Karnataka Dam Water Level: ಇಂದು ವಿವಿಧ ಜಲಾಶಯಗಳಲ್ಲಿ ಒಳಹರಿವು- ಹೊರಹರಿವು ಎಷ್ಟಿದೆ? ಪಟ್ಟಿ
ಬೆಂಗಳೂರು, ಆಗಸ್ಟ್ 05: ಕರ್ನಾಟಕ ರಾಜ್ಯದಲ್ಲಿ ಕಳೆದ ತಿಂಗಳಿನಿಂದ ಸುರಿಯುತ್ತಿರುವ ಮಳೆ ಮುಂದುವರಿದಿದೆ. ಪಶ್ಚಿಮ ಘಟ್ಟಗಳು, ಕಾಡು, ಕಾಣಿವೆ ಭಾಗದಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಕಳೆದ ವರ್ಷ ಬತ್ತಿಹೋಗಿದ್ದ ಕೆರೆ, ನದಿ, ಜಲಾಶಯಗಳಲ್ಲಿ ಜೀವ ಕಳೆ ಬಂದಿದೆ. ಮಳೆಯಿಂದಾಗಿ ರಾಜ್ಯದ ಬಹುತೇಕ ಎಲ್ಲ ಅಣೆಕಟ್ಟುಗಳು ಭರ್ತಿಯಾಗಿವೆ. ಕೆಲವು ಡ್ಯಾಂಗಳ ಒಳ ಹರಿವು ಮತ್ತು ಹೊರ ಹರಿವು ಏರಿಕೆ ಆಗಿದೆ.
ಈ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ನೀಡಿದೆ. ಲಿಂಗನಕ್ಕಿ, ಭದ್ರಾ, ಆಲಮಟ್ಟಿ, ಕೆಆರ್‌ಎಸ್, ಕಬಿನಿ, ಹಾರಂಗಿ, ವಾಣಿವಿಲಾಸ ಜಲಾಶಯ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಅಣೆಕಟ್ಟುಗಳು ತುಂಬಿ ಹರಿಯುತ್ತಿವೆ. ಆಗಸ್ಟ್ 05ರಂದು ಈ ಜಲಾಶಯಗಳಲ್ಲಿ ಹೆಚ್ಚಿನ ಒಳಹರಿವು ಕಂಡು ಬಂದಿದೆ.

ಜಲಾಶಯಗಳ ಜಲಾನಯನ ಪ್ರದೇಶಗಳಲ್ಲಿ ಸುರಿದ ವಿಪರಿತ ಮಳೆಯಿಂದಾಗಿ ನದಿಗಳ ಒಳಹರಿವು ಹೆಚ್ಚಾಗಿದೆ. ಅದರಿಂದ ಆಯಾ ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯಗಳಲ್ಲಿ ಸಾವಿರಾರು ಕ್ಯೂಸೆಕ್ ನೀರು ತುಂಬಿಕೊಂಡ ಪರಿಣಾಮ ಕೆಆರ್‌ಎಸ್, ಲಿಂಗನಮಕ್ಕಿ, ಹಾರಂಗಿ, ಭದ್ರಾ ಜಲಾಶಯಗಳಿಂದ ನೀರು ಹೊರ ಬಿಡಲಾಗುತ್ತಿದೆ.
ಸದ್ಯ ರಾಜ್ಯದಲ್ಲಿ ಭರ್ತಿಯಾಗಿರುವ ಪ್ರಮುಖ ಜಲಾಶಯಗಳ ಇಂದಿನ ನೀರಿನ ಪ್ರಮಾಣ, ಒಳ ಮತ್ತು ಹೊರ ಹರಿವಿನ ಪ್ರಮಾಣದ ಮಾಹಿತಿ ಇಲ್ಲಿದೆ.
ಕರ್ನಾಟಕ ಅಣೆಕಟ್ಟುಗಳ ಇಂದಿನ ನೀರಿನ ಮಟ್ಟ
KRS ಜಲಾಶಯದ ವಿವರ
ಒಟ್ಟು ಸಾಮರ್ಥ್ಯ - 49 ಟಿಎಂಸಿ
ಇಂದಿನ ಮಟ್ಟ- 35.53 ಟಿಎಂಸಿ
ಒಳ ಹರಿವು - 34,029 ಕ್ಯೂಸೆಕ್
ಹೊರ ಹರಿವು- 34,773 ಕ್ಯೂಸೆಕ್
* ಹೇಮಾವತಿ ಜಲಾಶಯ
ಒಟ್ಟು ಸಾಮರ್ಥ್ಯ- 37. 10 ಟಿಎಂಸಿ
ಇಂದಿನ ನೀರಿನ ಮಟ್ಟ - 30.73 ಟಿಎಂಸಿ
ಒಳಹರಿವು - 12,887 ಕ್ಯೂಸೆಕ್
ಹೊರಹರಿವು - 5,575 ಕ್ಯೂಸೆಕ್
* ತುಂಗಭದ್ರಾ ಜಲಾಶಯ
ಒಟ್ಟು ಸಾಮರ್ಥ್ಯ - 105.79 ಟಿಎಂಸಿ
ಇಂದಿನ ಮಟ್ಟ - 99.82 ಟಿಎಂಸಿ
ಹೊರಹರಿವು - 1,24,376 ಕ್ಯೂಸೆಕ್
ಒಳಹರಿವು - 1,14,526 ಕ್ಯೂಸೆಕ್
* ಹಾರಂಗಿ ಜಲಾಶಯ
ಒಟ್ಟು ನೀರಿನ ಸಾಮರ್ಥ್ಯ- 8.50 ಟಿಎಂಸಿ
ಇಂದಿನ ಸಂಗ್ರಹ - 8.38 ಟಿಎಂಸಿ
ಒಳಹರಿವು -5,171 ಕ್ಯೂಸೆಕ್
ಹೊರಹರಿವು - 6,000 ಕ್ಯೂಸೆಕ್

ಒಟ್ಟು ಸಾಮರ್ಥ್ಯ- 151 ಟಿಎಂಸಿ
ಇಂದಿನ ಮಟ್ಟ - 141.75 ಟಿಎಂಸಿ
ಒಳಹರಿವು - 31,051 ಕ್ಯೂಸೆಕ್
ಹೊರಹರಿವು - 10,998 ಕ್ಯೂಸೆಕ್
* ಮಲಪ್ರಭಾ ಜಲಾಶಯ
ಒಟ್ಟು ನೀರಿನ ಸಾಮರ್ಥ್ಯ - 37.73 ಟಿಎಂಸಿ
ಇಂದಿನ ಸಂಗ್ರಹ - 33.32 ಟಿಎಂಸಿ
ಒಳಹರಿವು - 6794 ಕ್ಯೂಸೆಕ್
ಹೊರಹರಿವು - 6794 ಕ್ಯೂಸೆಕ್
* ಕಬಿನಿ ಜಲಾಶಯ
ಡ್ಯಾಮ್‌ನ ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಇಂದಿನ ಮಟ್ಟ - 18.46 ಟಿಎಂಸಿ
ಹೊರಹರಿವು - 4892 ಕ್ಯೂಸೆಕ್
ಒಳಹರಿವು - 12,225 ಕ್ಯೂಸೆಕ್
* ಆಲಮಟ್ಟಿ ಜಲಾಶಯ
ಡ್ಯಾಮ್‌ನ ಒಟ್ಟು ಸಾಮರ್ಥ್ಯ - 123.8 ಟಿಎಂಸಿ
ಇಂದಿನ ಮಟ್ಟ - 120 ಟಿಎಂಸಿ
ಹೊರಹರಿವು - 2,52,555ಕ್ಯೂಸೆಕ್
ಒಳಹರಿವು - 3,03,608 ಕ್ಯೂಸೆಕ್












Click it and Unblock the Notifications