ ಹಂತದಲ್ಲಿದ್ದ ಅರಬ್ಬಿ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿ ಮತ್ತಷ್ಟು ತೀವ್ರಗೊಂಡು ಇದೀಗ ವಾಯುಭಾರ ಕಸಿತವಾಗಿ ಮಾರ್ಪಟ್ಟಿದೆ. ಈ ಭಾಗದಲ್ಲಿ ಗಾಳಿಯ ಬೀಸುವಿಕೆಯ ವೇಗ ಸಹ ನಿಧಾನವಾಗಿ ಹೆಚ್ಚಾಗುತ್ತಿದೆ. ಚಳಿ, ಶೀತ, ಮಂಜು ವಾತಾವರಣದ ಮಧ್ಯೆ ಭಾರಿ ಮಳೆ ಸೃಷ್ಟಿಗೆ ಇದೆ ಕಾರಣ ಎಂದು ಐಎಂಡಿ ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+