Narendra Modi: ದಳಪತಿಗಳ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ ಸರ್ಕಸ್:‌ ನರೇಂದ್ರ ಮೋದಿ ಹೇಳಿದ್ದೇನು?

ರಾಮನಗರ,ಏಪ್ರಿಲ್30:‌ ಕಾಂಗ್ರೆಸ್ ನ ಈ ಸಾಲಮನ್ನಾದ ನಾಟಕ ರೈತರಿಗೆ ಪ್ರಯೋಜನವೇ ಆಗುತ್ತಿರಲಿಲ್ಲ. ಕಾಂಗ್ರೆಸ್‌ ನ ಪ್ರತಿಯೊಂದು ಗ್ಯಾರೆಂಟಿ, ಘೋಷಣೆಯು ಸುಳ್ಳಿನ ದೊಡ್ಡ ಮೂಟೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು.

ಈ ಕುರಿತು ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತಯಾಚಿಸಿದ ಅವರು, ಕಾಂಗ್ರೆಸ್ ನ ಜನರು ಇಲ್ಲಿಯು ಸುಳ್ಳಿನ ಗ್ಯಾರೆಂಟಿ ಹಿಡಿದು ಓಡಾಡುತ್ತಿದೆ. ಕಿಸಾನ ಸನ್ಮಾನ್ ಮೂಲಕ ಎರಡುವರೆ ಲಕ್ಷ ಕೋಟಿ ರೂ, ಗಳನ್ನು ರೈತರ ಖಾತೆಗೆ ಹಾಕಲಾಗಿದೆ. 15 ಸಾವಿರ ಕೋಟಿ ರಾಜ್ಯದ ಜನರಿಗೆ ಲಭಿಸಿದೆ. ರಾಮನಗರ ಜಿಲ್ಲೆಗೆ 300 ಕೋಟಿ ಹಣ ದೊರೆತ್ತಿದೆ. ಈ ಎಲ್ಲ ಯೋಜನೆಗಳು ಚುನಾವಣೆಗು ಮುನ್ನವೇ‌ ಕೆಲಸ ಮಾಡಿದ್ದವೆ. ಇದು ನಿಜವಾದ ಗ್ಯಾರೆಂಟಿ ಕೆಲಸ ಎಂದರು.

Karnataka Polls: PM Narendra Modi Fierce Attack Against Congress And JDS

ಯಾವಾಗ ಜೆಡಿಎಸ್ , ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದಿಯೋ ಆಗ ಕೆಲ ಸೀಮಿತ ಕುಟುಂಬಕ್ಕಷ್ಟೆ ಅನುಕೂಲವಾಗಲಿದೆ. ನಮ್ಮ ಸರಕಾರದಲ್ಲಿ ಎಲ್ಲ ಕುಟುಂಬಗಳು ನಮ್ಮ‌ ಕುಟುಂಬ ಇದ್ದಂತೆ. ಡಬಲ್ ಎಂಜಿನ್ ಸರಕಾರದ ವೇಳೆಯಲ್ಲಿ ಜಿಲ್ಲೆಯ 90 ಸಾವಿರ ಮನೆಗೆ ಕೊಳಾಯಿ ನೀರಿನ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದೆವೆ‌. ಬಡವರಿಗೆ ಸ್ಪಂಧಿಸುವ ಬಿಜೆಪಿ ಸರಕಾರವನ್ನು ಆಯ್ಕೆ ಮಾಡಬೇಕಿದೆ ಎಂದರು.

PM Narendra Modi Fierce Attack Against Congress And JDS

ವಿಶ್ವಾಸಘಾತಕತನಕ್ಕೆ ಮತ್ತೊಮ್ಮೆ ಹೆಸರು ಕಾಂಗ್ರೆಸ್. ರೈತರಿಗೆ ಅನ್ಯಾಯ ಮಾಡುತ್ತಲೇ ಇದೆ. ಚುನಾವಣೆಗೂ ಮುನ್ನ ಸಾಲಮನ್ನ ಮಾಡುವ ಸುಳ್ಳು ಭರವಸೆ ನೀಡಿದೆ. ಸುಳ್ಳಿನ ಬಂಡಲ್ ಎಂದರೆ ಕಾಂಗ್ರೆಸ್. ರೈತರನ್ನು ಸಾಲದ ಹೊರೆಯಲ್ಲಿ ಮುಳುಗಿಸಿ, ಎಲೆಕ್ಷನ್ ವೇಳೆಗೆ ಸಾಲಮನ್ನಾದ ಸುಳ್ಳು ಘೋಷಣೆ ಮಾಡುವುದೇ ಕಾಂಗ್ರೆಸ್ ನ ಕೆಲಸ. ದೇಶದಲ್ಲಿನ ಕೋಟ್ಯಾಂತರ ಜನರಿಗೆ ಬ್ಯಾಂಕ್ ನಲ್ಲಿ‌ಖಾತೆಯೇ ಇರಲಿಲ್ಲ. ಇಂತಹವರ ಸಾಲ ಮನ್ನಾವನ್ನು ಕಾಂಗ್ರೆಸ್ ಮಾಡಿಯೇ ಇಲ್ಲ.

ರಾಜ್ಯದ ಚುನಾವಣೆಯು ಭವಿಷ್ಯದಲ್ಲಿ ವಿಕಾಸದ ನಿಶ್ಚಯವಾಗಲಿದೆ. ದೇಶದ ನಂಬರ್ 1 ರಾಜ್ಯವಾಗಿ ಕರ್ನಾಟಕ ಅಭಿವೃದ್ಧಿ ಹೊಂದಲು ಈ ಚುನಾವಣೆ ಸಹಕಾರಿಯಾಗಿದೆ. ಕಾಂಗ್ರೆಸ್, ಜೆಡಿಎಸ್ ಗೆ ಕರ್ನಾಟಕ ಕೇವಲ ಎಟಿಎಂ ಅಷ್ಟೆಯಾಗಿದೆ. ನಮ್ಮ ಬಿಜೆಪಿಗೆ ಅಭಿವೃದ್ಧಿಯಷ್ಟೆ ಮುಖ್ಯ. ಈ ಹಿಂದೆ ರಾಜ್ಯದ ಲೂಟಿಗೆ ಪೈಪೋಟಿ ನಡೆಸಿದ ಸರಕಾರಗಳನ್ನು ನೀವೆ ಕಂಡಿದ್ದೀರಿ. ಅಸ್ತಿರ ಸರಕಾದ ನಾಟಕ ನೋಡಿದ್ದವೆ. ಕಾಂಗ್ರೆಸ್ ಹಾಗು ಜೆಡಿಎಸ್ ಹೊರಗಡೆಯಷ್ಟೆ ಎರಡು ಪಕ್ಷ. ಇವರೆಡು ದೆಹಲಿಯಲ್ಲಿ ಜತೆಯಾಗಿಯೇ ಇರುತ್ತಾರೆ. ಸಂಸತ್ತಿನಲ್ಲಿ ಜತೆಯಾಗಿರುತ್ತಾರೆ. ಕುಟುಂಬ ರಾಜಕೀಯ ಮಾಡುವ ಈ ಎರಡು ಪಕ್ಷಗಳನ್ನು ಜನ ತಿರಸ್ಕಾರಗೊಳಿಸಬೇಕು.

ಜೆಡಿಎಸ್ ಈಗಾಗಲೇ ಘೋಷಣೆ ಮಾಡಿಕೊಂಡಿದ್ದು, 15 ರಿಂದ 20 ಸೀಟು ಸಿಕ್ಕರೆ ಕಿಂಗ್ ಮೇಕರ್ ಎನ್ನುತ್ತಿವೆ. ಜೆಡಿಎಸ್ ಗೆ ನೀಡುವ ಪ್ರತಿ ಮತ ಕಾಂಗ್ರೆಸ್ ಗೆ ಸೇರಲಿದೆ. ಇದರಿಂದ ಮತ್ತೆ ಅಸ್ತಿರ ಸರಕಾರ ರಚನೆಗೊಳ್ಳಲಿದೆ. ಹೀಗಾಗಿ ಮತದಾರರು ಬಿಜೆಪಿಗೆ ಮತ ನೀಡಿ, ಬಹುಮತದ ಸರಕಾರಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ನ ವಾರೆಂಟಿ ಮುಗಿದಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರೆಂಟಿಯಂತೆ ಪ್ರತಿ ಮನೆಯ ಮಹಿಳೆಯರಿಗೆ ಒಂದು ಸಾವಿರ ನೀಡುತ್ತೆವೆ ಎಂದಿದ್ದ ಘೋಷಣೆ ಆಗಿಯೇ ಉಳಿದಿದೆ. ಕಾರ್ಯರೂಪಕ್ಕೆ ತಂದಿಲ್ಲ. ಇದು ಕಾಂಗ್ರೆಸ್ ನ ಗ್ಯಾರೆಂಟಿ ಯೋಜನೆ ಎಂದು ಟೀಕಿಸಿದರು. ಹಿಮಾಚಲದಲ್ಲಿ ನೀಡಿದ್ದ ಗ್ಯಾರೆಂಟಿಯನ್ನು ಈಗ ಕಾಂಗ್ರೆಸ್ ಮರೆತಿದೆ. ಈಗ ಡೀಸೆಲ್ ಬೆಲೆಯನ್ನು ಹಿಮಾಚದಲ್ಲಿ ಏರಿಸಿರುವ ಕಾಂಗ್ರೆಸ್ , ಬಿಜೆಪಿಯ ಯೋಜನೆಗಳನ್ನು ರದ್ದುಗೊಳಿಸಿದೆ ಎಂದರು.

ಕಾಂಗ್ರೆಸ್ ನ ನೀತಿಗಳೆ ರಿವರ್ಸ್ ಗೇರ್ . ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಿಜೆಪಿಯ ಉತ್ತಮ ಯೋಜನೆಗಳನ್ನು ರದ್ದು ಮಾಡುತ್ತಾರೆ. ಕಾಂಗ್ರೆಸ್ ನ ಬಿ ಟೀಂ ಜೆಡಿಎಸ್‌. ಕಾಂಗ್ರೆಸ್ ನ ಎಲ್ಲ ಮಾತನ್ನು ಜೆಡಿಎಸ್ ಒಪ್ಪುತ್ತವೆ. ರಾಜ್ಯಕ್ಕೆ ರಿವರ್ಸ್ ಗೇರ್ ಸರಕಾರಕ್ಕಿಂತ ಡಬಲ್ ಎಂಜಿನ್ ಮೂಲಕ ಮುಂದಕ್ಕೆ ಹೋಗುವ ಸರಕಾರದ ಅವಶ್ಯಕತೆ ಇದೆ. ಬಿಜೆಪಿ ಯುವಕರ ಹಿತ ಕಾಯುವುದಲ್ಲದೇ, ಪ್ರಥಮ ಆಧ್ಯತೆ ನೀಡಿದೆ. ಮುದ್ರಾ ಯೋಜನೆ ಮೂಲಕ ಯುವಕರಿಗಾಗಿ 20 ಲಕ್ಷ ಕೋಟಿಗು ಅಧಿಕ ಹಣ ನೀಡಲಾಗಿದೆ. ರಾಮನಗರದ ಯುವಕರಿಗೆ ಈ ಯೋನೆಯಡಿ ಮೂರು ಸಾವಿರ ಕೋಟಿ ಹಣ ನೀಡಲಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+