ಆರ್‌ಸಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್‌ನಲ್ಲಿ ಮಹತ್ವದ ಬದಲಾವಣೆ, ಏನದು?
ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇಲ್ಲಿವರೆಗೆ ಇದ್ದ ಡ್ರೈವಿಂಗ್ ಲೈಸೆನ್ಸ್ (DL) ಹಾಗೂ ವಾಹನ ನೋಂದಣಿ ಪ್ರಮಾಣ ಪತ್ರಕ್ಕೆ (RC) ಗುಡ್‌ಬೈ ಹೇಳಲು ಸರ್ಕಾರ ಮುಂದಾಗಿದ್ದು, ಹೊಸ ವರ್ಷದಿಂದಲೇ ಈ ಹೊಸ ನಿಯಮ ಜಾರಿಯಾಗಲಿದೆ ಎಂದು ಹೇಳಲಾಗಿದೆ.
ಇನ್ನು ಮುಂದೆ ಸ್ಮಾರ್ಟ್ ಡಿಲ್ ಹಾಗೂ ಆರ್‌ಸಿ ಕಾರ್ಡ್ ವಿತರಿಸುವ ವ್ಯವಸ್ಥೆಯು ಮುಂದಿನ ಜನವರಿಯಿಂದ ರಾಜ್ಯದೆಲ್ಲೆಡೆ ಅನುಷ್ಠಾನಗೊಳಿಸುವ ಮಹತ್ವದ ಬದಲಾವಣೆ ತರಲು ಸರ್ಕಾರ ಮುಂದಾಗಿದೆ. ಈ ಸ್ಮಾರ್ಟ್ ಕಾರ್ಡ್ (smart card) ರೂಪದಲ್ಲಿ ಡಿಎಲ್ ಹಾಗೂ ಆರ್‌ಸಿ ವಿತರಣೆಯಾಗಲಿದ್ದು, ಇದರಲ್ಲಿ ಕ್ಯೂಆರ್ ಕೋಡ್ ಮತ್ತು ಚಿಪ್ ಕೂಡ ಇರಲಿದೆಯಂತೆ.

ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು 2019ರಲ್ಲಿ ಒಂದು ದೇಶ ಒಂದು ಕಾರ್ಡ್ ವ್ಯವಸ್ಥೆ ಜಾರಿ ಮಾಡುವಂತೆ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿತ್ತು. ಹಾಗಾಗಿ ಈಗಾಗಲೇ ಈ ಯೋಜನೆಯಡಿ ಛತ್ತೀಸಗಢ, ಹಿಮಾಚಲ ಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ.
ಆದರೆ ಕರ್ನಾಟಕದಲ್ಲಿ ಡಿಎಲ್, ಆರ್‌ಸಿ ಕಾರ್ಡ್ ವಿತರಣೆಗೆ ನೀಡಿದ್ದ ಗುತ್ತಿಗೆ ಅವಧಿಯು ಮುಂದಿನ ಫೆಬ್ರವರಿವರೆಗೆ ಇರುವುದರಿಂದ ಆ ಬಳಿಕ ಈ ಹೊಸ ಯೋಜನೆ ಅನುಷ್ಠಾನಗೊಳಿಸಲು ಸಾರಿಗೆ ಇಲಾಖೆ ಮುಂದಾಗಿತ್ತು. ಸದ್ಯ ಟೆಂಡರ್ ಅವಧಿ ಮುಗಿಯುತ್ತಿರುವುದರಿಂದ ಡಿಎಲ್, ಆರ್‌ಸಿ ಕಾರ್ಡ್‌ನ್ನು ಸ್ಮಾರ್ಟ್‌ಕಾರ್ಡ್ ರೂಪದಲ್ಲಿ ನೀಡಲು ಟೆಂಡರ್ ಕರೆಯಲಾಗಿದೆ. ಇನ್ನೆರಡು ವಾರಗಳಲ್ಲಿ ಇದು ಮುಗಿಯಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಈಗಿರುವ ಕಾರ್ಡ್‌ನಲ್ಲಿ ಕೇವಲ ಚಿಪ್ ಮಾತ್ರ ಇತ್ತು. ಚಿಪ್‌ನಲ್ಲಿರುವ ಮಾಹಿತಿ ಪರಿಶೀಲಿಸಲು ಆರ್‌ಟಿಒ, ಪೊಲೀಸ್ ಠಾಣೆಗಳಿಗೆ ಹೋಗಬೇಕಾಗಿತ್ತು. ಈಗ ಹೊಸ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಸೌಲಭ್ಯ ಇರುವುದರಿಂದ ಪರದಾಟ ತಪ್ಪಲಿದೆ. ಸಂಪೂರ್ಣ ಮಾಹಿತಿಯು ಈ ಕಾರ್ಡ್‌ನಲ್ಲೇ ಲಭ್ಯವಾಗಲಿದೆ.

ಡ್ರೈವಿಂಗ್ ಲೈಸೆನ್ಸ್‌ನಲ್ಲಿ ಮಾಲೀಕರ ಹೆಸರು, ಫೋಟೋ, ಜನ್ಮದಿನಾಂಕ, ರಕ್ತದ ಗುಂಪು, ಕಾರ್ಡ್‌ನ ಅವಧಿ, ಮೊಬೈಲ್ ನಂಬರ್ ಸೇರಿದಂತೆ ಸಂಪೂರ್ಣ ವಿವರಗಳು ಇದರಲ್ಲೇ ಸಿಗಲಿದೆ. ಆರ್.ಸಿ ಕಾರ್ಡ್‌ನ ಮುಂದೆ ರಿಜಿಸ್ಟ್ರೇಷನ್ ನಂಬರ್, ನೋಂದಣಿ ದಿನಾಂಕ, ವಾಹನ ಚಾಸಿಸ್, ಇಂಜಿನ್ ನಂಬರ್, ವಾಹನ ಮಾಲೀಕರ ವಿಳಾಸ ಇರಲಿದೆ. ಹಿಂಬದಿಯಲ್ಲಿರುವ ಕ್ಯೂಆರ್ ಕೋಡ್‌ನೊಂದಿಗೆ ವಾಹನ ತಯಾರಕ ಕಂಪನಿ ಹೆಸರು, ಮಾಡಲ್ ನಂಬರ್, ಲೋನ್ ನೀಡಿರುವ ಸಂಸ್ಥೆಯ ಮಾಹಿತಿಯೂ ಸೇರಿದಂತೆ ಎಲ್ಲ ವಿವರ ಅದರಲ್ಲಿಯೇ ಲಭ್ಯವಾಗಲಿದೆ ಎಂದು ಹೇಳಲಾಗಿದೆ.
ಹಳೆಯ ಕಾರ್ಡ್ ಹೇಗಿದೆ?: ಸದ್ಯ ಇಲ್ಲಿವರೆಗೆ ನೀಡಲಾಗುತ್ತಿರುವ ಹಳೆಯ ಶೈಲಿಯ ಡ್ರೈವಿಂಗ್ ಲೈಸೆನ್ಸ್ ಹಾಗೂ ಆರ್.ಸಿ.ಕಾರ್ಡ್‌ಗಳು ಪಿವಿಸಿ ಮಾದರಿಯದ್ದು ಎನ್ನಲಾಗಿದೆ. ಕಾರ್ಡ್‌ನಲ್ಲಿ ಮುದ್ರೆಯಾಗುವ ಅಕ್ಷರಗಳು ಅಳಿಸಿ ಹೋಗುವ ಅಥವಾ ಮುರಿಯುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಆದರೆ, ಹೊಸ ಸ್ಮಾರ್ಟ್‌ಕಾರ್ಡ್ ಪಾಲಿ ಕಾರ್ಬೊನೇಟ್ ಮಾದರಿಯಲ್ಲಿರುವುದರಿಂದ ಅಕ್ಷರಗಳು ಅಳಿಸಿ ಹೋಗುವ ಚಿಂತೆಯೂ ಇರುವುದಿಲ್ಲ.
ಅಲ್ಲದೆ ಪ್ರತಿ ರಾಜ್ಯದಲ್ಲೂ ವಿಭಿನ್ನವಾದ ಡ್ರೈವಿಂಗ್ ಲೈಸೆನ್ಸ್ ನೀಡಲಾಗುತ್ತಿದ್ದು, ಇದು ತಪಾಸಣೆ ವೇಳೆ ಗೊಂದಲ ಉಂಟು ಮಾಡುತ್ತಿದ್ದವು. ಈಗ ಬರುವ ಸ್ಮಾರ್ಟ್‌ಕಾರ್ಡ್ ಡಿಲ್ ಇಡೀ ದೇಶದ ಉದ್ದಗಲಕ್ಕೂ ಎಲ್ಲ ರಾಜ್ಯಗಳಲ್ಲೂ ಒಂದೇ ಮಾದರಿಯಲ್ಲಿರಲಿವೆ. ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳಿಗೂ ಈ ಹೊಸ ನಿಯಮದಿಂದಾಗಿ ತಲೆನೋವು ತಪ್ಪಲಿದೆ ಎಂದು ಹೇಳಲಾಗಿದೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ












Click it and Unblock the Notifications