ಕರ್ನಾಟಕ ವಿಧಾನಸಭೆಯಲ್ಲಿ ನಂಬರ್ ಗೇಮ್, ಬಲಾಬಲ ಎಷ್ಟಿದೆ?

ಬೆಂಗಳೂರು, ಜುಲೈ 07: ಕರ್ನಾಟಕದಲ್ಲಿ ಶಾಸಕರ ಸರಣಿ ರಾಜೀನಾಮೆಯಿಂದಾಗಿ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ಇದರ ಕ್ಲೈಮ್ಯಾಕ್ಸ್ ಮುಂಬರುವ ಬಜೆಟ್ ಅಧಿವೇಶನದಲ್ಲಿ ಕಾಣಬಹುದಾಗಿದೆ.

ಕರ್ನಾಟಕದ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ಜೆಡಿಎಸ್ -ಕಾಂಗ್ರೆಸ್ ಪಕ್ಷದ ವಿರುದ್ಧ ಯಡಿಯೂರಪ್ಪ ಅವರು ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ನಿರೀಕ್ಷೆಯಿದೆ. ಈ ಹಿಂದೆ ಕೂಡಾ ಇದೇ ರೀತಿ ಪ್ರಯತ್ನ ಪಟ್ಟು ವಿಫಲರಾಗಿದ್ದರು.

ಶಾಸಕರ ರಾಜೀನಾಮೆ, ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾದರೆ ಏನು ಮಾಡಬೇಕು ಎಂಬೆಲ್ಲ ತಲೆನೋವನ್ನು ಸ್ಪೀಕರ್ ರಮೇಶ್ ಕುಮಾರ್ ನಿಭಾಯಿಸುತ್ತಿದ್ದಾರೆ

Karnataka: How the numbers stand and why it is losing battle for Cong-JD(S)

ಇಬ್ಬರು ಅಲ್ಲ 20 ಶಾಸಕರು ರಾಜೀನಾಮೆ ಸಲ್ಲಿಸಿದರೂ ಖುದ್ದು, ರಮೇಶ್ ಕುಮಾರ್ ಎದುರು ಹಾಜರಾಗಬೇಕು. ರಾಜೀನಾಮೆ ಅಂಗೀಕರಿಸುವುದು ಬಿಡುವುದು, ಯಾವಾಗ ಅಂಗೀಕರಿಸಬೇಕು ಎಂಬುದು ಸ್ಪೀಕರ್ ಆಯ್ಕೆಗೆ ಬಿಟ್ಟಿದ್ದು, ಇದನ್ನು ಶಾಸಕರು ಪ್ರಶ್ನಿಸುವಂತಿಲ್ಲ. ಈ ನಡುವೆ ಸದನದಲ್ಲಿ ಸದಸ್ಯರ ಬಲಾಬಲ ಬಗ್ಗೆ ಚಿತ್ರಣ ಇಲ್ಲಿದೆ...

ರಾಜೀನಾಮೆಗೂ ಮುನ್ನ(ಜುಲೈ 05)
ಒಟ್ಟು ಸದಸ್ಯ ಬಲ : 224
ಕಾಂಗ್ರೆಸ್ + ಜೆಡಿಎಸ್ : 118
ಮ್ಯಾಜಿಕ್ ನಂಬರ್ : 113
ಬಿಜೆಪಿ : 105
ಬಿಎಸ್ ಪಿ: 1
ಕಾಂಗ್ರೆಸ್ : 79
ಜೆಡಿಎಸ್ : 37
ಪಕ್ಷೇತರ : 2

ಜುಲೈ 06ರಂದು ಸರಣಿ ರಾಜೀನಾಮೆ ಬಳಿಕ
ಒಟ್ಟು ಸದಸ್ಯ ಬಲ : 211
ಕಾಂಗ್ರೆಸ್ + ಜೆಡಿಎಸ್ : 105
ಮ್ಯಾಜಿಕ್ ನಂಬರ್ : 106
ಬಿಜೆಪಿ : 105
ಬಿಎಸ್ ಪಿ: 1
ಕಾಂಗ್ರೆಸ್ : 69
ಜೆಡಿಎಸ್ : 34
ಪಕ್ಷೇತರ : 2

ಸದ್ಯ ಕಾಂಗ್ರೆಸ್ 69 ಸ್ಥಾನ ಹೊಂದಿದ್ದು, ಪೈಕಿ ರೋಷನ್ ಬೇಗ್ ಅಮಾನತುಗೊಂಡಿದ್ದು, ಕಾಂಗ್ರೆಸ್ ಶಾಸಕರ ಸಂಖ್ಯೆ 68 ಆಗಿದೆ. ಜೆಡಿಎಸ್ 34 ಹಾಗೂ ಬಿಎಸ್ ಪಿ 1 ಹೊಂದಿದೆ. ಮೈತ್ರಿ ಸರ್ಕಾರ 105 ಸ್ಥಾನ ಹೊಂದಿದ್ದು, ಮ್ಯಾಜಿಕ್ ನಂಬರ್ 112. ಬಿಜೆಪಿ 105 ಸ್ಥಾನ ಹೊಂದಿದ್ದು, ಕೆಪಿಜೆಪಿ 1, ಪಕ್ಷೇತರ 1 ಇಬ್ಬರು ಈಗ ಸರ್ಕಾರದ ಭಾಗವಾಗಿದ್ದಾರೆ. ಹೀಗಾಗಿ, ಸರ್ಕಾರ ಬೀಳಿಸಬೇಕಾದರೆ ಕನಿಷ್ಠ 14 ಶಾಸಕರನ್ನು ತನ್ನತ್ತ ಸೆಳೆದುಕೊಳ್ಳಬೇಕು. ನಂತರ ನಡೆಯುವ ಉಪ ಚುನಾವಣೆಯಲ್ಲಿ ಕನಿಷ್ಠ 8-10 ಸ್ಥಾನ ಗೆಲ್ಲಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+