"ವೃದ್ಧಾಪ್ಯ ವೇತನ ನೀಡಲು ಬದುಕಿರುವ ವೃದ್ಧರಿಗೆ 'ಮರಣ ಪ್ರಮಾಣಪತ್ರ ಕೇಳಿದ ಸರ್ಕಾರ''

ಬೆಂಗಳೂರು: ರಾಜ್ಯದಲ್ಲಿ ಮಾಸಿಕ ವೃದ್ಧಾಪ್ಯ ವೇತನ ಪಡೆಯಲು ಬುದಕಿರುವ ಫಲಾನುಭವಿಗಳು ಸರ್ಕಾರಕ್ಕೆ 'ಮರಣ ಪ್ರಮಾಣ ಪತ್ರ' ನೀಡಬೇಕಂತೆ!.. ಇದಕ್ಕೆ ಸಂಬಂಧಿಸಿದಂತೆ ತಹಶಿಲ್ದಾರ್ ನೋಟಿಸ್ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಅಲ್ಲದೇ ಸರ್ಕಾರ ಅಂಗವಿಕಲರು ಮಾಸಿಕ ಪಿಂಚಣಿ ಪಡೆಯಲು ವಾರ್ಷಿಕ 32 ಸಾವಿರ ರೂಪಾಯಿ ಆದಾಯ ಮಿತಿ ನಿಗದಿ ಮಾಡಿದ್ದರಿಂದ ಅನೇಕರಿಗೆ ಪಿಂಚಣಿ ಸಿಗದೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಿಕ 1200 ರೂ. ನೀಡಲಾಗುತ್ತಿದೆ. ಪಿಂಚಣಿದಾರರ ನೈಜತೆ ಪರಿಶೀಲನೆಗೆ ನೋಟಿಸ್ ನೀಡಲಾಗಿದೆ. ಅದರಲ್ಲಿ ಮರಣ ದೃಢೀಕರಣ ಪತ್ರ ಸಲ್ಲಿಕೆಗೆ ಸೂಚನೆ ನೀಡಿರುವುದು ರಾಜ್ಯದಲ್ಲಿ ಗಂಭೀರ ಚರ್ಚೆ ಹುಟ್ಟು ಹಾಕಿದೆ. ರಾಜ್ಯ ಸರ್ಕಾರದ ಈ ನಡೆಗೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಕಿಡಿ ಕಾರಿದ್ದಾರೆ. ಎಕ್ಸ್ ಖಾತೆಯಲ್ಲಿ ಕಾಂಗ್ರೆಸ್ ಆಡಳಿತ ದೂರಿದ್ದಾರೆ. ಬದುಕಿರುವ ವೃದ್ಧರಿಗೆ 'ಮರಣ ಪ್ರಮಾಣಪತ್ರ' ಕೇಳುವ ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಮಾನ-ಮರ್ಯಾದೆ ಇದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

Karnataka Pension

ರಾಜ್ಯದ ಬಡವರು, ಹಿರಿಯ ನಾಗರಿಕರು, ವಿಧವೆಯರು ಮತ್ತು ವಿಕಲಚೇತನರಿಗೆ ನೀಡುವ ಪಿಂಚಣಿಯನ್ನು ತಡೆಹಿಡಿಯಲು ಕಾಂಗ್ರೆಸ್ ಸರ್ಕಾರ ಹೊಸ ನೀಚ ಹಾದಿ ಹಿಡಿದಿದೆ. 'ಸಂಧ್ಯಾ ಸುರಕ್ಷಾ' ಯೋಜನೆಯಡಿ ಮಾಸಿಕ 1,200 ರೂಪಾಯಿ ಪಡೆಯುತ್ತಿರುವ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ತಹಶೀಲ್ದಾರ್ ಕಚೇರಿಯಿಂದ ನೋಟಿಸ್ ನೀಡಿ, 'ಮರಣ ದೃಢೀಕರಣ ಪತ್ರ' ಸಲ್ಲಿಸುವಂತೆ ಕೇಳುತ್ತಿರುವುದು ಈ ಸರ್ಕಾರದ ನೈತಿಕ ಅದಃಪತನಕ್ಕೆ ಸಾಕ್ಷಿ! ಎಂದಿದ್ದಾರೆ.

'ಮರಣ ಪ್ರಮಾಣ ಪತ್ರ' ತರಲು ಎಲ್ಲಿಗೆ ಹೋಗಬೇಕು?

ಜೀವಂತವಾಗಿರುವ ಹಿರಿಯ ಜೀವಗಳು (ಫಲಾನುಭವಿಗಳು) ತಾವಿನ್ನೂ ಸತ್ತಿಲ್ಲ ಎಂದು ಮರಣ ಪ್ರಮಾಣಪತ್ರ ತರಲು ಎಲ್ಲಿಗೆ ಹೋಗಬೇಕು? ತಾಲೂಕು ಕಚೇರಿಗಳಿಗೆ ಅಲೆಯಲಾಗದೆ ಕಣ್ಣೀರಿಡುತ್ತಿರುವ ವೃದ್ಧರ ಶಾಪ ಈ ರಾಜ್ಯ ಸರ್ಕಾರಕ್ಕೆ ತಟ್ಟದೆ ಬಿಡದು. ರಾಜ್ಯ ಸರ್ಕಾರ ಅನೇಕ ರೀತಿಯಲ್ಲಿ ಅನ್ಯಾಯ ಮಾಡಿದೆ ಎಂದು ಅವರು ಪಟ್ಟಿ ನಿಡಿದ್ದಾರೆ. ವಿವರ ಮುಂದಿದೆ.

ಕರ್ನಾಟಕ ಸರ್ಕಾರದ ಮೇಲೆ ದರಾಡಳಿತ ಆರೋಪ

* ಕಠಿಣ ನಿಯಮಗಳ ಕಿರುಕುಳ: ಪಿಂಚಣಿ ಪಡೆಯಲು ಆಧಾರ, ಪಡಿತರ ಚೀಟಿ ಜೊತೆಗೆ ಮರಣ ಪ್ರಮಾಣಪತ್ರ, ಶಾಲಾ ದಾಖಲೆ ಕೇಳಿ 70-80 ವರ್ಷದ ವೃದ್ಧರನ್ನು ಸತಾಯಿಸಲಾಗುತ್ತಿದೆ.

* ವಿಕಲಚೇತನರಿಗೆ ಅನ್ಯಾಯ: ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಆದಾಯ ಮಿತಿ 1.20 ಲಕ್ಷ ರೂಪಾಯಿ ಇದ್ದರೆ, ವಿಕಲಚೇತನರ ಪಿಂಚಣಿಗೆ ಮಾತ್ರ ವರ್ಷಕ್ಕೆ ಕೇವಲ ₹32,000 ಆದಾಯ ಮಿತಿ ವಿಧಿಸಿ ಅವರ ಹೊಟ್ಟೆಗೆ ಹೊಡೆಯಲಾಗುತ್ತಿದೆ.

* 03 ಲಕ್ಷ ಫಲಾನುಭವಿಗಳಿಗೆ ಕಂಟಕ: ಪರಿಶೀಲನೆ ನೆಪದಲ್ಲಿ ಕಳೆದ ಎರಡು ತಿಂಗಳಿಂದ ರಾಜ್ಯದ ಸುಮಾರು 3 ಲಕ್ಷ ಬಡ ಫಲಾನುಭವಿಗಳ ಪಿಂಚಣಿ ತಡೆಹಿಡಿದು ಅಸಹಾಯಕರನ್ನು ಪೀಡಿಸಲಾಗುತ್ತಿದೆ.

* ಉಚಿತ ಗ್ಯಾರಂಟಿಗಳ ಹೆಸರು ಹೇಳಿ ರಾಜ್ಯದ ಖಜಾನೆ ಖಾಲಿ ಮಾಡಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ಈಗ ಬಡ ವೃದ್ಧರು ಮತ್ತು ವಿಕಲಚೇತನರ ಹೊಟ್ಟೆಮೇಲೆ ಹೊಡೆದು ಆ ಹಣ ಉಳಿಸಲು ಹೊರಟಿದ್ದೀರಾ?

* ಕೂಡಲೇ ಈ ಅಮಾನವೀಯ ನೋಟಿಸ್‌ಗಳನ್ನು ಹಿಂಪಡೆಯಬೇಕು. ವಿಕಲಚೇತನರ ಆದಾಯ ಮಿತಿಯನ್ನು 1.20 ಲಕ್ಷ ರೂಪಾಯಿಗೆ ಹೆಚ್ಚಿಸಿ, ತಡೆಹಿಡಿದಿರುವ ಪಿಂಚಣಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಇಲ್ಲವಾದರೆ, ಸಂತ್ರಸ್ತರೊಂದಿಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+