ಜ.10ರಂದು ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ

Posted By:
Subscribe to Oneindia Kannada

ಬೆಂಗಳೂರು, ಜನವರಿ 7 : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಜನವರಿ 10ರಂದು ಸಂಜೆ 6 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದೆ.

ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವೆ ಉಮಾಶ್ರೀ ಅವರು ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕ ಬಿಡುಗಡೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರು ನೆರವೇರಿಸಲಿದ್ದಾರೆ.

Karnataka Kalasri award winners, congratulations

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ. ದಯಾನಂದ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಅವರು ವಹಿಸಲಿದ್ದಾರೆ.

2016-17ನೇ ಸಾಲಿನ ಪ್ರಶಸ್ತಿ ಪುರಸ್ಕೃತರು

ಧಾರವಾಡದ ಪಂಡಿತ್ ರವೀಂದ್ರ ಯಾವಗಲ್ ಅವರು ಹಿಂದೂಸ್ಥಾನಿ ಸಂಗೀತ (ತಬಲ) ಹಾಗೂ ಕಾಸರಗೋಡುನ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ ಅವರಿಗೆ (ಗಮಕ) ಗೌರವ ಪ್ರಶಸ್ತಿ ಲಭಿಸಿದೆ.

ಈ ಸಾಲಿನ ವಿವಿಧ ಪ್ರಕಾರಗಳ ವಾರ್ಷಿಕ ಪ್ರಶಸ್ತಿ ಪಡೆದವರು

ಹೊನ್ನಾವರದ ಪರಮೇಶ್ವರ ಹೆಗಡೆ - ಹಿಂದೂಸ್ತಾನಿ ಗಾಯನ
ಬೆಂಗಳೂರಿನ ಬಿ.ಎನ್. ಸುಕುಮಾರ್ ಬಾಬು - ಸುಗಮ ಸಂಗೀತ -ಲಯವಾದ್ಯ
ಬೆಳಗಾವಿಯ ಜಿ.ಎ. ಕುಲಕರ್ಣಿ - ತಬಲಾ
ಗದಗದ ವೀರೇಶ್ ಕಿತ್ತೂರ - ಸುಗಮ ಸಂಗೀತ ಹಾಗೂ ಸುರಪುರದ ಆಮಯ್ಯ ಎಲ್ ಮಠ - ಸುಗಮ ಸಂಗೀತ
ಬೆಳಗಾವಿಯ ಭಾರತಿ ಎಂ.ಭಟ್ - ಗಮಕ ಹಾಗೂ ಮಂಡ್ಯದ ಶೈಲಜಾ ಚಂದ್ರಶೇಖರ್ - ಗಮಕ
ಬೀದರ್‍ನ ರಾಮುಲು ಗಾದಗಿ - ಹಿಂದೂಸ್ತಾನಿ ಸಂಗೀತ
ತುಮಕೂರಿನ ಎಸ್.ಕೆ. ಹನುಮಂತದಾಸ್ - ಕಥಾಕೀರ್ತನ
ಮೈಸೂರಿನ ಸಿ.ಎಸ್. ನಾಗರತ್ನಮ್ಮ - ಪಿಟೀಲು - ಕರ್ನಾಟಕ ಸಂಗೀತ
ಬೆಂಗಳೂರಿನ ಸತ್ಯನಾರಾಯಣರಾಜು - ಭರತನಾಟ್ಯ
ಕೋಲಾರದ ಎಸ್. ಸೂರ್ಯನಾರಾಯಣಾಚಾರ್ - ಮೃದಂಗ - ಕರ್ನಾಟಕ ಸಂಗೀತ
ಬಳ್ಳಾರಿಯ ಎಂ. ಗುರುರಾಜ್ - ಮೋರ್ಚಿಂಗ್ - ಕರ್ನಾಟಕ ಸಂಗೀತ
ಬೆಂಗಳೂರಿನ ಡಾ. ಕೆ. ವರದರಂಗನ್ - ಗಾಯನ ಕರ್ನಾಟಕ ಸಂಗೀತ
ಮೈಸೂರಿನ ಡಾ. ಶೀಲಾ ಶ್ರೀಧರ್ - ಭರತನಾಟ್ಯ
ಬೆಂಗಳೂರಿನ ಪೂರ್ಣಿಮಾ ಅಶೋಕ್ - ಭರತನಾಟ್ಯ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government has announced awards to artists in various art categories. The award function will be held on 10th January at Ravindra Kalakshetra. Kannada and Culture minister Umashree will preside over and present the awards.
Please Wait while comments are loading...