2023ನೇ ಸಾಲಿನ 'ಗಳಿಕೆ ರಜೆ ನಗದೀಕರಣ'ಕ್ಕೆ ಪೊಲೀಸರಿಗೆ ಅವಕಾಶ- ಪೂರ್ಣ ಮಾಹಿತಿ ಇಲ್ಲಿದೆ

ಬೆಂಗಳೂರು, ಜನವರಿ 14: 2023 ಸಾಲಿನಲ್ಲಿ ಪೊಲೀಸರ ಗಳಿಕೆ ರಜೆ (EL) ನಗದೀಕರಣ ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ. 2023ನೇ ಸಾಲಿನ ಅವಧಿಯಲ್ಲಿ ಪೊಲೀಸರು ಗರಿಷ್ಠ 15 ದಿನಗಳಿಗೆ ಮೀರದ ಗಳಿಕೆ ರಜೆಯನ್ನು ರಜಾ ವೇತನಕ್ಕೆ ಸಮನಾದ ನಗದೀಕರಣಕ್ಕೆ ಅವಕಾಶ ನೀಡಿ ಸರ್ಕಾರ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶದ ಅನುಸಾರ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಜಯ್‌ ಎಸ್‌ ಕೊರಡೆ ಅವರು ಈ ಆದೇಶ ಪತ್ರವನ್ನು ಹೊರಡಿಸಿದ್ದಾರೆ.

Karnataka Police allowed for earnings leave encashment of 2023

ಈ ಪ್ರಸ್ತಾವಣೆಯು ಹೀಗಿದೆ...

ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118 (2) (i) ರಲ್ಲಿ ಸರ್ಕಾರಿ ನೌಕರರು ಪ್ರತಿ ಕ್ಯಾಲೆಂಡರ್‌ ವರ್ಷದಲ್ಲಿ (ಆಯಾ ವರ್ಷದ ಜನವರಿ 1 ರಿಂದ ಆರಂಭಗೊಂಡಂತೆ ಡಿಸೆಂಬರ್‌ 31ರ ವರೆಗೆ ) 15 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ಅಧ್ಯರ್ಪಿಸಲು ಮತ್ತು ರಜೆ ವೇತನದ ನಗದೀಕರಕ್ಕೆ ಸೌಲಭ್ಯ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಮೇಲೆ ಓದಲಾದ ಸರ್ಕಾರಿ ಆದೇಶದಲ್ಲಿ 2022 ನೇ ಸಾಲಿನ ಬ್ಲಾಕ್‌ ಅವಧಿಗೆ ಸರ್ಕಾರಿ ಅಧಿಕಾರಿ ನೌಕರರು ಗಳಿಕೆ ರಜೆ ಅಧ್ಯರ್ಪಿಸಿ ನಗದೀಕರಣ ಪಡೆಯಲಿ ಅವಕಾಶ ಕಲ್ಪಿಸಲಾಗಿತ್ತು. ಸದರಿ ಬ್ಲಾಕ್‌ ಅವಧಿಯ ದಿನಾಂಕ: 31 /12/ 2022 ರಂದು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಸರ್ಕಾರವು 2023ನೇ ಸಾಲಿನ ಬ್ಲಾಕ್‌ ಅವಧಿಯಲ್ಲಿ 15 ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜೆ ವೇತನಕ್ಕೆ ಸಮನಾಗಿ ನಗದೀಕರಣ ಅವಕಾಶವನ್ನು ಕಲ್ಪಿಸುವ ಹಾಗೂ ಈ ಸೌಲಭ್ಯವನ್ನು ಸರ್ಕಾರದಿಂದ ಸಹಾಯಾನುದಾನ ಪಡೆಯುವ ಅಥವಾ ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಎಲ್ಲಾ ಸಂಸ್ಥೆಗಳ/ ಉದ್ಯಮಗಳ ನೌಕರರಿಗೂ ಸಂಬಂಧಿತ ಸಂಸ್ಥೆ, ಉದ್ಯಮಗಳ ಆರ್ಥಿಕ ಸ್ಥಿತಿಗೆ ಒಳಪಟ್ಟು ನಿಯತಗೊಳಿಸಲು ಅವಕಾಶವನ್ನು ಕಲ್ಪಿಸಲು ಉದ್ದೇಶಿಸಿದೆ ಎಂದು ತಿಳಿಸಿದೆ.

Karnataka Police allowed for earnings leave encashment of 2023

ರಜೆ ನಗದೀಕರಣ ನಿಯಂತ್ರಣಕ್ಕೆ ಸಂಬಂಧಿಸಿದ ಇತರೆ ಷರತ್ತುಗಳು ಅನ್ವಯವಾಗುತ್ತವೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+