Rains: ಕರ್ನಾಟಕದಲ್ಲಿ 150 ವರ್ಷಗಳಲ್ಲೇ ಭೀಕರ ಮಳೆ ಕೊರತೆ! 2026ರಲ್ಲಿ ವಿಭಾಗವಾರು ಸೇರಿ 35% ಕಡಿಮೆ

ಬೆಂಗಳೂರು: ಕರ್ನಾಟಕ ರಾಜ್ಯವು ಕಳೆದ ಐದೂವರೆ ದಶಕಗಳಲ್ಲೇ ಅತ್ಯಂತ ಕೆಟ್ಟ ಮುಂಗಾರು ಮಳೆಯ ಅವಧಿಯನ್ನು 2026ರಲ್ಲಿ ಕಂಡಿದೆ. ಮುಂಗಾರು ಮಳೆ ಅಂತ್ಯವಾಗಿದ್ದು, ಈ ಜೂನ್ 1-ಸೆಪ್ಟೆಂಬರ್ 30ರ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಅಂದರೆ ಶೇ.35ರಷ್ಟು ಮಳೆ ದಾಖಲಾಗಿದೆ. 150 ವರ್ಷಗಳ ಹಿಂದೆ (1971)ರಲ್ಲಿ ಇದೇ ನಾಲ್ಕು ತಿಂಗಳ ಅವಧಿಯಲ್ಲಿ ಇದೇ ರೀತಿ ಕಡಿಮೆ ಮಳೆ ದಾಖಲಾಗಿತ್ತು ಎಂದು ಹವಾಮಾನ ತಜ್ಞರು ದೃಢಪಡಿಸಿದ್ದಾರೆ.

ಈ ವರ್ಷ ಬರಗಾಲ, ತೀವ್ರ ಮಳೆ ಕೊರತೆ ಕಂಡಿರುವ ರಾಜ್ಯದಲ್ಲಿ ಮಲೆನಾಡು, ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನೆಲ್ಲಡೆ ಮಳೆ ಕಡಿಮೆ ಆಗಿದೆ. ಉತ್ತರ ಒಳನಾಡಿನಲ್ಲಿ ಮುಂಗಾರಿನ ಕೊರತೆ ಹೆಚ್ಚಿದೆ. 2002ರಲ್ಲಿ ಶೇ.33ರಷ್ಟು ಮುಂಗಾರು ಮಳೆ ಕಡಿಮೆ ಆಗಿದ್ದು, ಬಿಟ್ಟರೆ ಈ ವರ್ಷ ಮತ್ತೆ ಮಳೆ ಕೊರತೆ ದಾಖಲಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಸಮಸ್ಯೆ ಉಂಟಾಗಿದ್ದು, ಬೆಳೆದ ಬೆಳೆ ಕೈಗೆ ಬಾರದ ಒಣಗಿ ಹೋಗಿದ್ದು, ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.

Karnataka Rain

ಶೇ.35ರಷ್ಟು ಕಡಿಮೆ ಮಳೆ, ಎಲ್ಲೆಲ್ಲಿ ಎಷ್ಟು ದಾಖಲಾಗಿದೆ?

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯಕ್ಕೆ ವಾಡಿಕೆ 852 ಮಿಲಿ ಮೀಟರ್ ಮಳೆ ಆಗಬೇಕಿತ್ತು, ಆದರೆ ಬದಲಾದ ಹವಾಮಾನ ಪ್ರಭಾವದಿಂದಾಗಿ ಕೇವಲ 551 ಮಿಲಿ ಮೀಟರ್ ದಾಖಲಾಗಿ ಶೇ. 35ರಷ್ಟು ಕೊರತೆ ಸೃಷ್ಟಿಸಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ತಿಳಿಸಿದೆ.

ವಿಭಾಗವಾರು ನೋಡುವುದಾದರೆ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಕರಾವಳಿ ಪ್ರದೇಶದಲ್ಲಿ ಮುಂಗಾರು ಮಳೆ ನಿರೀಕ್ಷಿತ 3101 ಮಿಲಿ ಮೀಟರ್ ಬದಲಾಗಿ, 2231ಮಿಮೀ (ಶೇ-28) ಕಡಿಮೆ ಮಳೆ ಆಗಿದೆ.

ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಕೊರತೆ

ಸದಾ ಹೆಚ್ಚು ಮಳೆ ಕಾಣುತ್ತಿದ್ದ ಮಲೆನಾಡು, ಕರಾವಳಿಯಲ್ಲೂ ಈ ಬಾರಿ ಬರದ ಛಾಯೆ ಆವರಿಸಿದೆ. ಮಳೆ ಕಡಿಮೆ ಆಗಿ, ಬಿಸಿಲಿನ ಅಬ್ಬರವೇ ಹೆಚ್ಚಾಗಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಒಳಗೊಂಡ ಮಲೆನಾಡು ಭಾಗದಲ್ಲಿ ವಾಡಿಕೆ 1556ಮಿಮೀ, ನಲ್ಲಿ ಆಗಿದ್ದು ಬರೀ 965 (-38% ಕಡಿಮೆ) ಮಿಲಿ ಮೀಟರ್ ಮಳೆ ದಾಖಲಾಗಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ರಾಮನಗರ, ಮಂಡ್ಯ, ಹಾಸನ, ಚಾಮರಾಜನಗರ, ತುಮಕೂರು, ದಾವಣಗೆರೆ, ವಿಜಯನಗರ, ಬಳ್ಳಾರಿ ಸೇರಿ ವಿವಿಧ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಒಳನಾಡಿನಲ್ಲಿ ಶೇ. -41ರಷ್ಟು ಮಳೆ ಕೊರತೆ ಆಗಿದೆ. ಬರಬೇಕಿದ್ದ ವಾಡಿಕೆ 369 ಮಿಲಿ ಮೀಟರ್‍‌ನಲ್ಲಿ ಬಂದಿದ್ದು ಕೇವಲ 217ಮಿಲಿ ಮೀಟರ್.

ಅದೇ ರೀತಿ ಹಾವೇರಿ, ಕೊಪ್ಪಳ, ಗದಗ, ಧಾರವಾಡ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಕಲಬುರಗಿ, ಬೀದರ್ ಸೇರಿದಂತೆ ರಾಜ್ಯದ ಉತ್ತರದ ಜಿಲ್ಲೆಗಳಿರುವ ಈ ಉತ್ತರ ಒಳನಾಡಿನಲ್ಲಿ ಅತ್ಯದಿಕ ಮಳೆ ಕೊರತೆ (ಶೇ-42 ಕಡಿಮೆ) ಉಂಟಾಗಿದೆ. ಇಲ್ಲಿ 479 ನಿರೀಕ್ಷಿತ ವಾಡಿಕೆ ಮಳೆ ಪೈಕಿ ಕೇವಲ 276 ಮಿಲಿ ಮೀಟರ್ ಮಾತ್ರವೇ ಮಳೆ ಸುರಿದಿದೆ. ಮಳೆ ಕಡಿಮೆ ಹಿನ್ನೆಲೆಯಲ್ಲಿ ಕಳೆದ ಮೂರು ವಾಗಳಿಂದ ಈ ಭಾಗದ ಜಿಲ್ಲೆಗಳಲ್ಲಿ ಬೇಸಿಗೆಯ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ.

ಕರ್ನಾಟಕ ಮುಂಗಾರು ಕೊರತೆಯ ತಿಂಗಳವಾರು ಪಟ್ಟಿ

* ಜೂನ್: ವಾಡಿಕೆ ಮಳೆ 199 ಮಿ.ಮೀ, ಆಗಿದ್ದು 116 ಮಿ.ಮೀ: ಕೊರತೆ ಶೇ. 42

* ಜುಲೈ: ವಾಡಿಕೆ ಮಳೆ 271 ಮಿ.ಮೀ, ಆಗಿದ್ದು 192 ಮಿ.ಮೀ: ಕೊರತೆ ಶೇ. 29

* ಆಗಸ್ಟ್: ವಾಡಿಕೆ ಮಳೆ 220 ಮಿ.ಮೀ, ಆಗಿದ್ದು 169 ಮಿ.ಮೀ: ಕೊರತೆ ಶೇ. 23

* ಸೆಪ್ಟೆಂಬರ್: ವಾಡಿಕೆ ಮಳೆ 161 ಮಿ.ಮೀ, ಆಗಿದ್ದು 74 ಮಿ.ಮೀ: ಕೊರತೆ ಶೇ. 54

* ಒಟ್ಟು 4 ತಿಂಗಳ ಕೊರತೆ: ಶೇ.35

ಹೆಚ್ಚಾದ ಬಿಸಿಲಿನ ತಾಪ!

ಈ ಮೇಲಿನ ಪಟ್ಟಿಯ ಪ್ರಕಾರ, ಮುಂಗಾರು ಆರಂಭದ ಮೊದಲ ತಿಂಗಳು ಜೂನ್ ಮತ್ತು ಕಳೆದ ಸೆಪ್ಟೆಂಬರ್ ಬಹುತೇಕ ಎಲ್ಲ ಭಾಗಗಳಲ್ಲಿ ಮಳೆ ದುರ್ಬಲವಾಗಿದೆ. ಮಧ್ಯದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅಲ್ಲಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಕೊಂಚ ಉತ್ತಮ ಸ್ಥಿತಿ ಎನ್ನಬಹದು. ಮಳೆ ಕಡಿಮೆ ಆದ ವರ್ಷ ಸಾಮಾನ್ಯವಾಗಿ ಬಿಸಿಲು ಹೆಚ್ಚಿರುತ್ತದೆ. ಈ ವರ್ಷ ಎಲ್‌ನಿನೋ ಪ್ರಭಾವ ಹೆಚ್ಚಿರುವ ಕಾರಣ ಮಳೆ ಕಡಿಮೆ ಆಗಿದ್ದು, ತೀವ್ರ ಬಿಸಿಲಿನ ಬೇಸಿಗೆಗೆ ನಾವೆಲ್ಲ ಸಾಕ್ಷಿಯಾಗಲಿದ್ದೇವೆ.

ಹಿಂಗಾರು ಮಳೆ ಹೇಗಿರಲಿದೆ?

ಅಕ್ಟೋಬರ್ 1ರಿಂದ ಹಿಂಗಾರು ಮಳೆ ಅವಧಿ ಆರಂಭವಾಗಿದ್ದು, ಇದರ ಕುರಿತು ಹವಾಮಾನ ಇಲಾಖೆ ಅಧಿಕೃತ ಮಾಹಿತಿ ನೀಡಬೇಕಿದೆ. ನೈಋತ್ಯ ಮಾನ್ಸುನ್ ಮಾರುತಗಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡ ಬಳಿಕ ಈ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಬೆಂಗಳೂರು ಹವಾಮಾನ ಇಲಾಖೆ ವಿಜ್ಞಾನಿ ಡಾ.ಸಿ.ಎಸ್. ಪಾಟೀಲ್ ಅವರು ಪ್ರಕಾರ, ಹಿಂಗಾರು ಮಳೆ ವಾಡಿಕೆಯಷ್ಟು ಸುರಿಯಲಿದೆ. ಹೀಗಾಗಿ ಆತಂಕ ಬೇಡ. ಮುಂಗಾರು ಕೈ ಕೊಟ್ಟರು, ಹಿಂಗಾರು ರೈತರಿಗೆ ಪೂರಕವಾಗಿದೆ. ಆದರೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಕೆ, ಶಾಖದ ಅಲೆ ಕಂಡು ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+