ಶಕ್ತಿ ಯೋಜನೆಯಿಂದ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ವಾಹನ ಮಾಲೀಕರು: ಪ್ರತಿಭಟನೆ ಎಚ್ಚರಿಕೆ

ಬೆಂಗಳೂರು, ಜುಲೈ. 14: ಶಕ್ತಿ ಯೋಜನೆ ಜಾರಿಗೆ ತಂದಾಗಿನಿಂದ ತಮ್ಮ ವ್ಯಾಪಾರಕ್ಕೆ ಶೇ 50ರಷ್ಟು ಹೊಡೆತ ಬಿದ್ದಿದೆ ಎಂದು ಆರೋಪಿಸಿರುವ ಕರ್ನಾಟಕ ಖಾಸಗಿ ವಾಹನ ಮಾಲೀಕರ ಒಕ್ಕೂಟ ಗುರುವಾರ ರಾಜ್ಯ ಸಾರಿಗೆ ನಿಗಮಗಳಿಗೆ ಸರ್ಕಾರ ಮರುಪಾವತಿ ಮಾಡದಿದ್ದಲ್ಲಿ ಜುಲೈ 28 ರಂದು ರಾಜ್ಯಾದ್ಯಂತ ಮುಷ್ಕರ ನಡೆಸುವುದಾಗಿ ಬೆದರಿಕೆ ಹಾಕಿದೆ.

ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಮಾತನಾಡಿ, " ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡುತ್ತಿರುವುದು ನಮ್ಮ ವ್ಯಾಪಾರವನ್ನು ಹಾಳು ಮಾಡಿದೆ. ನಮ್ಮ ವ್ಯಾಪಾರವು ಸುಮಾರು 60% ರಷ್ಟು ಕಡಿಮೆಯಾಗಿದೆ. ಖಾಸಗಿ ಬಸ್ ನಿರ್ವಾಹಕರು ಮತ್ತು ಚಾಲಕರು ಕಷ್ಟ ಅನುಭವಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

Karnataka private vehicle owners threatened to launch a state wide strike

"ನಾವು ನಮ್ಮ ಇಎಂಐಗಳನ್ನು ಪಾವತಿಸಲು, ನಮ್ಮ ಸಾಲಗಳನ್ನು ತೀರಿಸಲು, ನಿರ್ವಹಣಾ ವೆಚ್ಚಗಳನ್ನು ಪೂರೈಸಲು ಮತ್ತು ನಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಅದರ ಜೊತೆಗೆ ನಾವು ರಸ್ತೆ ತೆರಿಗೆಗಾಗಿ ವಾಹನದ ಪ್ರಕಾರವನ್ನು ಅವಲಂಬಿಸಿ ಪ್ರತಿ ತ್ರೈಮಾಸಿಕದಲ್ಲಿ 1 ಲಕ್ಷ ರೂಪಾಯಿ ನೀಡುತ್ತಿದ್ದೇವೆ. ಡೀಸೆಲ್ ಬೆಲೆ ಸೂರು ಮುಟ್ಟಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಖಾಸಗಿ ಸಾರಿಗೆ ಸೇವೆಗಳನ್ನು ನಡೆಸುತ್ತಿರುವ ಲಕ್ಷಾಂತರ ಜನರ ಜೀವನಕ್ಕೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಪಾಯವನ್ನುಂಟು ಮಾಡುತ್ತದೆ" ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮುಂದುವರಿದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಲಾಗುವುದು. ಈ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒಂದು ವಾರ ಕಾಲಾವಕಾಶ ನೀಡುವುದಾಗಿ ಖಾಸಗಿ ವಾಹನ ಮಾಲೀಕರ ವೇದಿಕೆ ತಿಳಿಸಿದೆ. ವಿಫಲವಾದರೆ ಜುಲೈ 28 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ವೇದಿಕೆ ಎಚ್ಚರಿಸಿದೆ.

"ನಾವು ನಮ್ಮ ಜ್ಞಾಪಕ ಪತ್ರವನ್ನು ಸಲ್ಲಿಸಿದ ನಂತರ ನಾವು ಸರ್ಕಾರಕ್ಕೆ 7 ದಿನಗಳ ಗಡವು ನೀಡುತ್ತೇವೆ. ಅವರು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಸರ್ಕಾರ ಶಕ್ತಿ ಯೋಜನೆಯನ್ನು ಹಿಂದೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರು ಖಾಸಗಿ ಆಪರೇಟರ್‌ಗಳಿಗೆ ಮರುಪಾವತಿ ಮಾಡಬಹುದು. ಸರ್ಕಾರ ಹೆಚ್ಚುವರಿ ಅನುದಾನ ನೀಡಿ ಆಟೋ ಚಾಲಕರನ್ನು ಬೆಂಬಲಿಸಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡುತ್ತೇವೆ ಎಂದು ನಟರಾಜ್ ಶರ್ಮಾ ಎಚ್ಚರಿಕೆ ನೀಡಿದ್ದಾರೆ.

Karnataka private vehicle owners threatened to launch a state wide strike

ಆಟೋ ರಿಕ್ಷಾ ಚಾಲಕರ ಸಂಘಗಳು, ಖಾಸಗಿ ಬಸ್ ನಿರ್ವಾಹಕರ ಸಂಘ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರನ್ನು ಒಳಗೊಂಡ ವೇದಿಕೆಯು ತೆರಿಗೆ ವಿನಾಯಿತಿ, ಆಟೋ ಚಾಲಕರಿಗೆ ಮಾಸಿಕ 10,000 ರೂ ಅನುದಾನ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಗೆ ಒತ್ತಾಯಿಸಿದೆ.

ಶಕ್ತಿ ಯೋಜನೆಯು ಕಾಂಗ್ರೆಸ್‌ನ ಐದು ಪ್ರಮುಖ ಚುನಾವಣಾ ಗ್ಯಾರಂಟಿಗಳಲ್ಲಿ ಒಂದಾಗಿದೆ. ಇದನ್ನು ಕಳೆದ ಜೂನ್ 11 ರಂದು ಜಾರಿಗೊಳಿಸಲಾಗಿದೆ. ಯೋಜನೆಯ ಪ್ರಕಾರ, ಮಹಿಳೆಯರು ಪ್ರಯಾಣಿಸುವ ದೂರವನ್ನು ಆಧರಿಸಿ ಸರ್ಕಾರವು ಸಾರಿಗೆ ನಿಗಮಗಳಿಗೆ ಮರುಪಾವತಿ ಮಾಡುತ್ತದೆ. ಅದೇ ಮಾರ್ಗದಲ್ಲಿ ಸಾರಿಗೆ ಸೇವೆಗಳಾದ ಬಸ್, ಟ್ಯಾಕ್ಸಿ, ಆಟೋ, ಟೂರಿಸ್ಟ್ ಬಸ್‌ಗಳನ್ನು ನಿರ್ವಹಿಸುತ್ತಿರುವ ಖಾಸಗಿ ವಾಹನ ಮಾಲೀಕರು ಇದೇ ರೀತಿಯ ಮರುಪಾವತಿಗೆ ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+