ಪರಿಷತ್ ಸ್ಥಾನದಿಂದ ನಿವೃತ್ತರಾದ 11 ಸದಸ್ಯರು

ಬೆಂಗಳೂರು, ಜೂ.30 : ವಿಧಾನಪರಿಷತ್ತಿನ ಹಿರಿಯ ಸದಸ್ಯರಾದ ಎಂ.ವಿ.ರಾಜಶೇಖರನ್, ಎಂ.ಸಿ.ನಾಣಯ್ಯ ಸೇರಿದಂತೆ ಒಟ್ಟು 11 ಸದಸ್ಯರು ಸೋಮವಾರ ನಿವೃತ್ತರಾದರು. ಜೂನ್‌ 20ಕ್ಕೆ ಐವರು ನಾಮನಿರ್ದೇಶನ ಸದಸ್ಯರ ಅವಧಿ ಮುಗಿದಿತ್ತು. ಉಳಿದಂತೆ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾದ 7 ಮಂದಿ ಹಾಗೂ ಪದವೀಧರ ಮತ್ತು ಶಿಕ್ಷಕರ ತಲಾ ಎರಡು ಕ್ಷೇತ್ರಗಳ ನಾಲ್ವರು ಸದಸ್ಯರ ಅವಧಿ ಜೂ.30ರ ಸೋಮವಾರಕ್ಕೆ ಮುಕ್ತಾಯಗೊಂಡಿದೆ.

ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸೋಮವಾರ ನಿವೃತ್ತರಾದ ಸದಸ್ಯರಿಗೆ ಬೆಳಗ್ಗೆ ಉಪಹಾರ ಕೂಟ ಆಯೋಜಿಸಿದ್ದರು. ನಂತರ ನಡೆದ ಫೋಟೋ ಸೆಷನ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿಧಾನಪರಿಷತ್ತಿನ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು. ಜೆಡಿಎಸ್ ನ ಎಂ.ಸಿ.ನಾಣಯ್ಯ, ನಾಮನಿರ್ದೇಶಿತ ಸದಸ್ಯರಾಗಿದ್ದ ಎಂ.ವಿ.ರಾಜಶೇಖರನ್ ಸೇರಿದಂತೆ ಹಿರಿಯ ನಾಯಕರು ಇಂದು ನಿವೃತ್ತಿಯಾದರು. [ಪರಿಷತ್ ನಾಮನಿರ್ದೇಶನಕ್ಕೆ ತೆರೆ]

ನಿವೃತ್ತರಾದ ಐವರು ನಾಮನಿರ್ದೇಶಿತ ಸದಸ್ಯರ ಸ್ಥಾನಕ್ಕೆ ಈಗಾಗಲೇ ವಿ.ಎಸ್‌.ಉಗ್ರಪ್ಪ, ಇಕ್ಬಾಲ್‌ ಅಹ್ಮದ್‌ ಸರಡಗಿ, ಅಬ್ದುಲ್‌ ಜಬ್ಟಾರ್‌, ಐವಾನ್‌ ಡಿಸೋಜಾ ಹಾಗೂ ಜಯಮಾಲಾ ಅವರನ್ನು ಸರ್ಕಾರ ನೇಮಿಸಿದೆ. ಇನ್ನು ಎರಡು ಪದವೀಧರ, ಎರಡು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆದಿದ್ದು, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ನ ಪುಟ್ಟಣ್ಣ, ಆಗ್ನೇಯ ಪದವೀಧರ ಕ್ಷೇತ್ರದಿಂದ ಜೆಡಿಎಸ್‌ನ ಚೌಡರೆಡ್ಡಿ, ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿಯ ಎಸ್‌.ವಿ.ಸಂಕನೂರು ಮತ್ತು ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್‌ ನ ಶರಣಪ್ಪ ಮಟ್ಟೂರ ಆಯ್ಕೆಯಾಗಿದ್ದಾರೆ.

ವಿಧಾನಸಭೆಯಿಂದ ಪರಿಷತ್ತಿಗೆ : ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದ ಬಿಜೆಪಿಯ ಡಿ.ವಿ. ಸದಾನಂದಗೌಡ, ಭಾರತಿ ಶೆಟ್ಟಿ, ಸಿದ್ದರಾಜು, ಮೋನಪ್ಪ ಭಂಡಾರಿ, ಜೆಡಿಎಸ್‌ನ ಕೆ.ವಿ.ನಾರಾಯಣಸ್ವಾಮಿ ಅವಧಿ ಸೋಮವಾರಕ್ಕೆ ಮುಕ್ತಾಯಗೊಂಡಿದೆ. ಈ ಸ್ಥಾನಗಳಿಗೆ ಈಗಾಗಲೇ ಕಾಂಗ್ರೆಸ್ಸಿನಿಂದ ಡಾ.ಜಿ. ಪರಮೇಶ್ವರ್‌, ಎಚ್‌.ಎಂ. ರೇವಣ್ಣ, ಎನ್‌.ಎಸ್‌.ಬೋಸರಾಜು, ಜಯಮ್ಮ ಬಾಲರಾಜ್‌, ಬಿಜೆಪಿಯಿಂದ ಕೆ.ಎಸ್‌. ಈಶ್ವರಪ್ಪ, ಜೆಡಿಎಸ್‌ನಿಂದ ಟಿ.ಎ ಶರವಣ, ಬಿಜೆಪಿ-ಜೆಡಿಎಸ್‌ ಒಮ್ಮತದ ಅಭ್ಯರ್ಥಿಯಾಗಿ ಡಿ.ಯು.ಮಲ್ಲಿಕಾರ್ಜುನ್‌ ಆಯ್ಕೆಯಾಗಿದ್ದಾರೆ.

Karnataka Legislative Council

ಇಂದು ನಿವೃತ್ತರಾದವರು : ಡಿವಿ ಸದಾನಂದ ಗೌಡ, ಭಾರತಿ ಶೆಟ್ಟಿ, ಕೆ.ಮೋನಪ್ಪ ಭಂಡಾರಿ, ಡಾ.ಎ.ಎಚ್.ಶಿವಯೋಗಿಸ್ವಾಮಿ, ದೊಡ್ಡರಂಗೇಗೌಡ, ಎಂ.ಆರ್.ದೊರೆಸ್ವಾಮಿ, ಬಿ.ಬಿ. ಶಿವಪ್ಪ. ಎಂ.ವಿ.ರಾಜಶೇಖರನ್. ಎಂ.ಸಿ.ನಾಣಯ್ಯ, ಕೆ.ವಿ.ನಾರಾಯಣಸ್ವಾಮಿ, ಪುಟ್ಟಣ್ಣ. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ನ ಪುಟ್ಟಣ್ಣ ಅವರು ಮರು ಆಯ್ಕೆಯಾಗಿದ್ದು ಸದಸ್ಯರಾಗಿ ಮುಂದುವರೆಯಲಿದ್ದಾರೆ. [ವಿಧಾನ ಪರಿಷತ್ ಪ್ರವೇಶಿಸಿದ ಪರಮೇಶ್ವರ್, ಈಶ್ವರಪ್ಪ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+