ಕರ್ನಾಟಕ : 2021ರ ಸಾಲಿನ ಹಬ್ಬ, ಸಾರ್ವಜನಿಕ ರಜಾದಿನಗಳ ಪಟ್ಟಿ ಬಿಡುಗಡೆ
ಬೆಂಗಳೂರು, ನ 5: 2021ರ ಸಾಲಿನ ಹಬ್ಬ, ಸಾರ್ವಜನಿಕ ರಜಾದಿನ, ರಾಷ್ಟ್ರೀಯ ಹಬ್ಬಗಳ ಪಟ್ಟಿಯನ್ನು ರಾಜ್ಯ ಕಾರ್ಮಿಕ ಇಲಾಖೆ ಬಿಡುಗಡೆ ಮಾಡಿದೆ. ಕರ್ನಾಟಕ ಇಂಡಸ್ಟ್ರಿಯಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ 1963ರ ಪ್ರಕಾರ, ವಾರ್ಷಿಕ ಕನಿಷ್ಠ ಹತ್ತುದಿನ ರಜೆಯನ್ನು ಎಲ್ಲಾ ಸಂಸ್ಥೆಗಳು ನೀಡಬೇಕಿದೆ.
ಈ ಹತ್ತು ದಿನಗಳಲ್ಲಿ ಗಣರಾಜ್ಯೋತ್ಸವ, ಕಾರ್ಮಿಕರ ದಿನ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವದ ದಿನದಂದು ಕಡ್ಡಾಯವಾಗಿ ರಜೆಯನ್ನು ನೀಡಲು ಸೂಚಿಸಲಾಗಿದೆ. 2021ರ ರಜಾದಿನಗಳ ಪಟ್ಟಿ ಹೀಗಿದೆ:

| ಕ್ರ. ಸಂಖ್ಯೆ | ದಿನಾಂಕ | ದಿನ | ಹಬ್ಬ |
|---|---|---|---|
| 1 | ಜನವರಿ 14 | ಗುರುವಾರ | ಮಕರ ಸಂಕ್ರಾಂತಿ |
| 2 | ಜನವರಿ 26 | ಮಂಗಳವಾರ | ಗಣರಾಜ್ಯೋತ್ಸವ |
| 3 | ಮಾರ್ಚ್ 11 | ಗುರುವಾರ | ಮಹಾಶಿವರಾತ್ರಿ |
| 4 | ಏಪ್ರಿಲ್ 2 | ಶುಕ್ರವಾರ | ಗುಡ್ ಫ್ರೈಡೇ |
| 5 | ಏಪ್ರಿಲ್ 13 | ಮಂಗಳವಾರ | ಚಾಂದ್ರಮಾನ ಯುಗಾದಿ |
| 6 | ಏಪ್ರಿಲ್ 14 | ಬುಧವಾರ | ಡಾ.ಅಂಬೇಡ್ಕರ್ ಜಯಂತಿ |
| 7 | ಏಪ್ರಿಲ್ 25 | ಭಾನುವಾರ | ಮಹಾವೀರ ಜಯಂತಿ |
| 8 | ಮೇ 1 | ಶನಿವಾರ | ಕಾರ್ಮಿಕರ ದಿನಾಚರಣೆ |
| 9 | ಮೇ 14 | ಶುಕ್ರವಾರ | ರಂಜಾನ್, ಬಸವ ಜಯಂತಿ |
| 10 | ಜುಲೈ 21 | ಬುಧವಾರ | ಬಕ್ರೀದ್ |
| 11 | ಆಗಸ್ಟ್ 15 | ಭಾನುವಾರ | ಸ್ವಾತಂತ್ರ್ಯ ದಿನಾಚರಣೆ |
| 12 | ಆಗಸ್ಟ್ 19 | ಗುರುವಾರ | ಮೊಹರಂ |
| 13 | ಆಗಸ್ಟ್ 20 | ಶುಕ್ರವಾರ | ವರಮಹಾಲಕ್ಷ್ಮೀ ವೃತ |
| 14 | ಸೆಪ್ಟಂಬರ್ 10 | ಶುಕ್ರವಾರ | ಗಣೇಶ ಚತುರ್ಥಿ |
| 15 | ಅಕ್ಟೋಬರ್ 2 | ಶನಿವಾರ | ಗಾಂಧಿ ಜಯಂತಿ |
| 16 | ಅಕ್ಟೋಬರ್ 6 | ಬುಧವಾರ | ಮಹಾಲಯ ಅಮಾವಾಸ್ಯ |
| 17 | ಅಕ್ಟೋಬರ್ 14 | ಗುರುವಾರ | ಆಯುಧಪೂಜೆ |
| 18 | ಅಕ್ಟೋಬರ್ 15 | ಶುಕ್ರವಾರ | ವಿಜಯದಶಮಿ |
| 19 | ಅಕ್ಟೋಬರ್ 19 | ಮಂಗಳವಾರ | ಈದ್ ಮಿಲಾದ್ |
| 20 | ಅಕ್ಟೋಬರ್ 20 | ಬುಧವಾರ | ವಾಲ್ಮೀಕಿ ಜಯಂತಿ |
| 21 | ನವೆಂಬರ್ 1 | ಸೋಮವಾರ | ಕನ್ನಡ ರಾಜ್ಯೋತ್ಸವ |
| 22 | ನವೆಂಬರ್ 3 | ಬುಧವಾರ | ನರಕ ಚತುರ್ದಶಿ |
| 23 | ನವೆಂಬರ್ 5 | ಶುಕ್ರವಾರ | ಬಲಿಪಾಡ್ಯಮಿ |
| 24 | ನವೆಂಬರ್ 22 | ಸೋಮವಾರ | ಕನಕದಾಸ ಜಯಂತಿ |
| 25 | ಡಿಸೆಂಬರ್ 25 | ಶನಿವಾರ | ಕ್ರಿಸ್ಮಸ್ |












Click it and Unblock the Notifications