Karnataka Rains: ಈ ಜಿಲ್ಲೆಗಳಿಗೆ ಮುಂದಿನ 05 ದಿನ ವ್ಯಾಪಕ ಮಳೆ, ಬೆಂಗಳೂರಲ್ಲಿ ದಾಖಲೆಯ ಬಿಸಿಲು

ಬೆಂಗಳೂರು, ಅಕ್ಟೋಬರ್ 03: ಕರ್ನಾಟಕದಲ್ಲಿ ಮಳೆ ಮತ್ತೆ ಸಕ್ರಿಯವಾಗುವ ಸಾಧ್ಯತೆ ಹೆಚ್ಚಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಮಳೆ ಆರ್ಭಟ ಶುರುವಾಗಲಿದೆ. ಆಗಾಗ ಬಿಸಿಲು ಕಾಣುತ್ತಿರುವ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಮತ್ತೆ ತಂಪೆರೆಯಲಿದೆ. ಮುಂದಿನ 05 ದಿನ ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಮಳೆ ಆರ್ಭಟಿಸುವ ಮುನ್ಸೂಚನೆ ಇದೆ. ಈಗಾಗಲೇ ಕಳೆದ ನಾಲ್ಕು ತಿಂಗಳಲ್ಲಿ ಅಂದರೆ ಮುಂಗಾರು ಅವಧಿಯಲ್ಲಿ ಜೂನ್ ನಿಂದ ಸೆಪ್ಟಂಬರ್ ವರೆಗೆ ವಾಡಿಕೆಗಿಂತ ಶೇ.15ರಷ್ಟು ಅಧಿಕ ಮಳೆ ಆಗಿದೆ. ಮುಂದಿನ ದಿನಗಳಲ್ಲಿ ಸಹಿತ ಗುಡಗು ಮಿಂಚು ಸಹಿತ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ತಿಳಿಸಿದೆ.

Karnataka Rain Moderate to Heavy Rain Alert For Karnataka These Districts in Next 5 Days

ಬುಧವಾರ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಜೋರು ಗಾಳಿ ಸಹಿತ ವ್ಯಾಪಕ ಮಳೆ ಆಗಿದೆ. ಇದೇ ರೀತಿ ರಾಜ್ಯದ ನಾನಾ ಕಡೆಗಳಲ್ಲಿ ಮಳೆ ಸುರಿಯುಸುವ ಮಾರುತಗಳ ಸಕ್ರಿಯವಾಗಿದ್ದರ ಕಾರಣ ಗುರುವಾರ (ಸೆಪ್ಟಂಬರ್ 3)ದಿಂದ ಐದು ದಿನ ಭಾರೀ ಮಳೆ ಆಗಲಿದೆ. ಬೆಂಗಳೂರಿನಲ್ಲಿ ಬುಧವಾರ ದಾಖಲೆ ಪ್ರಮಾಣದಲ್ಲಿ ಬಿಸಿಲು ಕಂಡು ಬಂದಿದ್ದು, ಸಂಜೆ ಮಳೆ ಸುರಿಯಿತು.

ಜಿಲ್ಲಾವಾರು ಮಳೆ ಮುನ್ಸೂಚನೆ ವಿವರ

ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ ಹಾಗೂ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಈ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಇಂದು ವ್ಯಾಪಕ ಮಳೆ ಆಗಲಿದೆ. ದಿನ ಬಿಟ್ಟು ದಿನ ಉತ್ತಮ ಮಳೆ ಸಂಭವವಿದೆ.

ಸದ್ಯ ಈಗಾಗಲೇ ಸುರಿದ ಮಳೆಯಿಂದಾಗಿ ರಾಜ್ಯದ ಜಲಾಶಯಗಳು ಭರ್ತಿಯಾಗಿವೆ. ಕ್ರೆಸ್ಟ್‌ಗೇಟ್ ಒಡೆದು ಹೋಗಿದ್ದ ತುಂಗಭದ್ರಾ ಡ್ಯಾಂ ನಲ್ಲಿ ಇತ್ತೀಚಿಗೆ ಸುರಿದ ಮಳ ಪರಿಣಾಮ ಅರ್ಧದಷ್ಟು ಈಗಾಗಲೇ ಭರ್ತಿಯಾಗಿದೆ. ಭಾರೀ ಮಳೆಗೆ ಈಗಾಗಲೇ ಜಲಾಶಯಗಳು ಭರ್ತಿ ಆಗಿವೆ. ಮಳೆ ಮುಂದುವರಿಯಲಿದೆ.

ಬೆಂಗಳೂರಿಗೆ ಮಳೆ ಎಚ್ಚರಿಕೆ

ಬೆಂಗಳೂರಿನಲ್ಲಿ ಅಕ್ಟೋಬರ್ 2ರಂದು ಬೆಳಗ್ಗೆಯಿಂದ ಮಧ್ಯಾಹ್ನ ವರೆಗೆ ಅತ್ಯಧಿಕ ಮಳೆ ದಾಖಲಾಗಿತ್ತು. ಆಗಸ್ಟ್ 02ರಂದು 32.4 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದೆ. ಇದು ಅಕ್ಟೋಬರ್ ತಿಂಗಳಲ್ಲಿಯೇ ವರ್ಷಗಳ ಬಳಿಕ ದಾಖಲಾದ ದಾಖಲೆಯ ಉಷ್ಣಾಂಶವಾಗಿದೆ.

ಬುಧವಾರ ನಂತರ ಸಂಜೆಯಾಗುತ್ತಿದ್ದಂತೆ ಅಲ್ಲಲ್ಲಿ ಜೋರು ಮಳೆ ಸುರಿಯಿತು. ಸಂಚಾರ ದಟ್ಟಣೆಗೆ ಸಮಸ್ಯೆ ಆಯಿತು. ಈ ಮಳೆ ಮುಂದಿನ ಐದಿಗಳ ಕಾಲ ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+