ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟ್ಟು ಬಿಡದ ಉಪನ್ಯಾಸಕರ ಮೇಲೆ ನೋಟಿಸ್ ಅಸ್ತ್ರ

|
Google Oneindia Kannada News

ಬೆಂಗಳೂರು ಏಪ್ರಿಲ್, 18: ಪಟ್ಟು ಬಿಡದ ಪಿಯು ಉಪನ್ಯಾಸಕರ ವಿರುದ್ಧ ಸರ್ಕಾರ ಕಠಿಣ ನಿಲುವನ್ನು ತಾಳಿದೆ. ವೇತನ ತಾರತಮ್ಯ ನಿವಾರಣೆ ಹಾಗೂ ಕುಮಾರ್ ನಾಯಕ್ ವರದಿ ಜಾರಿಗೆ ಆಗ್ರಹಿಸಿ ದ್ವಿತೀಯ ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವ ಉಪನ್ಯಾಸಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೋಮವಾರ ನೋಟಿಸ್ ಜಾರಿ ಮಾಡಿದೆ.

ಕಳೆದ 17 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ. 50ಕ್ಕೂ ಅಧಿಕ ಉಪನ್ಯಾಸಕರು ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ. ಸೋಮವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪಿಯು ಬೋರ್ಡ್ ಶಾಖಾಧಿಕಾರಿ ಹಾಗೂ ಸೂಪರಿಡೆಂಟ್ ಅವರು ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರನ್ನು ಭೇಟಿ ಮಾಡಿ ನೋಟಿಸ್ ನೀಡಿದ್ದಾರೆ.[ಏನು ಓದ್ಕೋಬೇಡಿ, ಪಾಸಾಗ್ತೀರಾ ಹೋಗಿ ಎಂದಿದ್ದ ಕಾಲೇಜು!]

2nd puc

ಪ್ರತಿಭಟನೆ ಕೈಬಿಟ್ಟು ಮೌಲ್ಯಮಾಪನಕ್ಕೆ ಹಾಜರಾಗದಿದ್ದರೆ ಉಪನ್ಯಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಎಚ್ಚರಿಸಿದ್ದಾರೆ.[ದ್ವಿತೀಯ ಪಿಯು ಫಲಿತಾಂಶ ವಿಳಂಬ?]

ಪಿಯು ಉಪನ್ಯಾಸಕರ ಪ್ರತಿಭಟನೆ ಪರಿಣಾಮ ಮೌಲ್ಯಮಾಪನ ಕಗ್ಗಂಟಾಗಿ ಪರಿಣಮಿಸಿದೆ. ಒಂದೆಡೆ ಸರ್ಕಾರ ನಿಗದಿತ ದಿನಾಂಕದೊಳಗೆ ಫಲಿತಾಂಶ ನೀಡುತ್ತೇನೆ ಎಂದು ಹೇಳುತ್ತಿದೆ. ಖಾಸಗಿ ಉಪನ್ಯಾಸಕರು ಮತ್ತು ನಿವೃತ ಪ್ರೌಢಶಾಲಾ ಶಿಕ್ಷಕರನ್ನು ಬಳಸಿಕೊಂಡು ಮೌಲ್ಯಮಾಪನ ನಡೆಸುವ ಪ್ರಯತ್ನವನ್ನು ಸರ್ಕಾರ ನಡೆಸಿದೆ.

English summary
The Karnataka State Government issued a notice to PU Lecturers on Monday April 18. The PU Board has issued notices to the lecturers who are on strike seeking an explanation. However, the notice does not mention what action would be initiated against them if they do not report for duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X