HSRP Number Plate: ವಾಹನ ಮಾಲೀಕರಿಗೆ ಬಿಗ್ ಅಪ್‌ಡೇಟ್ ಕೊಟ್ಟಿದೆ ಹೈಕೋರ್ಟ್ ಆದೇಶ!
ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬಗ್ಗೆ ಈಗಾಗಲೇ ಮಹತ್ವದ ಆದೇಶ ಹೊರಡಿಸಿದೆ. ಆದೇಶವು ಹೇಳುವಂತೆ ಕರ್ನಾಟಕದಲ್ಲಿ 2019 ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಾಯಿಸಿದ ದ್ವಿಚಕ್ರ, ತ್ರಿಚಕ್ರ, ಲಘು ವಾಹನಗಳು, ಪ್ರಯಾಣಿಕ ಕಾರು, ಮಧ್ಯಮ, ಭಾರಿ ವಾಣಿಜ್ಯ ವಾಹನ, ಟ್ರೈಲರ್ & ಟ್ರ್ಯಾಕ್ಟರ್‌ಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಕಡ್ಡಾಯ ಎನ್ನಲಾಗಿತ್ತು. ಇದೀಗ ಈ ಆದೇಶದ ಬಗ್ಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ ಹೊರಬಿದ್ದಿದೆ.
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ನವೆಂಬರ್ 17ರ ಡೆಡ್‌ಲೈನ್ ನೀಡಿದೆ ರಾಜ್ಯ ಸಾರಿಗೆ & ರಸ್ತೆ ಸುರಕ್ಷತಾ ಇಲಾಖೆ. ನವೆಂಬರ್ 17ರ ಗಡುವಿನ ಒಳಗಾಗಿ ಅರ್ಜಿಗಳನ್ನ ಸಲ್ಲಿಸಲು ಸೂಚಿಸಲಾಗಿದ್ದು, ಶುಲ್ಕ ಪಾವತಿಸಿದ ಪ್ರಕರಣಗಳಲ್ಲಿಎಚ್‌ಎಸ್‌ಆರ್‌ಪಿ ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನದವರೆಗೆ ಎಚ್‌ಎಸ್‌ಆರ್‌ಪಿ ಬಿಲ್ ಇದ್ದರೆ ದಂಡ ವಿಧಿಸುವುದಿಲ್ಲ ಅಂತಾ ಹೇಳಲಾಗಿತ್ತು. ಆದರೆ ನವೆಂಬರ್ 17ರ ಗಡುವಿನ ಒಳಗಾಗಿ ಅರ್ಜಿ ಸಲ್ಲಿಸದೆ ಇದ್ದರೆ ವಾಹನ ಮಾಲೀಕರಿಗೆ ದಂಡ ಗ್ಯಾರಂಟಿ ಎನ್ನಲಾಗಿತ್ತು.

ಹೀಗಾಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯ ಆದೇಶಕ್ಕೆ ತಡೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈಗ ಅರ್ಜಿಯ ಬಗ್ಗೆ ಆದೇಶ ಹೊರಬಿದ್ದಿದೆ. ಹಾಗಾದರೆ ಅರ್ಜಿಯ ವಿಚಾರಣೆ ನಡೆಸಿ ಹೈಕೋರ್ಟ್ ಹೇಳಿದ್ದೇನು? ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯ ಮಾಡಿರುವ ಆದೇಶಕ್ಕೆ ತಡೆ ಬಿದ್ದಿದೆಯಾ? ಅಥವಾ ಈ ಆದೇಶವನ್ನ ವಾಹನ ಮಾಲೀಕರು ಪಾಲಿಸಲೇಬೇಕಾ? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.
ವಾಹನ ಮಾಲೀಕರೆ ಅಲರ್ಟ್.. ಅಲರ್ಟ್..
ಹೌದು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ಇದೀಗ ನಿರಾಕರಿಸಿದೆ. ಇದರ ಜೊತೆ ಸರ್ಕಾರಕ್ಕೂ ಖಡಕ್ ಸೂಚನೆ ನೀಡಿದ ಹೈಕೋರ್ಟ್, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಉತ್ಪಾದಕರನ್ನು ಅಂತಿಮಗೊಳಿಸಲು ಕಾಲಮಿತಿ ನಿಗದಿ ಪಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇನ್ನು ಭಾರತೀಯ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಉತ್ಪಾದಕರ ಒಕ್ಕೂಟ ಸೇರಿ ಕೆಲ ಸಂಸ್ಥೆಗಳು, ಈ ಆದೇಶಕ್ಕೆ ತಡೆ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಆದರೆ ಹೈಕೋರ್ಟ್ ತಡೆ ನೀಡಲು ನಿರಾಕರಿಸಿದೆ.

ಉತ್ಪಾದಕರ ಬಗ್ಗೆ ಸರ್ಕಾರಕ್ಕೆ ಹೇಳಿದ್ದೇನು?
ಇನ್ನು ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಏಕ ಸದಸ್ಯ ಪೀಠ, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳ ಕಡ್ಡಾಯ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ಹಾಗೇ, ಮತ್ತೊಂದು ಕಡೆ ವಾಹನ ಉತ್ಪಾದಕರು ಪ್ರತಿಯೊಂದು ಲೈಸೆನ್ಸ್ ಪ್ಲೇಟ್ ಉತ್ಪಾದಕರಿಗೆ ಟೈಪ್ ಅಪ್ರೋವಲ್ ಸರ್ಟಿಫಿಕೇಟ್ (ಟಿಎಸಿ) ಪಡೆದುಕೊಳ್ಳಲು ಅಂತಿಮ ಪ್ರಕ್ರಿಯೆ ಕೈಗೊಳ್ಳಬಹುದು ಎಂದು ತಿಳಿಸಿದೆ. ಇದರ ಜೊತೆಗೆ ರಾಜ್ಯ ಸರ್ಕಾರ ಕಾಲಮಿತಿಯ ಒಳಗೆ ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (ಸಿಆರ್‌ಆರ್‌ಐ) ವಿತರಿಸಿದ ಟೈಪ್ ಅಪ್ರೋವಲ್ ಸರ್ಟಿಫಿಕೇಟ್ (ಟಿಎಸಿ) ಹೊಂದಿದ ಲೈಸೆನ್ಸ್ ಪಡೆದ ಪ್ಲೇಟ್ ಉತ್ಪಾದಕರಿಗೆ ಅನುಮೋದನೆ ನೀಡುವ ಬಗ್ಗೆ ಪ್ರಕ್ರಿಯೆ ನಡೆಸಬಹುದು ಎಂದು ಇದೇ ವೇಳೆ ಆದೇಶಿಸಿದೆ.
ಇದರ ಜೊತೆ ರಾಜ್ಯ ಸರ್ಕಾರ ಇನ್ನೂ ಯಾವುದೇ ಪರವಾನಗಿ ಹೊಂದಿದ ಪ್ಲೇಟ್ ತಯಾರಕರಿಗೆ ಎಚ್‌ಎಸ್‌ಆರ್‌ಪಿಗಳನ್ನು ಪೂರೈಸಲು ಅನುಮೋದನೆ ನೀಡಿಲ್ಲ. ಹಾಗೇ ಮೋಟಾರು ವಾಹನ ನಿಯಮ 50(1)(ವಿ)ಯಲ್ಲಿ ವಿವರಿಸುವಂತೆ ವಾಹನ ಉತ್ಪಾದಕರ ಮೂಲಕ HSRP ನಂಬರ್ ಪ್ಲೇಟ್ ಪಡೆಯಬೇಕೆಂಬ ಆದೇಶವನ್ನೂ ಹೊರಡಿಸಿಲ್ಲ. ಹೀಗಾಗಿ ಅನುಕೂಲ ಸಮತೋಲನ ಸಾಧಿಸಲು ಯಾವ ಪೂರ್ವಾಗ್ರಹಕ್ಕೂ ಒಳಗಾಗದೆ ಎಲ್ಲ ನೋಂದಣಿ ಫಲಕ ಉತ್ಪಾದಕರಿಗೆ ಒಪ್ಪಿಗೆ ನೀಡುವ ಸಂಬಂಧ ಪ್ರಕ್ರಿಯೆ ಪ್ರಕಟಿಸಲಿ ಎಂದಿದೆ ಹೈಕೋರ್ಟ್.
ಒಟ್ಟಾರೆ HSRP ನಂಬರ್ ಪ್ಲೇಟ್ ಕಡ್ಡಾಯ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ಇದೀಗ ನಿರಾಕರಿಸಿರುವುದು ರಾಜ್ಯದ ವಾಹನ ಮಾಲೀಕರಿಗೆ ಅಲರ್ಟ್ ಮಾಡಿದಂತಿದೆ. ಈ ಹಿನ್ನೆಲೆ ನವೆಂಬರ್ 17ರ ಗಡುವಿನ ಒಳಗಾಗಿ ಅರ್ಜಿ ಸಲ್ಲಿಸದೆ ಇದ್ದರೆ ವಾಹನ ಮಾಲೀಕರಿಗೆ ದಂಡ ಗ್ಯಾರಂಟಿ. ಈ ಕಾರಣಕ್ಕೆ ಆದಷ್ಟು ಬೇಗ ಅರ್ಜಿ ಸಲ್ಲಿಸಲು ರಾಜ್ಯದ ವಾಹನ ಮಾಲೀಕರು ಮುಂದಾಗಬೇಕು. ಇಲ್ಲವಾದರೆ ದಂಡ ಬೀಳೋದು ಪಕ್ಕಾ.












Click it and Unblock the Notifications