ಕೊರೊನಾದಿಂದ ಮೃತ ಪಟ್ಟವರು 4, ಮದ್ಯ ಸಿಗದೇ ಆತ್ಮಹತ್ಯೆ ಮಾಡಿಕೊಂಡವರು 22: ಹಾಗಾಗಿ..

ಲಾಕ್ ಡೌನ್ ನಿಂದ ಮುಕ್ತಿಯಾವಾಗ ಎಂದು ಹದ್ದಿನ ಕಣ್ಣಿನಲ್ಲಿ ಕಾಯುತ್ತಿರುವ ಸಾರ್ವಜನಿಕರಿಗೆ ಸರಕಾರದಿಂದ ಯಾವುದೇ ಕಾಂಕ್ರೀಟ್ ಉತ್ತರ ಬಂದಿಲ್ಲ. ಹಲವು ಸುದ್ದಿಗಳು ಈ ವಿಚಾರದಲ್ಲಿ ಹರಿದಾಡುತ್ತಿದ್ದರೂ ಯಾವುದೂ ಅಧಿಕೃತವಲ್ಲ.

Recommended Video

      ಏಪ್ರಿಲ್ ಫೂಲ್ ಆದ ಕುಡುಕರು | April Fool | Liquor Shop | Oneindia kannada

      ಸರಕಾರ ಈ ಬಗ್ಗೆ ಹಲವು ಇಲಾಖೆ, ವೈದ್ಯಕೀಯ ಕ್ಷೇತ್ರದ ಪರಿಣತರ ಜೊತೆ ಮಾತುಕತೆಯನ್ನು ನಡೆಸುತ್ತದೆ. ಸದ್ಯದ ಮಾಹಿತಿಯ ಪ್ರಕಾರ, ಏಪ್ರಿಲ್ ಹದಿನಾಲ್ಕರ ನಂತರ ಲಾಕ್ ಡೌನ್ ಸಂಪೂರ್ಣವಾಗಿ ತೆರವಾಗುವ ಸಾಧ್ಯತೆಗಳು ಕಮ್ಮಿ.

      ಆದರೆ, ಕೊರೊನಾದ ಯಾವುದೇ ಸೋಂಕು ಇದುವರೆಗೂ ಹರಡದ ಜಿಲ್ಲೆಗಳಲ್ಲಿ, ಲಾಕ್ ಡೌನ್ ಸಡಿಲಿಸುವ ಸಾಧ್ಯತೆಯಿದೆ. ಇನ್ನು, ರೆಡ್ ಜೋನ್ ನಲ್ಲಿರುವ ನಗರಗಳಲ್ಲಿ ಹಂತ ಹಂತವಾಗಿ ಲಾಕ್ ಡೌನ್ ಸಡಿಲಗೊಳ್ಳಬಹುದು.

      ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇದುವರೆಗೆ ಮೃತ ಪಟ್ಟವರು ನಾಲ್ವರು. ಆದರೆ, ಲಾಕ್ ಡೌನ್ ನಿಂದ ಮದ್ಯ ಸಿಗದೇ ಆತ್ಮಹತ್ಯೆ ಮಾಡಿಕೊಂಡವರು 22ಕ್ಕೂ ಹೆಚ್ಚು. ಹಾಗಾಗಿ, ಲಾಕ್ ಡೌನ್ (ಮೊದಲ ಹಂತ) ಮುಗಿದ ನಂತರ ಎಣ್ಣೆ ಅಂಗಡಿಗಳು ಓಪನ್ ಆಗಬಹುದೇ ಎನ್ನುವ ಪ್ರಶ್ನೆಗೆ, ಸಾಧ್ಯತೆಗಳು ಇಲ್ಲದಿಲ್ಲ.

      ಎಣ್ಣೆ ಹೊಡೆಯುವವರು ಏಪ್ರಿಲ್ ಹದಿನಾಲ್ಕರ ತನಕ ಕಾಯಲೇ ಬೇಕು

      ಎಣ್ಣೆ ಹೊಡೆಯುವವರು ಏಪ್ರಿಲ್ ಹದಿನಾಲ್ಕರ ತನಕ ಕಾಯಲೇ ಬೇಕು

      ಕೆಲವು ದಿನಗಳ ಹಿಂದೆ, ಮದ್ಯದ ಅಂಗಡಿ ಓಪನ್ ಮಾಡುತ್ತೀರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ, ಮುಖ್ಯಮಂತ್ರಿಗಳು, "ಎಣ್ಣೆ ಹೊಡೆಯುವವರು ಏಪ್ರಿಲ್ ಹದಿನಾಲ್ಕರ ತನಕ ಕಾಯಲೇ ಬೇಕು" ಎಂದು ನಗುನಗುತ್ತಲೇ ಉತ್ತರಿಸಿದ್ದರು. ಮದ್ಯದ ಅಂಗಡಿಯನ್ನು ಷರತ್ತಿನ ಮೇಲೆ ಓಪನ್ ಮಾಡಲು ಅನುವು ಮಾಡಿಕೊಡಲು, ಸರಕಾರಕ್ಕೆ ತುಂಬಾ ಒತ್ತಡವಿದೆ ಎಂದು ಹೇಳಲಾಗುತ್ತಿದೆ.

      ರಾಜಸ್ವಕ್ಕೆ ಭರ್ಜರಿ ಆದಾಯ ತಂದು ಕೊಡುತ್ತಿರುವ ಅಬಕಾರಿ ಇಲಾಖೆ

      ರಾಜಸ್ವಕ್ಕೆ ಭರ್ಜರಿ ಆದಾಯ ತಂದು ಕೊಡುತ್ತಿರುವ ಅಬಕಾರಿ ಇಲಾಖೆ

      ರಾಜಸ್ವಕ್ಕೆ ಆದಾಯ ತಂದು ಕೊಡುತ್ತಿರುವ ಟಾಪ್ ಟು ಇಲಾಖೆಗಳು ಎಂದರೆ, ವಾಣಿಜ್ಯ ತೆರಿಗೆ, ನಂತರ ಅಬಕಾರಿ ಇಲಾಖೆ. ಈಗ ಮದ್ಯದ ಅಂಗಡಿ ಬಂದ್ ಆಗಿರುವುದರಿಂದ, ಸರಕಾರಕ್ಕೂ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಏನೇ ಆಗಲಿ, ಏ.14ರ ಮುನ್ನ ಮದ್ಯದ ಅಂಗಡಿ ತೆರೆಯುವುದಕ್ಕೆ ಅನುಮತಿ ನೀಡಲು, ಸಿಎಂ ಖಡಾಖಂಡಿತವಾಗಿ ನಿರಾಕರಿಸಿದ್ದಾರೆ.

      ಬಾರ್ ಎಂಡ್ ರೆಸ್ಟೋರೆಂಟ್

      ಬಾರ್ ಎಂಡ್ ರೆಸ್ಟೋರೆಂಟ್

      ಅಬಕಾರಿ ಇಲಾಖೆಯ ಅಧಿಕಾರಿಗಳು ಸರಕಾರಕ್ಕೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿರುವ ಮನವಿಯ ಪ್ರಕಾರ, ಬಾರ್ ಎಂಡ್ ರೆಸ್ಟೋರೆಂಟ್ ಗಳಿಗೆ, ಅಂದರೆ, ಏಪ್ರಿಲ್ ಹದಿನಾಲ್ಕರ ನಂತರ ಅನುಮತಿ ನೀಡದಿದ್ದರೂ ಓಕೆ. ಆದರೆ, MRP ಅಂಗಡಿ ತೆರೆಯಲು ಅನುಮತಿ ನೀಡಬೇಕೆಂದು ಕೋರಿದೆ.

      ಮೂರು ಗಂಟೆಗಳ ಕಾಲ ಮದ್ಯದಂಗಡಿ ಓಪನ್

      ಮೂರು ಗಂಟೆಗಳ ಕಾಲ ಮದ್ಯದಂಗಡಿ ಓಪನ್

      ಮೊದಲು, ದಿನಕ್ಕೆ ಮೂರು ಗಂಟೆಗಳ ಕಾಲ (ಬೆಳಗ್ಗೆ 10-1 ಅಥವಾ, ಬೆಳಗ್ಗೆ 11-2) ಅಂಗಡಿ ತೆರೆಯಲು ಅನುಮತಿ ನೀಡಲು ಇಲಾಖೆ ಕೋರಿದೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಅಂತರವನ್ನು ಕಾಯ್ಡುಕೊಂಡು ಮದ್ಯ ವಿತರಿಸುವ ಜವಾಬ್ದಾರಿಯನ್ನು ಆಯಾಯ ಮಳಿಗೆಗಳಿಗೆ ನೀಡುವ ಪ್ರಸ್ತಾವನೆಯನ್ನು ಇಲಾಖೆ ಸಲ್ಲಿಸಿದೆ ಎನ್ನುವ ಮಾಹಿತಿಯಿದೆ. ಹಾಗಾಗಿ, ಏಪ್ರಿಲ್ ಹದಿನಾಲ್ಕರ ನಂತರ MRP ಅಂಗಡಿಗಳು ತೆರೆಯುವ ಸಾಧ್ಯತೆ ಇಲ್ಲದಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+