Karnataka Rain: ಯುಗಾದಿ ವೇಳೆಗೆ ರಾಜ್ಯದಲ್ಲಿ ಭರ್ಜರಿ ಮಳೆ!
ಸುಡು ಬೇಸಿಗೆಯಿಂದ ಕಂಗಾಲಾಗಿರುವ ಕರ್ನಾಟಕ ಜನತೆಗೆ ಈ ಬಾರಿ ಯುಗಾದಿ ಡಬಲ್ ಖುಷಿ ತರಲಿದೆ. ಒಂದು ಕಡೆ ಹಬ್ಬದ ಸಂಭ್ರಮವಾದರೆ ಮತ್ತೊಂದು ಕಡೆ ರಾಜ್ಯದಲ್ಲಿ ಯುಗಾದಿ ವೇಳೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಭಾರತೀಯ ಹವಾಮಾನ ಇಲಾಖೆಯ ಕಾರ್ಯಾಚರಣೆಯ ವಿಸ್ತೃತ ಶ್ರೇಣಿಯ ಮುನ್ಸೂಚನೆ (IMD ERF) ಪ್ರಕಾರ ಮಾರ್ಚ್ ಅಂತ್ಯದ ವೇಳೆಗೆ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ.

ಏಪ್ರಿಲ್ 9ರಂದು ರಾಜ್ಯದಲ್ಲಿ ಯುಗಾದಿ ಹಬ್ಬದ ಸಮಯದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅಂದರೆ ಏಪ್ರಿಲ್ 2ನೇ ವಾರದಿಂದ ದಕ್ಷಿಣ ಒಳನಾಡಿನ ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ವಾತಾವರಣವನ್ನು ತಂಪಾಗಿಸುವ ಸಾಧ್ಯತೆ ಹೆಚ್ಚಾಗಿದೆ.
IMD ERF Rainfall forecast hinting at good rains across Karnataka western ghats by March end and will cover south interior by Ugadi time ie April 2nd week.
— ರವಿ ಕೀರ್ತಿ ಗೌಡ (@ravikeerthi22) March 16, 2024
Hopefully Mango /Coffee showers bring some relief in this hot weather.#KarnatakaRains pic.twitter.com/B5TnBuGMkn
ಮೂರು ದಿನದಿಂದ ರಾಜ್ಯದಲ್ಲಿ ಮಳೆ
ಕಳೆದ ಮೂರು ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿರುವುದು ಸದ್ಯ ಮಳೆ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಬುಧವಾರ ಕೊಡಗು ಜಲ್ಲೆಯ ಮಡಿಕೇರಿ ತಾಲೂಕಿನ ಸೋಮವಾರಪೇಟೆ, ಕಿಗ್ಗಾಲು ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿತ್ತು. ಗುರುವಾರ ಚಿಕ್ಕಮಗಳೂರು ತಾಲೂಕಿನ ಹಲವು ಕಡೆಗಳಲ್ಲಿ ಉತ್ತಮ ಮಳೆ ಸುರಿದಿತ್ತು.
ಶುಕ್ರವಾರ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಲ್ಲರೆಯಲ್ಲಿ 27 ಮಿಮೀ ಮಳೆಯಾಗಿತ್ತು. ಹೆಗ್ಗಡಹಳ್ಳಿ 9.5 ಮಿಮೀ, ಹಾಡ್ಯ 3.5 ಮಿಮೀ, ಕಲ್ಲಂಬಾಳು 3.5 ಮಿಮೀ ಮಳೆಯಾಗಿದೆ ಎಂದು ವರದಿಯಾಗಿದೆ.
Can see inland convergence developing later this evening across Kerala ghats, Nilgris, Kodagu ,Mysuru and Chamrajanagara.
— Namma Karnataka Weather (@namma_vjy) March 16, 2024
Possibility of TS showers in Madikeri, Virajpet, Sullia, Nanjanagud and Kollegal this evening-night.
Note:
Hoping for some welcome summer showers in… pic.twitter.com/YqcEA3mKxV
ವಾರಾಂತ್ಯದಲ್ಲಿ ಈ ಭಾಗದಲ್ಲಿ ಮಳೆ
ಕೇರಳ ಘಾಟ್‌ಗಳು, ನೀಲಗ್ರಿಸ್, ಕೊಡಗು, ಮೈಸೂರು ಮತ್ತು ಚಾಮರಾಜನಗರದಾದ್ಯಂತ ಶುಕ್ರವಾರ ಸಂಜೆಯ ನಂತರ ವಾತಾವರಣ ಬದಲಾಗುವ ಸಾಧ್ಯತೆ ಇದೆ. ಮಡಿಕೇರಿ, ವಿರಾಜಪೇಟೆ, ಸುಳ್ಯ, ನಂಜನಗೂಡು ಮತ್ತು ಕೊಳ್ಳೇಗಾಲದಲ್ಲಿ ಶನಿವಾರ ರಾತ್ರಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಬೇಸಿಗೆ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಜೂನ್ ವೇಳೆಗೆ ಭರ್ಜರಿ ಮಳೆ
ಹವಾಮಾನ ಇಲಾಖೆ ಪ್ರಕಾರ ರಾಜ್ಯಾದ್ಯಂತ ಜೂನ್ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್‌ನಿಂದ ಹಲವು ಕಡೆಗಳಲ್ಲಿ ಮಳೆ ಆರಂಭವಾದರೂ, ಜೂನ್ ವೇಳೆಗೆ ರಾಜ್ಯದ್ಯಂತ ಅತ್ಯುತ್ತಮ ಮಳೆಯಾಗುವ ಮುನ್ಸೂಚನೆ ಇದೆ.
ಸದ್ಯ ರಾಜ್ಯಾದ್ಯಂತ ಬಿರು ಬೇಸಿಗೆಯಿಂದ ಕುಡಿಯುವ ನೀರಿಗೂ ಅಭಾವ ಕಾಡುತ್ತಿದೆ. ಏನಾದರೂ ಆಗಲಿ, ರಾಜ್ಯದಲ್ಲಿ ಮಳೆಯಾದ್ರೆ ಸಾಕು ಎನ್ನುವಂತಹ ಪರಿಸ್ಥಿತಿ ಇದೆ.












Click it and Unblock the Notifications