KSRTC Good News: ಬೆಂಗಳೂರಿನಿಂದ ಹೊರಡುವ ಈ ಮಾರ್ಗಗಳ ಬಸ್ ಪ್ರಯಾಣ ದರದಲ್ಲಿ ಭರ್ಜರಿ ರಿಯಾಯಿತಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ರಾಜ್ಯದ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಬೆಂಗಳೂರಿನಿಂದ ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರ ರಾಜ್ಯಗಳ ಮಹಾನಗರಗಳಿಗೆ ಸಂಚರಿಸುವ ವಿವಿಧ ಮಾರ್ಗಗಳ ಪ್ರತಿಷ್ಠಿತ ಬಸ್‌ಗಳ ದರದಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದೆ. ರಾಜಧಾನಿ ಬೆಂಗಳೂರಿನಿಂದ ತೆರಳುವ ಸಾರ್ವಜನಿಕರಿಗೆ ಒಂದಷ್ಟು ಟಿಕೆಟ್ ಹಣ ಉಳಿಯಲಿದೆ.
ರಾಜ್ಯದಲ್ಲಿ ಸಾರ್ವಜನಿಕರಿಗೆ ಕೆಎಸ್‌ಆರ್‌ಟಿಸಿ ಸಂಸ್ಥೆಯು ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಿದೆ. ಇಂದು ಜನವರಿ 05 ರಿಂದ ಜಾರಿಗೆ ಬರುವಂತೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮದ ವತಿಯಿಂದ ಆಯ್ದ ಮಾರ್ಗಗಳಲ್ಲಿ ಸಂಚರಿಸುವ ಪ್ರತಿಷ್ಠಿತ ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಮಾದರಿಯ ಬಸ್‌ಗಳ ಪ್ರಯಾಣ ದರದಲ್ಲಿ ರಿಯಾಯಿತಿ ಸಿಗಲಿದೆ. ದೂರದ ಸ್ಥಳಕ್ಕೆ ಪ್ರಯಾಣಿಸುವವರಿಗೆ ಈ ನಿರ್ಧಾರದಿಂದ ಹೆಚ್ಚಿನ ಅನುಕೂಲ ಆಗಲಿದೆ.

ಟಿಕೆಟ್ ದರದಲ್ಲಿ ಭರ್ಜರಿ ರಿಯಾಯಿತಿ
ಬೆಂಗಳೂರಿನಿಂದ ಹೊರಡುವ ಬೆಂಗಳೂರು-ಮಂಗಳೂರು, ಬೆಂಗಳೂರು-ಕುಂದಾಪುರ, ಬೆಂಗಳೂರು-ಉಡುಪಿ, ಬೆಂಗಳೂರು-ಧರ್ಮಸ್ಥಳ, ಬೆಂಗಳೂರು-ಕುಕ್ಕೆಸುಬ್ರಮಣ್ಯ, ಬೆಂಗಳೂರು-ಪುತ್ತೂರು, ಬೆಂಗಳೂರು-ಮಡಿಕೇರಿ/ವಿರಾಜಪೇಟೆ. ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ/ಸಾಗರ ಮಾರ್ಗಗಳ ಬಸ್‌ಗಳ ಟಿಕೆಟ್ ದರದಲ್ಲಿ ಶೇಕಡ 5 ರಿಂದ 15 ರವರೆಗೆ ರಿಯಾಯಿತಿ ನೀಡಲು ನಿಗಮ ನಿರ್ಧರಿಸಿದೆ.
ಅಂತರಾಜ್ಯ ಬಸ್ ಪ್ರಯಾಣ ದರದಲ್ಲಿ ರಿಯಾಯಿತಿ
ಇದರೊಂದಿಗೆ ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು-ತಿರುಪತಿ, ಬೆಂಗಳೂರು-ಮಂತ್ರಾಲಯ, ಬೆಂಗಳೂರು-ಪುಣೆ/ಮುಂಬೈ, ಬೆಂಗಳೂರು-ವಿಜಯವಾಡ, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ಮದುರೈ, ಬೆಂಗಳೂರು-ಕೋಯಿಮತ್ತೂರು, ಬೆಂಗಳೂರು-ತಿಶ್ರೂರು ಇನ್ನು ಕೆಲವು ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಎಸಿ ಸ್ಲೀಪರ್ ಮಾದರಿಯ ಬಸ್‌ಗಳ ಟಿಕೆಟ್ ದರದಲ್ಲಿ (ಶೇಕಡ 5 ರಿಂದ 15 ರಿಯಾಯಿತಿ) ಭರ್ಜರಿ ರಿಯಾಯಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ksrtc.in ಪಡೆಯಬಹುದಾಗಿದೆ.
ಬಸ್ ಪ್ರಯಾಣದ ಹೊಸ, ಹಳೆ ದರ
ಬೆಂಗಳೂರು-ಶಿರಡಿಗೆ ಮೊದಲು 2500 ರೂಪಾಯಿ ಇತ್ತು. ಈ ರಿಯಾಯಿತಿ ಅನ್ವಯವಾಗಿ ಸದ್ಯ ಅದೇ ಮಾರ್ಗದ ಪ್ರಯಾಣದ ದರವು 2000 ರೂಪಾಯಿಗೆ ಇಳಿಕೆ ಆಗಿದೆ. ಇದರಿಂದ ಒಬ್ಬ ಪ್ರಯಾಣಿಕರಿಗೆ ಒಂದು ಜರ್ನಿಯಲ್ಲಿ 500 ರೂಪಾಯಿ ಉಳಿತಾಯವಾಗಲಿದೆ. ಅದೇ ರೀತಿ ವಿವಿಧ ಮಾರ್ಗದ ಟಿಕೆಟ್ ದರ ಪಟ್ಟಿ ಮುಂದಿದೆ.
1.ಬೆಂಗಳೂರು-ಮುಂಬೈ ಬಸ್ ಟಿಕೆಟ್ ದರ: ಮೊದಲು 2500ರೂ., ಈಗ 2000 ರೂಪಾಯಿ
2. ಬೆಂಗಳೂರು- ಪುಣೆ ಬಸ್ ಟಿಕೆಟ್ ದರ: ಮೊದಲು 2300 ರೂ., ಈಗ 1700 ರೂಪಾಯಿ
3. ಬೆಂಗಳೂರು-ಮುರಡೇಶ್ವರ ಟಿಕೆಟ್ ದರ: ಅಂಬಾರಿ ಉತ್ಸವ ಕ್ರಮವಾಗಿ 1900 ರೂ. ಸದ್ಯ 1700 ರೂಪಾಯಿ, ಅಂಬಾರಿ ಡ್ರೀಮ್ ಬಸ್ 1800 ರೂ. ಈಗ 1500 ರೂಪಾಯಿ.
4. ಬೆಂಗಳೂರು-ಉಡುಪಿ/ಮಣಿಪಾಲ: ಅಂಬಾರಿ ಉತ್ಸವ ಬಸ್- ಮೊದಲು 1620 ರೂ, ಈಗ 1450ರೂ, ಅಂಬಾರಿ ಡ್ರೀಮ್ ಬಸ್ ಕ್ರಮವಾಗಿ 1560 ರೂ. 1300 ರೂ, ಐರಾವತ 2.0 ಬಸ್ 1440 ರೂ. ಈಗ 1260, ಐರಾವರ ಕ್ಲಬ್ ಕ್ಲಾಸ್ 1270 ರೂ. ಇದೀಗ 1060 ರೂಪಾಯಿ ಆಗಿದೆ.
5. ಬೆಂಗಳೂರು-ದಾವಣಗೆರೆ ಬಸ್ ಐರಾವತ ಬಸ್ ಟಿಕೆಟ್ ಬೆಲೆ ಮೊದಲು 740 ರೂ. ಈಗ 700 ರೂಪಾಯಿ
6.ಬೆಂಗಳೂರು ಏರ್‌ಪೋರ್ಟ್- ದಾವಣಗೆರೆ ಫ್ಲೈ ಬಸ್ ಪ್ರಯಾಣದ ದರ 1250 ರೂಪಾಯಿ ನಿಗದಿಪಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications