ಶಾಲೆಗಳಲ್ಲಿ ನೀರಿನ ಬೆಲ್; ಸರ್ಕಾರದ ಅಧಿಕೃತ ಆದೇಶ
ಬೆಂಗಳೂರು, ಡಿಸೆಂಬರ್ 23 : ಕರ್ನಾಟಕದ ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಿ ನೀರಿನ ವಿರಾಮ ಕೊಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೇರಳದಲ್ಲಿದ್ದ ಈ ನಿಯಮ ಕರ್ನಾಟಕದಲ್ಲಿಯೂ ಇನ್ನು ಮುಂದೆ ಜಾರಿಗೆ ಬರುತ್ತಿದೆ.
ಎಲ್ಲಾ ಶಾಲೆಗಳಲ್ಲೂ ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಕಡ್ಡಾಯವಾಗಿ ನೀರಿನ ವಿರಾಮ (Water Bell) ನೀಡಲಾಗುತ್ತದೆ. ಸರ್ಕಾರದ ಆದೇಶದ ಪ್ರಕಾರ 10 ನಿಮಿಷಗಳ ಕಾಲ ವಿರಾಮ ಪಡೆಯಲಿದ್ದಾರೆ.
ಸರ್ಕಾರದ ಆದೇಶ ಪ್ರತಿ ಜಿಲ್ಲೆಗೂ ರವಾನೆಯಾಗಲಿದೆ. ಶಾಲೆಗಳಲ್ಲಿ ಬೆಳಗಿನ ಎರಡು ಮತ್ತು ಮೂರನೇ ತರಗತಿಗಳ ನಡುವೆ ನೀರು ಕುಡಿಯಲು ಅವಕಾಶ ನೀಡಲಾಗುತ್ತದೆ. ಕಡಿಮೆ ನೀರಿನ ಸೇವನೆ, ನೀರಿನ ಕೊರತೆಯ ಮಕ್ಕಳಲ್ಲಿ ಬರಬಹುದಾದ ಆರೋಗ್ಯದ ಸಮಸ್ಯೆಗಳನ್ನು ತಡೆಗಟ್ಟಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಕೇರಳ ರಾಜ್ಯದಲ್ಲಿ ವಾಟರ್ ಬೆಲ್ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಈ ವ್ಯವಸ್ಥೆ ಜಾರಿಗೆ ಬರಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಾಟರ್ ಬೆಲ್ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದರು.
ಇದು ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ ಹೆಜ್ಜೆ.
— S.Suresh Kumar, Minister - Govt of Karnataka (@nimmasuresh) November 12, 2019
ನಮ್ಮ ರಾಜ್ಯದ ಶಾಲೆಗಳಲ್ಲಿಯೂ ಇದನ್ನು ಅನುಷ್ಟಾನ ಗೊಳಿಸುವ ಕುರಿತು ಯೋಚಿಸಿ ಕಾರ್ಯಕ್ರಮ ರೂಪಿಸಬೇಕೆಂದು ನಮ್ಮ ಶಿಕ್ಷಣ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. pic.twitter.com/zvbm5G41s4












Click it and Unblock the Notifications