KSRTC: ಪ್ರತಿ‍ಷ್ಠಿತ ಗೋಲ್ಡ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕರ್ನಾಟಕ ಕೆಎಸ್‌ಆರ್‌ಟಿಸಿ

ಬೆಂಗಳೂರು, ಮೇ 28: ಕರ್ನಾಟಕ ಮಾತ್ರವಲ್ಲದೇ, ಬೇರೆ ಬೇರೆ ರಾಜ್ಯಗಳವರೆಗೆ ಸೇವೆ ನೀಡುತ್ತಿರುವ 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ' (KSRTC) ತನ್ನ ಕಾರ್ಯಾಚರಣೆ, ಉಪಕ್ರಮ ಬದ್ಧತೆಗಳಿಂದಲೇ ಹೆಸರುವಾಸಿಯಾಗಿದೆ. ತನ್ನ ಸೇವೆಯಿಂದಾಗಿ ಈಗಾಗಲೇ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಸಂಸ್ಥೆಗೆ ಮತ್ತಷ್ಟು ಪ್ರಶಸ್ತಿಗಳು ಲಭಿಸಿವೆ.

ಹೌದು, 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ' ಬಿಡಬ್ಲ್ಯೂ ಮಾರ್ಕೆಟಿಂಗ್ ವರ್ಲ್ಡ್ ಮತ್ತು ಬಿಡಬ್ಲ್ಯೂ ಬಿಸಿನೆಸ್ ವರ್ಲ್ಡ್ ಸಹಯೋಗದಲ್ಲಿ ನೀಡುವ ಬಹುಮಾನಗಳಲ್ಲಿ 2 ಗೋಲ್ಡ್ ಅವಾರ್ಡ್‌ಗಳನ್ನು ಪಡೆದಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ.

Karnataka KSRTC Got BW Merit Awards 2025 for These Reasons

ರಾಜ್ಯದ ಬಸ್‌ಗಳಲ್ಲಿ UPI ಸೌಲಭ್ಯದೊಂದಿಗೆ AWATAR 4.0 ಯೋಜನೆಗೆ 'ಟೆಕ್ನಾಲಜಿ ಆಫ್ ದಿ ಇಯರ್' ವಿಭಾಗದಲ್ಲಿ ಗೋಲ್ಡ್ ಅವಾರ್ಡ್ ನೀಡಲಾಗಿದೆ. ಇನ್ನೂ 'ಟ್ರಾವೆಲ್, ಟೂರಿಸಂ ಆಂಡ್ ಲೆಷರ್' ವಿಭಾಗದಲ್ಲಿ ಬಸ್‌ಗಳ ಬ್ರಾಂಡಿಂಗ್‌ಗೆ ಗೋಲ್ಡ್ ಅವಾರ್ಡ್ ನೀಡಿ ಗೌರವಸಿಲಾಗಿದೆ.

ಈ ಪ್ರಮುಖ ಪ್ರಶಸ್ತಿಗಳನ್ನು BW Businessworld ಮತ್ತು exchange4media ಗ್ರೂಪ್‌ನ ಹಿರಿಯ ಸಂಪಾದಕರಾದ ರುಹೈಲ್ ಅಮಿನ್ ಅವರು ನೀಡಿದ್ದಾರೆ. ಈ ಪ್ರಮುಖ ಪ್ರಶಸ್ತಿಗಳನ್ನು ಕೆಎಸ್‌ಆರ್‌ಟಿಸಿ ಪರವಾಗಿ ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ) ಶ್ರೀಮತಿ ವೀಣಾ ದೇಸಾಯಿ ಮತ್ತು ವಿಭಾಗೀಯ ಸಂಚಲನಾಧಿಕಾರಿ ರಾಘವೇಂದ್ರ ಎಸ್.ಎನ್. ಅವರಿಗೆ ಸ್ವೀಕರಿಸಿದರು.

Karnataka KSRTC Got BW Merit Awards 2025 for These Reasons

ಬಿಡಬ್ಲ್ಯೂ ಮಾರ್ಕೆಟಿಂಗ್ ವರ್ಲ್ಡ್ ಮತ್ತು ಬಿಡಬ್ಲ್ಯೂ ಬಿಸಿನೆಸ್ ವರ್ಲ್ಡ್ ಸಹಯೋಗದಲ್ಲಿ ಆಯೋಜಿಸಿದ BW Merit Awards 2025 ಇದರ 2ನೇ ಆವೃತ್ತಿಯಲ್ಲಿ ದೇಶದಲ್ಲಿ ಅತ್ಯುತ್ತಮ ಮಾರ್ಕೆಟಿಂಗ್ ಕೌಶಲ್ಯ, ಸಾಧನೆ ಮತ್ತು ನಾಯಕತ್ವಕ್ಕೆ ನೀಡುವ ಅತ್ಯಮೂಲ್ಯ ಗೌರವ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

BW Merit Awards 2025 ಪ್ರಶಸ್ತಿಗಳು ತಮ್ಮ ಸಂಸ್ಥೆಗಳ ಬೆಳವಣಿಗೆಯಲ್ಲಿಯೂ ಮತ್ತು ವಿಸ್ತೃತ ಪರಿಸರ ವ್ಯವಸ್ಥೆಯಲ್ಲಿಯೂ ಮಹತ್ತರ ಕೊಡುಗೆ ನೀಡಿದ ವ್ಯಕ್ತಿಗಳನ್ನು, ಸಂಸ್ಥೆಗಳನ್ನೂ ಗೌರವಿಸುತ್ತದೆ. ಇನ್ನೂ ಇತ್ತೀಚೆಗಷ್ಟೆ ಕೆಎಸ್‌ಆರ್‌ಟಿಸಿ ಪಡೆದ ಕೆಲವು ಪ್ರಶಸ್ತಿಗಳ ವಿವರ ಇಲ್ಲಿದೆ.

ಕೆಎಸ್‌ಆರ್‌ಟಿಸಿಗೆ ಮೊನ್ನೆಯಷ್ಟೇ ತಾನು ಕೈಗೊಂಡಿರುವ ಅತ್ಯುತ್ತಮ ಪ್ರಯಾಣಿಕರ ಸ್ನೇಹಿ ಹಾಗೂ ಮಾಹಿತಿ ತಂತ್ರಜ್ಞಾನದ ಉಪಕ್ರಮಗಳಿಗಾಗಿ 04 ರಾಷ್ಟ್ರೀಯ ಬಿಸಿನೆಸ್ ಅವಾರ್ಡ್ ಫಾರ್ ಲೀಡರ್‌ಶಿಪ್ ಮತ್ತು ಎಕ್ಸಲೆನ್ಸಿ ಪ್ರಶಸ್ತಿ-2025 ದೊರೆತಿದೆ. ಯಾವೆಲ್ಲ ವರ್ಗಗಳಲ್ಲಿ ಈ ಅವಾರ್ಡ್ ದೊರೆತಿದೆ ಎಂಬ ವಿವರ ಇಲ್ಲಿದೆ.

ಈ ಸಾಧನೆಗಾಗಿ ಪ್ರಶಸ್ತಿಗಳು ಸಿಕ್ಕಿವೆ

* ತಂತ್ರಜ್ಞಾನದ ಅತ್ಯುತ್ತಮ ಬಳಕೆ

* ವರ್ಷದ ಅತ್ಯಂತ ನವೀನ ಕಂಪನಿ

* ವರ್ಷದ ಅತ್ಯಂತ ಗ್ರಾಹಕ ಸ್ನೇಹಿ ಕಂಪನಿ

* 'ಅತ್ಯುತ್ತಮ ಬ್ರಾಂಡ್ ಅಭಿವೃದ್ಧಿ'ಗಾಗಿ ಪ್ರಶಸ್ತಿಗಳು ಸಂಸ್ಥೆಗೆ ಸಂದಿವೆ.

ಈ ಪ್ರಶಸ್ತಿಗಳನ್ನು ಮುಂಬೈನ ಹೋಟಲ್ ಪಾರ್ಲೆ ಇಂಟರ್‌ನ್ಯಾಷನಲ್ ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಶ್ರೀಮತಿ ಮೋನಾಲಿ ಬಾಗುಲ್, ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಇ ನಿಜ್‌ಟಾಲ್ಕ್‌ ಅವರು ಸಂಸ್ಥೆಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಸಂಸ್ಥೆ ಪರವಾಗಿ ಉಪ ಉಗ್ರಾಣ ಮತ್ತು ಖರೀದಿ ನಿಯಂತ್ರಕರಾದ ರಾಧ ಎಲ್. ಗುಂಡಳ್ಳಿ, ಚಾಮರಾಜನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ಅವರು ಪ್ರಶಸ್ತಿಗಳನ್ನು ಸ್ವೀಕರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+