ABP-CVoter survey: ರಾಜಧಾನಿಗಾಗಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ
ಬೆಂಗಳೂರು, ಮೇ. 06: ರಾಜ್ಯ ವಿಧಾನಸಭೆ ಚುನಾವಣೆಗೆ ಮೇ 10ರ ಬುಧವಾರ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಮತದಾನಕ್ಕೆ 4 ದಿನಗಳ ಮೊದಲು ABP - CVoter ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶ ಬಿಡುಗಡೆ ಮಾಡಿದೆ. ಈ ಬಾರಿ ಕರ್ನಾಟಕದಲ್ಲಿ ಆಡಳಿತರೂಢ ಬಿಜೆಪಿಗೆ ಭಾರೀ ಮುಖಭಂಗವಾಗಲಿದೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.
ಎಬಿಪಿ ನ್ಯೂಸ್ ಸಿವೋಟರ್ ಸಹಯೋಗದೊಂದಿಗೆ ಮತದಾರನ ಮನಸ್ಥಿತಿಯನ್ನು ಅಳೆಯಲು ಅಂತಿಮ ಅಭಿಪ್ರಾಯ ಸಂಗ್ರಹವನ್ನು ನಡೆಸಿದೆ. ಸಮೀಕ್ಷೆಯ ಫಲಿತಾಂಶಗಳನ್ನು ಭಾನುವಾರ ಬಿಡುಗಡೆ ಮಾಡಿದೆ. ಕರ್ನಾಟಕ ವಿಧಾನಸಭೆಯ ಒಟ್ಟು 224 ಸ್ಥಾನಗಳಲ್ಲಿ, ಎಬಿಪಿ-ಸಿವೋಟರ್ ಸಮೀಕ್ಷೆಯ ಫಲಿತಾಂಶಗಳು ಆಡಳಿತರೂಢ ಬಿಜೆಪಿ 73 ರಿಂದ 85 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ ಎಂದು ತೋರಿಸಿದೆ.

ಚುನಾವಣೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ 110 ರಿಂದ 122 ಸ್ಥಾನಗಳನ್ನು ಗಳಿಸಲಿದೆ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್ 21 ರಿಂದ 29 ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಬಿಪಿ ನ್ಯೂಸ್ ಸಿವೋಟರ್ ಸಮೀಕ್ಷೆ ವರದಿ ಹೇಳಿದೆ. ಇದರ ಜೊತೆಗೆ ಪ್ರದೇಶವಾರು ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ.
ಬೃಹತ್ ಬೆಂಗಳೂರಿನಲ್ಲಿ 32 ವಿಧಾನಸಭಾ ಸ್ಥಾನಗಳಿದ್ದು, ಈ ಪ್ರದೇಶದಲ್ಲಿ, ಎಬಿಪಿ-ಸಿವೋಟರ್‌ನ ಅಭಿಪ್ರಾಯ ಸಮೀಕ್ಷೆಯ ಫಲಿತಾಂಶಗಳು ಬಿಜೆಪಿ 12 ರಿಂದ 16 ಸ್ಥಾನಗಳೊಂದಿಗೆ 37%, ಕಾಂಗ್ರೆಸ್ 14 ರಿಂದ 18 ಸ್ಥಾನಗಳೊಂದಿಗೆ 41% ಗೆಲುವು ದಾಖಲಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಾದೇಶಿಕ ಪಕ್ಷ ಜೆಡಿಎಸ್ 15% ಮತ ಹಂಚಿಕೆಯೊಂದಿಗೆ 1 ರಿಂದ 4 ಸ್ಥಾನಗಳಲ್ಲಿ ಗೆಲುವು ದಾಖಲಿಸುತ್ತದೆ. ಇತರ ಪಕ್ಷಗಳು 0 ರಿಂದ 1 ಸ್ಥಾನಗಳಲ್ಲಿ ಗೆಲ್ಲುತ್ತವೆ ಎಂದು ಸಮೀಕ್ಷೆ ವರದಿ ತಿಳಿಸಿದೆ.

ಗ್ರೇಟರ್ ಬೆಂಗಳೂರು - 32
ಬಿಜೆಪಿ: 12 - 16
ಜೆಡಿಎಸ್: 1- 4
ಕಾಂಗ್ರೆಸ್: 14-18
ಇತರರು: 0-1
ಈ ಹಿಂದೆ ಮಾರ್ಚ್ 29 ರಂದು ಬಿಡುಗಡೆಯಾಗಿದ್ದ ಎಬಿಪಿ-ಸಿವೋಟರ್ ಸಮೀಕ್ಷೆಯಲ್ಲಿ ಬೃಹತ್ ಬೆಂಗಳೂರು ಭಾಗದ ಮತದಾರರು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿತ್ತು. ಈ ಪ್ರದೇಶದಲ್ಲಿ ಬಿಜೆಪಿ 11 ರಿಂದ 15 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿತ್ತು. ಕಾಂಗ್ರೆಸ್ 15 ರಿಂದ 19 ಸ್ಥಾನಗಳನ್ನು ಗಳಿಸಲಿದೆ ಎಂದಿತ್ತು.
ಇದರ ಜೊತೆಗೆ ಮಾರ್ಚ್ 29 ರಂದು ಎಬಿಪಿ-ಸಿವೋಟರ್ ಕರ್ನಾಟಕ ಅಭಿಪ್ರಾಯ ಸಂಗ್ರಹವು ಕಾಂಗ್ರೆಸ್‌ಗೆ 115 ರಿಂದ 127 ಸ್ಥಾನಗಳು, ಬಿಜೆಪಿಗೆ 68 ರಿಂದ 80 ಸ್ಥಾನಗಳು ಮತ್ತು ಜೆಡಿಎಸ್‌ಗೆ 23 ರಿಂದ 35 ಸ್ಥಾನಗಳು ದೊರೆಯಲಿವೆ ಎಂದಿತ್ತು.












Click it and Unblock the Notifications