Man Urinates in KSRTC Bus : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳಾ ಸೀಟ್‌ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ!

ಕರ್ನಾಟಕದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರ ಸೀಟಿನ ಮೇಲೆ ಪುರುಷ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಹುಬ್ಬಳ್ಳಿ ಫೆಬ್ರವರಿ 23: ವಿಮಾನದಲ್ಲಿ ಸಹಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡುವಂತ ಘಟನೆಗಳ ನಂತರ ಸದ್ಯ ಬಸ್‌ ಸರದಿ ಶುರುವಾಗಿದೆ. ಈ ಬಾರಿ ಕರ್ನಾಟಕದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ನಲ್ಲಿ 32 ವರ್ಷದ ವ್ಯಕ್ತಿಯೊಬ್ಬ ಮಹಿಳಾ ಸಹ-ಪ್ರಯಾಣಿಕರ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ವರದಿಯಾಗಿದೆ. ವಿಜಯಪುರದಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್‌ನಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.

Karnataka: Man urinates on seat of female passenger in a KSRTC bus!

ನಾನ್ ಎಸಿ ಸ್ಲೀಪರ್ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹುಬ್ಬಳ್ಳಿ ಬಳಿಯ ರೆಸ್ಟೋರೆಂಟ್‌ನಲ್ಲಿ ಡಿನ್ನರ್ ಸ್ಟಾಪ್‌ ವೇಳೆ 20 ವರ್ಷದ ಮಹಿಳೆ ಸಹಪ್ರಯಾಣಿಕರ ಸೀಟಿನ ಮೇಲೆ ಗುರುತು ಪತ್ತೆಯಾಗದ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ್ದಾನೆ.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮೂತ್ರ ವಿಸರ್ಜನೆ

ಘಟನೆ ನಡೆದಾಗ ಬಸ್‌ನಲ್ಲಿ ಯಾರೂ ಇರಲಿಲ್ಲ ಎಂದು ಕೆಎಸ್‌ಆರ್‌ಟಿಸಿಯ ಮಂಗಳೂರು ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಿಳೆ ಬಸ್‌ಗೆ ಹಿಂತಿರುಗಿದ ತಕ್ಷಣ ಸಹಾಯಕ್ಕಾಗಿ ಕೂಗಿದ್ದಾಳೆ. ನಂತರ ಹಲವಾರು ಪ್ರಯಾಣಿಕರು ಮತ್ತು ಬಸ್ ಸಿಬ್ಬಂದಿ ಧಾವಿಸಿ ವ್ಯಕ್ತಿಯನ್ನು ಎದುರಿಸಿದ್ದಾರೆಂದು ತಿಳಿದು ಬಂದಿದೆ.

"ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಅಮಲೇರಿದ ಸ್ಥಿತಿಯಲ್ಲಿದ್ದರು. ಮಾತ್ರವಲ್ಲದೆ ಅವರು ಸಹ ಪ್ರಯಾಣಿಕರು ಮತ್ತು ಬಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಮಲೇರಿದ ವ್ಯಕ್ತಿಯನ್ನು ನಿಯಂತ್ರಿಸಲಾಗದ ಕಾರಣ ಸಹ ಪ್ರಯಾಣಿಕರು ಆತನನ್ನು ಕೆಳಗಿಳಿಸಲು ಒತ್ತಾಯಿಸಿದರು" ಎಂದು ಸಹ-ಪ್ರಯಾಣಿಕರೊಬ್ಬರು ಪ್ರಕಟಣೆಗೆ ತಿಳಿಸಿದ್ದಾರೆ.

Karnataka: Man urinates on seat of female passenger in a KSRTC bus!

ಘಟನೆಯ ನಂತರ ಆಘಾತಕ್ಕೊಳಗಾದ ಮಹಿಳಾ ಪ್ರಯಾಣಿಕರು ಈ ವಿಷಯದ ಬಗ್ಗೆ ದೂರು ನೀಡಲು ನಿರಾಕರಿಸಿದರು. ಆದ್ದರಿಂದ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯನ್ನು ಕೆಳಗಿಳಿಸಿ ಬಸ್ ಪ್ರಯಾಣ ಮುಂದುವರಿಸಲಾಯಿತು ಎಂದು ಕೆಎಸ್ಆರ್ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಸ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಯಾರು?

ಆ ವ್ಯಕ್ತಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು, ವಿಜಯಪುರದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಎಂದು ಮತ್ತೊಬ್ಬ ಸಹ ಪ್ರಯಾಣಿಕರು ತಿಳಿಸಿದ್ದಾರೆ. "ಬಸ್ ಸಿಬ್ಬಂದಿ ತಕ್ಷಣವೇ ಬ್ಯಾಗ್ ಮತ್ತು ಸೀಟನ್ನು ಸ್ವಚ್ಛಗೊಳಿಸಿದರು ಮತ್ತು ಮಹಿಳೆಯ ಸುರಕ್ಷತೆಯನ್ನು ಖಾತ್ರಿಪಡಿಸಿದರು" ಎಂದು ಸಹ ಪ್ರಯಾಣಿಕರು ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮದ್ಯಪಾನ ಮಾಡಿದ ಪುರುಷ ಪ್ರಯಾಣಿಕ ಶಂಕರ್ ಮಿಶ್ರಾ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಭಾರೀ ಸುದ್ದಿಯಾಗಿತ್ತು. ಇಂತಹ ಘಟನೆಗಳು ಮರುಕಳಿಸುತ್ತಲೇ ಇದ್ದು ಮದ್ಯಪಾನ ಮಾಡಿ ವಾಹನ ಸಂಚಾರಕ್ಕೆ ಅವಕಾಶ ನೀಡದ ರೀತಿಯಲ್ಲೇ ಬಸ್, ರೈಲು, ವಿಮಾನದಲ್ಲಿ ಪ್ರಯಾಣಿಸಿದಂತೆ ಕೂಡ ನಿಯಮ ತರಬೇಕಿದೆ. ಹೀಗಾದಲ್ಲಿ ಪ್ರಯಾಣಿಕರು ಕುಡುಕರಿಂದ ಯಾವುದೇ ತೊಂದರೆ ಇಲ್ಲದೆ ಪ್ರಯಾನ ಂಆಡಲು ಸಹಾಯವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+