Karnataka Rain: ಸೆಪ್ಟಂಬರ್ 24ರತನಕ ಒಳನಾಡು ಜಿಲ್ಲೆಗಳಿಗೆ ಭಾರೀ ಮಳೆ, ಯೆಲ್ಲೋ ಅಲರ್ಟ್
Karnataka Rain Alert: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಅಬ್ಬರ ಶುರುವಾಗಲಿದೆ. ಮುಂಗಾರು ಮಳೆಯ ಋತುವಿನ ಅಂತ್ಯದಲ್ಲಿದ್ದೇವೆ. ಸೆಪ್ಟಂಬರ್ ಅಂತ್ಯಕ್ಕೆ ಈ ಮಳೆ ಕೊನೆಗೊಳ್ಳಲಿದ್ದು, ಚಳಿ ಮತ್ತು ಹಿಂಗಾರು ಮಳೆ ಆರಂಭವಾಗಲಿದೆ. ಸದ್ಯ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದಿನಿಂದ ಸೆಪ್ಟಂಬರ್ 22 ರಿಂದ ಸಾಧಾರಣದಿಂದ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಐಎಂಡಿ ಮುನ್ಸೂಚನಾ ವರದಿ ಪ್ರಕಾರ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮತ್ತೆ ಸಕ್ರಿಯವಾಗಲಿದೆ. ಬಂಗಾಳಕೊಲ್ಲಿ ಸಮುದ್ರ ಮೇಲ್ಮೈನಲ್ಲಿ ಉಂಟಾಗಿರುವ ಚಂಡಮಾರುತ ಪ್ರಸರಣ, ಕರಾವಳಿ ಸಮೀಪ ಬೀಸುತ್ತಿರುವ ಸ್ಟ್ರಫ್ ಬಿರುಗಾಳಿ ಪ್ರಭಾವದಿಂದ ಮಳೆ ಸಕ್ರಿಯವಾಗಿದೆ. ಇದರಿಂದ ಕರಾವಳಿಗೆ ಸದ್ಯಕ್ಕೆ ಭಾರೀ ಮಳೆ ಇಲ್ಲದಿದ್ದರೂ ಈ ವಾರಾಂತ್ಯಕ್ಕೆ ಅಲ್ಲೂ ಸಹ ಭಾರೀ ಮಳೆ ಆಗಲಿದೆ.

ಇಂದಿನಿಂದ ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಮೂರು ದಿನ (ಸೆಪ್ಟಂಬರ್ 24ವರೆಗೆ), ಯಾದಗಿರಿಯಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ ಆಗಲಿದೆ. ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳ ಹಲವೆಡೆ ಸಹ ಒಂದು ಗುಡುಗು ಮಿಂಚು ಸಹಿತ ಭಾರೀ ಮಳೆ ಆಗಲಿದ್ದು, 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಸೆಪ್ಟಂಬರ್ 27ರಿಂದ ಮಳೆ ಮತ್ತೆ ತೀವ್ರಗೊಳ್ಳವ ಮುನ್ಸೂಚನೆ ಇದ್ದು, ಆಗ ಒಳನಾಡಿನ ಜಿಲ್ಲೆಗಳ ಜೊತೆಗೆ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲೂ ಮತ್ತೆ ಬಿರುಗಾಳಿ ಸಹಿತ ಭಾರೀ ಮಳೆ ಅಬ್ಬರಿಸುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ಭಾನುವಾರ ಹೇಳಿದೆ.
ಬೆಂಗಳೂರು ಹವಾಮಾನ ಮುನ್ಸೂಚನೆ ವರದಿ
ಬೆಂಗಳೂರಿನಲ್ಲಿ ಸೆಪ್ಟಂಬರ್ 25ರವರೆಗೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಆಗುವ ನಿರೀಕ್ಷೆಗಳು ಇವೆ. ಈಗಾಗಲೇ ತಂಪು ವಾತವರಣ ಕಂಡು ಬರುತ್ತಿದ್ದು,ಕೆಲವೊಮ್ಮೆ ಬಿಸಿಲು ಎದುರಾಗುತ್ತಿದೆ. ಇದರೊಂದಿಗೆ ಅಲ್ಲಲ್ಲಿ ಮಳೆ ಆಗುವ ಸ್ಥಿತಿಯೇ ಮುಮದಿನ ಮೂರು ದಿನ ಮುಂದುವರಿಯಲಿದೆ. ಗರಿಷ್ಠ ತಾಪಮಾನ 28 ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ನೆನ್ನೆ ವಿವಿಧೆಡೆ ಮಳೆ ದಾಖಲು
ನೆನ್ನೆ ಒಂದೇ ದಿನ ಮೂಡಿಗೆರೆಯಲ್ಲಿ 25 ಮಿಲಿ ಮೀಟರ್, ಆಗುಂಬೆ 19.5, ಕಲಬುರಗಿಯ ಗಾಣಗಾಪುರ 13.5, ಬೆಂಗಳೂರಿನ ಗೋಪಾಲ್ ನಗರ 14.5, ಗಂಗಾವತಿ 9.5, ಅಥಣಿ 3.0, ದೊಡ್ಡಬಳ್ಳಾಪುರ 3 ಮತ್ತು ಮಂಗಳೂರಿನಲ್ಲಿ
ಮಂಗಳೂರು (ಡಿಕೆ) 2.5 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.












Click it and Unblock the Notifications