KEA: ಇಂದು ವಿವಿಧ ಕೋರ್ಸ್‌ಗಳ ಅಂತಿಮ ಸೀಟು ಹಂಚಿಕೆ, ನವೆಂಬರ್ 8ಕ್ಕೆ ಫಲಿತಾಂಶ
KEA Updates: ಕರ್ನಾಟಕ ಪಿಜಿಸಿಇಟಿ 2025 ವಿವಿಧ ಕೋರ್ಸ್‌ಗಳ 3ನೇ/ಅಂತಿಮ ಹಂತದ ಸೀಟು ಹಂಚಿಕೆ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬಿಡುಗಡೆ ಮಾಡಿದೆ. ವಿವಿಧ ಕಾಲೇಜುಗಳ ಪ್ರವೇಶಾತಿಯ ಅಭ್ಯರ್ಥಿಗಳಿಗೆ ಆಪ್ಷನ್ ದಾಖಲಾತಿಗೆ ದಿನಾಂಕ ಸಹ ಬಿಡುಗಡೆ ಮಾಡಿದ್ದಾಗಿ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪಿಜಿಸಿಇಟಿ-2025 (PGCET-2025) ಎಂ.ಬಿ.ಎ, ಎಂ.ಸಿ.ಎ., ಎಂ.ಇ., ಎಂ.ಟೆಕ್ ಮತ್ತು ಎಂ.ಆರ್ಚ್ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೂರನೇ / ಅಂತಿಮ ಹಂತದ ಸೀಟ್ ಹಂಚಿಕೆ (Final Round Seat Allotment) ವೇಳಾಪಟ್ಟಿ ಒದಗಿಸಿದೆ.

ಈ ಹಂತದ ಸೀಟು ಹಂಚಿಕೆಗೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ CAUTION DEPOSIT ಹಣವನ್ನು ನವೆಂಬರ್ 4 ರಿಂದ ನವೆಂಬರ್ 6 ರವರೆಗೆ ಪಾವತಿಸಬೇಕಾಗಿದೆ. ಪ್ರತಿ ಅಭ್ಯರ್ಥಿಯಿಂದ ರೂ.25,000/-ರಷ್ಟು ಮುಂಗಡ ಮೊತ್ತವನ್ನು (Caution Deposit) ಪಾವತಿಸಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.
ಅಭ್ಯರ್ಥಿಗಳು ನಿಗದಿತ ದಿನಾಂಕಗಳಲ್ಲಿ ಕೌಶಲ್ಯ ಪೂರ್ಣವಾಗಿ ತಮ್ಮ ಆಯ್ಕೆಯನ್ನು ದೃಢೀಕರಿಸಬೇಕು. ಸೀಟ್ ಹಂಚಿಕೆಯ ಫಲಿತಾಂಶ ನವೆಂಬರ್ 8ರಂದು ಮಧ್ಯಾಹ್ನ 2 ಗಂಟೆಗೆ ಪ್ರಕಟವಾಗಲಿದೆ. ಬಳಿಕ Seat Confirmation Slip ಡೌನ್‌ಲೋಡ್ ಮಾಡಿಕೊಳ್ಳಲು ನವೆಂಬರ್ 10ರಿಂದ 12ರವರೆಗೆ ಅವಕಾಶ ನೀಡಲಾಗಿದೆ ಎಂದರು.
ಇನ್ನೂ ಅಂತಿಮವಾಗಿ, ಕಾಲೇಜುಗಳಲ್ಲಿ ದಾಖಲಾತಿ ಪ್ರಕ್ರಿಯೆ ನವೆಂಬರ್ 13 ರಂದು ಸಂಜೆ 5:30 ಗಂಟೆಯೊಳಗೆ ಪೂರ್ಣಗೊಳಿಸಬೇಕೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ತಿಳಿಸಲಾಗಿದೆ. ಪ್ರಾಧಿಕಾರವು ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದು, ಈ ಹಂತದಲ್ಲಿ ಸೀಟ್ ಆಯ್ಕೆ ಅಥವಾ ದೃಢೀಕರಣದ ವೇಳೆ ಯಾವುದೇ ತಪ್ಪು ತಪ್ಪಿಸಲು ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಮನವಿ ಮಾಡಲಾಗಿದೆ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣ https://kea.kar.nic.in ಕ್ಕೆ ಭೇಟಿ ನೀಡಬೇಕು ಎಂದು ಪ್ರಕಟಣೆ ಮಾಹಿತಿ ನೀಡಿದೆ.












Click it and Unblock the Notifications