Karnataka Rain: ಈ ವರ್ಷ ರಾಜ್ಯದಲ್ಲಿ ಭರ್ಜರಿ ಮುಂಗಾರು ಮಳೆ! ಮಾಹಿತಿ, ವಿವರ
ಕರ್ನಾಟಕದಲ್ಲಿ 2023ರ ಮಳೆಗಾಲ ಸಂಪೂರ್ಣವಾಗಿ ಕೈಕೊಟ್ಟ ಬಳಿಕ 2024ರ ಆರಂಭದಲ್ಲೇ ಜನ ಪರದಾಡುವಂತಾಗಿದೆ. ಬೆಂಗಳೂರು ಸೇರಿ ರಾಜ್ಯದ ಹಲವು ಕಡೆಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಕಾವೇರಿ, ಕಬಿನಿ, ಹೇಮೆ, ತುಂಗಭದ್ರಾ ಜಲಾಶಯಗಳು ಬರಿದಾಗುತ್ತಿವೆ.
ಬೆಂಗಳೂರಿಗೆ ಕುಡಿಯುವ ನೀರಿನ ಮೂಲವಾಗಿರುವ ಕೆಆರ್ ಎಸ್, ಕಬಿನಿ ಜಲಾಶಯಗಳು ಬರಿದಾಗುತ್ತಿದ್ದು, ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಯಾವಾಗ ಮಳೆ ಬರುತ್ತೋ ಎಂದು ಜನ ಆಕಾಶ ನೋಡುವಂತಾಗಿದೆ.

ಚಿಂತೆ ಬೇಡ ಮಳೆ ಬರುತ್ತೆ!
ಇನ್ನು ಭೀಕರ ಬೇಸಿಗೆ, ಬರದ ನಡುವೆ ರಾಜ್ಯದ ಜನಕ್ಕೆ ಹವಾಮಾನ ತಜ್ಞರು ನೀಡಿರುವ ವರದಿ ಸಮಾಧಾನ ತರಿಸಿದೆ. ಹೌದು, ಈ ಬಾರಿ ರಾಜ್ಯದಲ್ಲಿ ವಾಡಿಕೆಯಂತೆ ಉತ್ತಮ ಮಳೆಯಾಗಲಿದೆ ಎಂದು ಹೇಳಿದ್ದು, ಜೂನ್ ವೇಳೆಗೆ ರಾಜ್ಯದಲ್ಲಿ ನೀರಿನ ಸಮಸ್ಯೆ ದೂರಾಗಲಿದೆ ಎಂದು ಹೇಳಿದ್ದಾರೆ.
ಸದ್ಯ ಮಳೆ ಬಂದ್ರೆ ಸಾಕಪ್ಪಾ ಎಂದು ಜನ ಅನ್ನುವಂತಾಗಿದೆ. ಆದರೆ ಮಳೆಗಾಗಿ ಇನ್ನು ಕನಿಷ್ಠ ಎರಡು ಮೂರು ತಿಂಗಳು ಕಾಯಬೇಕಿದೆ. ಅದಕ್ಕೂ ಮೊದಲು ಮಳೆ ಬಂದರೆ ಅದಕ್ಕಿಂತ ಸಂತೋಷದ ವಿಚಾರ ಮತ್ತೊಂದಿಲ್ಲ, ಆದರೆ ಮಾನ್ಸೂನ್ ಆರಂಭವಾಗಲು ಇನ್ನೂ ಮೂರು ತಿಂಗಳು ಸಮಯ ಇದೆ.
Monsoon 2024 is going to be 'Supercalifragilisticexpialidocious' for Karnataka 💛❤️ It's going to be perfect that we wouldn't have to worry about Kaveri water anymore post June
— Karnataka Weather (@Bnglrweatherman) March 5, 2024
Eagerly waiting for the monsoon to begin#KarnatakaMonsoon2024 #SouthWestMonsoon2024 #KarnatakaRains https://t.co/bHf6cJXkWf
ಈ ಬಾರಿ ಕಾವೇರಿ ಸಮಸ್ಯೆ ಇರಲ್ಲ!
ರಾಜ್ಯದಲ್ಲಿ ಮಳೆ ಕೊರತೆ ಒಂದು ಕಡೆಯಾದರೆ ತಮಿಳುನಾಡು ರಾಜ್ಯದ ಕಿರಿಕ್ ಒಂದು ಕಡೆ ತಲೆನೋವಾಗಿತ್ತು. ರಾಜ್ಯದ ರೈತರ ವಿರೋಧದ ನಡುವೆಯೂ ತಮಿಳುನಾಡಿಗೆ ಕರ್ನಾಟಕ ಸರ್ಕಾರ ನೀರು ಹರಿಸಿತ್ತು. ಆದರೆ ಈ ಬಾರಿ ಉತ್ತಮ ಮಳೆಯಾಗಲಿದ್ದು, ಕಾವೇರಿ ಮೈದುಂಬಿ ಹರಿಯಲಿದೆ ಎನ್ನುವ ಸೂಚನೆ ಸಿಕ್ಕಿದೆ.
ಮುಂಗಾರು ಆರಂಭದಲ್ಲೇ ಕೆಆರ್ ಎಸ್, ಕಬಿನಿ, ಹೇಮಾವತಿ, ತುಂಗಭದ್ರಾ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳು ತುಂಬಿದರೆ ಸಾಕು ಎನ್ನವಂತಾಗಿದೆ. ಹಲವು ಕಡೆಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದ್ದು, ಮಳೆಗಾಲ ಬೇಗನೆ ಆರಂಭವಾದರೆ ಸಾಕು ಎನ್ನುವಂತಾಗಿದೆ.
ಕಳೆದ ವರ್ಷ ಬರಗಾಲ ಕೃಷಿ ವಲಯದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಈ ವರ್ಷ ಉತ್ತಮವಾಗಿ ಮಳೆಗಾಲ ನಡೆಸಿದರೆ, ರೈತರ ಬದುಕಿಗೂ ಆಸರೆಯಾಗಲಿದೆ.
ಮಧ್ಯಮ-ಶ್ರೇಣಿಯ ಹವಾಮಾನ ಮುನ್ಸೂಚನೆಗಳ ಯುರೋಪಿಯನ್ ಕೇಂದ್ರ (ECMWF) ಮಾಸಿಕಗಳು ಭಾರತಕ್ಕೆ ದೃಢವಾದ ಮಾನ್ಸೂನ್ ಅನ್ನು ತೋರಿಸುತ್ತಿವೆ. 3 ತಿಂಗಳಿಗೂ ಹೆಚ್ಚು ಕಾಲ ಸ್ಥಿರವಾಗಿ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಆದರೆ ಮಳೆ ಬರುವವರೆಗೂ ನೀರಿನ ಸಮಸ್ಯೆಯನ್ನು ನಿಭಾಯಿಸುವುದು ಸದ್ಯ ನಮ್ಮ ಮುಂದಿರುವ ಸವಾಲಾಗಿದೆ. ಮಳೆಗಾಲ ಆರಂಭವಾಗುವವರೆಗೂ ಜವಾಬ್ದಾರಿಯುತವಾಗಿ ನೀರನ್ನು ಬಳಕೆ ಮಾಡಿದರೆ ಒಂದು ಹಂತಕ್ಕೆ ಸಮಸ್ಯೆಯನ್ನು ನಿಭಾಯಿಸಬಹುದಾಗಿದೆ.











Click it and Unblock the Notifications