ಕರ್ನಾಟಕದ ಸಚಿವರಿಗೇ ಕನ್ನಡ ಮಾತನಾಡಲು ಬರಲ್ಲ: ಇಲ್ಲಿದೆ ವೈರಲ್ ವಿಡಿಯೋ!

ಕರ್ನಾಟಕದ ಸಚಿವರೇ ಕನ್ನಡ ಭಾಷೆಯಲ್ಲಿ ಮಾತನಾಡುವುದಕ್ಕೆ ತಡವರಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಅವರು, ಕರ್ನಾಟಕ ವಿಧಾನಸಭೆಯಲ್ಲಿ ಬಿಲ್ ಮಂಡನೆ ಮಾಡುವುದಕ್ಕೆ ತಡವರಿಸಿರುವ ವಿಡಿಯೋ ವೈರಲ್ ಆಗುತ್ತಿದ್ದು. ಕನ್ನಡಿಗರು ಅಸಮಾಧಾನ ಹೊರ ಹಾಕಿದ್ದಾರೆ.

ಕರ್ನಾಟಕ ವಿಧಾನಸಭೆಯಲ್ಲಿ ಸಚಿವ ರಹೀಮ್ ಖಾನ್ ಅವರು ಕನ್ನಡದಲ್ಲಿ ಮಾತನಾಡುವುದಕ್ಕೆ ತಡವರಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗುತ್ತಿದೆ. ರಹೀಮ್ ಅವರು ಬಿಲ್ ಮಂಡನೆ ಮಾಡಿದ್ದಾರೆ. ಆದರೆ, ಯಾವ ಬಿಲ್ ಹಾಗೂ ಅದರಲ್ಲಿ ಏನಿದೆ ಎನ್ನುವ ವಿಷಯವನ್ನು ವಿವರಿಸಲು ತಡವರಿಸಿದ್ದಾರೆ. ಮುಂದುವರಿದು ಇದಕ್ಕೆ ಸಚಿವ ಬೈರತಿ ಸುರೇಶ್ ಅವರು ಸಹಾಯ ಮಾಡಿರುವುದು ವಿಡಿಯೋದಲ್ಲಿ ಇದೆ. ಪಕ್ಕದಲ್ಲೇ ಕುಳಿತು ಬೈರತಿ ಅವರು ಹೇಳಿಕೊಟ್ಟಿದ್ದಾರೆ. ಈ ವೇಳೆ ಕನ್ನಡ ಬರದೆ ಪೌರಾಡಳಿತ ಸಚಿವರು ಪರದಾಡಿದ್ದಾರೆ.

Karnataka Ministers Struggle to Speak Kannada Viral Video Sparks Outrage

ಸಚಿವರಾಗಿಯೂ ಕನ್ನಡ ಕಲಿಯುವುದಕ್ಕೆ ಎರಡೂವರೆ ವರ್ಷಗಳ ಅವಧಿ ಸಾಕಾಗುವುದಿಲ್ಲವೇ ಎಂದು ಜನ ಪ್ರಶ್ನೆ ಮಾಡಿದ್ದಾರೆ. ಇನ್ನು ಸದನದಲ್ಲಿ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಅವರು ಮಾತನಾಡುವುದಕ್ಕೆ ಸಚಿವ ಬೈರತಿ ಸುರೇಶ್ ಅವರು ಸಹಾಯ ಮಾಡಿರುವುದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿರುವ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್ ಅವರು, ರಹೀಂ ಖಾನ್ ಅವರು ನನಗೆ ಕಳೆದ 10 - 15 ವರ್ಷಗಳಿಂದಲೂ ಪರಿಚಯ. ಅವರ ಬಗ್ಗೆ ಗೊತ್ತಿದೆ. ಆದರೆ ಅವರು ಕನ್ನಡದಲ್ಲಿ ಮಾತನಾಡಬೇಕು. ತಪ್ಪೋ - ಸರಿಯೋ ಕನ್ನಡದಲ್ಲಿ ಮಾತನಾಡುವುದಕ್ಕೆ ಪ್ರಯತ್ನಿಸಬೇಕು ಎಂದು ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.

ಇನ್ನು ಈ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕನ್ನಡ ಸರಿಯಾಗಿ ಮಾತನಾಡಲು ಕಷ್ಟಪಡುವ ಬೀದರ್ ಕಾಂಗ್ರೆಸ್ ಶಾಸಕ & ಸಚಿವ ರಹೀಮ್ ಖಾನ್ ಅವರನ್ನು ಕ್ಯಾಬಿನೆಟ್ ಸಚಿವರನ್ನಾಗಿ ಮಾಡಿರುವುದು ದುರದೃಷ್ಟಕರ. ಮುಸ್ಲಿಂ ಕೋಟಾದಡಿಯಲ್ಲಿ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಇಷ್ಟೊಂದು ಉತ್ಸುಕವಾಗಿದ್ದರೆ, ಕನಿಷ್ಠ ನಮ್ಮ ಸ್ವಂತ ಭಾಷೆಯಲ್ಲಿ ಸಂವಹನ ನಡೆಸಬಲ್ಲ ಸಮರ್ಥ ನಾಯಕರನ್ನು ಏಕೆ ಆಯ್ಕೆ ಮಾಡಬಾರದು ಎಂದು Karnataka Update ಎನ್ನುವ ಖಾತೆಯಿಂದ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಲಾಗಿದ್ದು ಈ ಟ್ವೀಟ್ ವೈರಲ್ ಆಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ವಲಸಿಗರು ಮತ್ತು ಅನ್ಯಭಾಷಿಕರು ಕನ್ನಡ ಕಲಿಯುತ್ತಿಲ್ಲ. ಇಲ್ಲಿಗೆ ಬಂದ ಮೇಲೆ ಇಲ್ಲಿನ ಭಾಷೆಗೆ ಗೌರವ ನೀಡಿ ನಡೆದುಕೊಳ್ಳುತ್ತಿಲ್ಲ ಎನ್ನುವ ವಿಚಾರವು ಭಾರೀ ಚರ್ಚೆ ಆಗುತ್ತಿರುವ ಸಂದರ್ಭದಲ್ಲಿಯೇ ಕರ್ನಾಟಕದ ಸಚಿವರಿಗೇ ಕನ್ನಡ ಬರುತ್ತಿಲ್ಲ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕರ್ನಾಟಕದ ಸಚಿರೊಬ್ಬರಿಗೆ ಕನ್ನಡ ಬರುವುದಿಲ್ಲ ಎಂದಾದರೆ ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+