Karnataka Rain: ಕರ್ನಾಟಕದಲ್ಲಿ ಅಕ್ಟೋಬರ್ 31ರವರೆಗೆ ಮಳೆ ಮುನ್ಸೂಚನೆ: ಯಾವ ಜಿಲ್ಲೆಗಳಲ್ಲಿ ಮಳೆ ಇರಲಿದೆ ?
ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಅನರ್ಬ್ ಚಂಡಮಾರುತದ ಪ್ರಭಾವದಿಂದಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಕರ್ನಾಟಕದಲ್ಲಿ ಇನ್ನೂ ಮೂರರಿಂದ ನಾಲ್ಕು ದಿನಗಳ ವರೆಗೆ ಸಾಧಾರಣ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಅಕ್ಟೋಬರ್ 31ರ ವರೆಗೆ ಕರ್ನಾಟಕದಲ್ಲಿ ಮಳೆ ಆಗಲಿದೆ ಎಂದು ಐಎಂಡಿ ತಿಳಿಸಿದೆ.
ಆಂಧ್ರಪ್ರದೇಶ ಕರಾವಳಿಯ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿದ್ದ ಅನರ್ಬ್ (Arnab) ಎಂಬ ಅತ್ಯಂತ ತೀವ್ರ ಚಂಡಮಾರುತವು, ನಿಧಾನವಾಗಿ ವಾಯುವ್ಯ ದಿಕ್ಕಿನತ್ತ ಚಲಿಸಿತು. ಇದು ಬಾವಲ್ಲಾ ಮತ್ತು ವಿಶಾಖಪಟ್ಟಣಂ ನಡುವೆ ಆಂಧ್ರಪ್ರದೇಶ ಮತ್ತು ಯಾನಂ ಶರಾವಳಿಯನ್ನು ದಾಟಿತು. ಈ ಚಂಡಮಾರುತವು ಗಂಟೆಗೆ 125-135 ಕಿ.ಮೀ ವೇಗದ ಗಾಳಿಯನ್ನು (ಗರಿಷ್ಠ 150 ಕಿ.ಮೀ ವೇಗದವರೆಗಿನ ಬಿರುಗಾಳಿಯೊಂದಿಗೆ) ಹೊಂದಿತ್ತು. ಇತ್ತೀಚಿನ ವೀಕ್ಷಣೆಗಳ ಪ್ರಕಾರ, ಚಂಡಮಾರುತದ ಕೇಂದ್ರ ಭಾಗವು ಸಂಪೂರ್ಣವಾಗಿ ಭೂಪ್ರದೇಶವನ್ನು ಪ್ರವೇಶಿಸುವುದರೊಂದಿಗೆ, ಭೂಸ್ಪರ್ಶ (landfall) ಪ್ರಕ್ರಿಯೆಯು ಪೂರ್ಣಗೊಂಡಿದೆ.

ವಾಯುವ್ಯ ದಿಕ್ಕಿನತ್ತ ತನ್ನ ಚಲನೆಯನ್ನು ಮುಂದುವರಿಸಿರುವ ಈ ಚಂಡಮಾರುತವು, ಆಂಧ್ರಪ್ರದೇಶ ಮತ್ತು ಯಾನಂ ಹಾಗೂ ಪಕ್ಕದ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಕೇಂದ್ರೀಕೃತವಾಗಿದೆ. ಇದು ನರಸಾಪುರದ (ಅಂಧ್ರಪ್ರದೇಶ) ಪೂರ್ವ-ಈಶಾನ್ಯಕ್ಕೆ 20 ಕಿ.ಮೀ, ಯಾನಂನ (ಪುದುಚೇರಿ ಕೇಂದ್ರಾಡಳಿತ ಪ್ರದೇಶ) ನೈಋತ್ಯಕ್ಕೆ 40 ಕಿ.ಮೀ, ಕಾಕಿನಾಡೆಯ (ಅಂಧ್ರಪ್ರದೇಶ) ವೈಋತ್ಯಕ್ಕೆ 60 ಕಿ.ಮೀ, ಮಚಲಿಪಟ್ಟಣಂನ (ಆಂಧ್ರಪ್ರದೇಶ) ಪೂರ್ವ- ಈಶಾನ್ಯಕ್ಕೆ 90 ಕಿ.ಮೀ, ಗನ್ನವರಂನ (ಆಂಧ್ರಪ್ರದೇಶ) ಪೂರ್ವಕ್ಕೆ 120 ಕಿ.ಮೀ ಮತ್ತು ತುನಿಯ ನೈಋತ್ಯಕ್ಕೆ 120 ಕಿ.ಮೀ ದೂರದಲ್ಲಿದೆ. ಇದು ಮುಂದಿನ 48 ಗಂಟೆಗಳಲ್ಲಿ ಉತ್ತರ-ವಾಯುವ್ಯ ದಿಕ್ಕಿನತ್ತ ಚಲಿಸುವ ಮತ್ತು ಕ್ರಮೇಣ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.
ಮುಂದುವರಿದು ಮುಂದಿನ 06 ಗಂಟೆಗಳಲ್ಲಿ ಇದು 'ಚಂಡಮಾರುತ (Cyclonic Storm) ಅಗಿ ದುರ್ಬಲಗೊಳ್ಳಲಿದ್ದು, ತದನಂತರದ 6 ಗಂಟೆಗಳಲ್ಲಿ 'ತೀವ್ರ ವಾಯುಭಾರ ಕುಸಿತ' (Deep Depression) ಆಗಿ ಮತ್ತಷ್ಟು ದುರ್ಬಲಗೊಳ್ಳಲಿದೆ. ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಸಮುದ್ರ ಮಟ್ಟದಿಂದ 5.8 ಕಿ.ಮೀ ಎತ್ತರದವರೆಗೆ ವಿಸ್ತರಿಸಿರುವ ಮೇಲ್ಮುಖ ಚಂಡಮಾರುತ ಪರಿಚಲನೆ (upper air cyclonic circulation) ಇನ್ನೂ ಮುಂದುವರಿದಿದೆ. ಇದರ ಪ್ರಭಾವದಿಂದ, ಮುಂದಿನ 24 ಗಂಟೆಗಳಲ್ಲಿ ಅದೇ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ.
ಆಂಧ್ರಪ್ರದೇಶ ಕರಾವಳಿಯ ಸಮೀಪವಿರುವ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಿಂದ, ಅದೇ ಪ್ರದೇಶದಲ್ಲಿ (ಆಂಧ್ರಪ್ರದೇಶ ಕರಾವಳಿಯ ಆಚೆಗಿನ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ) ನೆಲೆಗೊಂಡಿರುವ 'ಅರ್ನಬ್' (Arnab) ಎಂಬ ಅತ್ಯಂತ ತೀವ್ರ ಚಂಡಮಾರುತಕ್ಕೆ ಸಂಬಂಧಿಸಿದ ಚಂಡಮಾರುತ ವರಿಚಲನೆಯವರೆಗೆ (cyclonic circulation) ವಿಸ್ತರಿಸಿದ್ದ, ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದವರೆಗಿನ 'ಟ್ರಫ್' ಈಗ ದುರ್ಬಲಗೊಂಡಿದೆ ಎಂದೂ ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ ಆಗಲಿದೆ ?
ಚಂಡಮಾರುತ ಪ್ರಸರಣದ ಪ್ರಭಾವದಿಂದಾಗಿ ದಕ್ಷಿಣ ಒಳನಾಡು ಹಾಗೂ ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಚದುರಿದಂತೆ ಮಳೆ ಆಗಲಿದೆ. ಉಳಿದಂತೆ ಕರ್ನಾಟಕದಲ್ಲಿ ಬಹುತೇಕ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಬೆಂಗಳೂರಿನ ಹವಾಮಾನ ಹೇಗಿದೆ ?
ಇನ್ನು ಬೆಂಗಳೂರಿನಲ್ಲಿ ಮುಂದಿನ 24 ಗಂಟೆ ಅವಧಿಯಲ್ಲಿ ಬಹುತೇಕ ಶುಭ್ರ ಆಕಾಶ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಡಿಗ್ರಿ ಸೆಲ್ಸಿಯಸ್ ಹಾಗೂ 19 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.


Click it and Unblock the Notifications
