ಸಿದ್ದರಾಮಯ್ಯ ಅವರಿಂದ ಅಕಾಡೆಮಿಗಳಿಗೆ ಅಧ್ಯಕ್ಷರ ನೇಮಕ

Karnataka government appoints presidents to academies
ಬೆಂಗಳೂರು, ಫೆ.27: ಸುಮಾರು 13 ಅಕಾಡೆಮಿ-ಪ್ರಾಧಿಕಾರಗಳಿಗೆ ಅಧ್ಯಕ್ಷ ಹಾಗೂ ಸದಸ್ಯರನ್ನು ಮುಂದಿನ ಮೂರು ವರ್ಷದ ಅವಧಿಗೆ ನೇಮಿಸಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಬುಧವಾರ ಅದೇಶ ಹೊರಡಿಸಿದೆ.

ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಹೊಸದಾಗಿ ನೇಮಕಗೊಂಡ ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರ ಅವಧಿ ಮೂರು ವರ್ಷಗಳ ತನಕ ಇರಲಿದೆ ಅಥವಾ ಸರ್ಕಾರದಿಂದ ಮುಂದಿನ ಆದೇಶ ಬರುವ ತನಕ ಅವರು ಹುದ್ದೆಯಲ್ಲಿ ಮುಂದುವರೆಯಬಹುದಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಸಾಹಿತ್ಯ ಅಕಾಡೆಮಿಗೆ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಜಾನಪದ ಅಕಾಡೆಮಿಗೆ ಪಿಚ್ಚಳ್ಳಿ ಶ್ರೀನಿವಾಸ, ಶಿಲ್ಪಕಲಾ ಅಕಾಡೆಮಿಗೆ ಮಹಾದೇವಪ್ಪ ಶಂಭುಲಿಂಗಪ್ಪ, ಲಲಿತಾ ಕಲಾ ಅಕಾಡೆಮಿಗೆ ಡಾ.ಎಂ.ಎಸ್. ಮೂರ್ತಿ, ನಾಟಕ ಅಕಾಡೆಮಿಗೆ ಎಲ್.ಬಿ. ಶೇಖ್ ಮಾಸ್ತರ, ಸಂಗೀತ ಮತ್ತು ನೃತ್ಯ ಅಕಾಡೆಮಿಗೆ ಗಂಗಮ್ಮ ಕೇಶವಮೂರ್ತಿ, ಯಕ್ಷಗಾನ ಬಯಲಾಟ ಅಕಾಡೆಮಿಗೆ ನಾಡೋಜ ಬೆಳಗಲ್ ವೀರಣ್ಣ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಡಾ. ಕೆ.ವಿ. ನಾರಾಯಣ, ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಡಾ. ಬಂಜಗೆರೆ ಜಯಪ್ರಕಾಶ್, ಕೊಡವ ಸಾಹಿತ್ಯ ಅಕಾಡೆಮಿಗೆ ಪ್ರೊ. ಇಟ್ಟೀರ ಕೆ. ಬಿದ್ದಪ್ಪ, ತುಳು ಸಾಹಿತ್ಯ ಅಕಾಡೆಮಿಗೆ ಪ್ರೊ. ಜಾನಕಿ ಬ್ರಹ್ಮಾವರ, ಕೊಂಕಣಿ ಸಾಹಿತ್ಯ ಅಕಾಡೆಮಿಗೆ ರೊನಾಲ್ಡ್ ಎಸ್. ಕ್ಯಾಸ್ತಲಿನೊ, ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಬಿ.ಎ. ಮಹಮ್ಮದ್ ಹನೀಫ್ ಅವರು ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

* ಕರ್ನಾಟಕ ಸಾಹಿತ್ಯ ಅಕಾಡೆಮಿ: ಕೆ. ನೀಲಾ, ಧರಣೇಂದ್ರ ಕುರಿಕುರಿ, ಡಾ. ಎಸ್. ಕೆ. ಕೊಪ್ಪ, ಪ್ರೊ. ಶರಣಪ್ಪ, ಆರೀಫ್ ರಾಜ, ರೂಪ, ಡಾ.ಕುಂ.ಸಿ. ಉಮೇಶ್, ಬಿ.ಟಿ. ಜಾಹ್ನವಿ, ಸಂಗಮೇಶ್ ಕೋಟಿ, ಡಾ.ಸಿ.ಪಿ. ನಾಗರಗಾಜ್, ಡಾ. ಮೇಟಿ ಮುದಿಯಪ್ಪ, ಡಾ.ಕೆ.ಎಸ್. ಮಧುಸೂದನ, ಚಂದ್ರಶೇಖರ ತಾಳ್ಯ, ಶಿವಕುಮಾರ್ ನಾಗವಾರ, ಡಾ. ಮಹೇಶ್ ಹರವೆ.

* ಕರ್ನಾಟಕ ಜಾನಪದ ಅಕಾಡೆಮಿ: ಡಾ.ಕೆ.ಎಂ. ಮೇತ್ರಿ, ರಾಧಾಬಾಯಿ, ಶಹಜಹಾನ ಎಚ್. ಮುದಕವಿ, ಮುನಿವೆಂಕಟಪ್ಪ, ಗೋರವಾಲೆ ಚಂದ್ರಶೇಖರ್, ಶರಣಪ್ಪ ಗೋನಾಳ, ಎಸ್.ಕೆ. ಬಿರಾದಾರ್, ಡಾ.ಬಿ.ಎಚ್. ಆನಂದಪ್ಪ ಜೋಗಿ, ಎಸ್. ಯೋಗಲಿಂಗಂ, ಕುಮಾರಸ್ವಾಮಿ, ಸುನೀಲ, ಕೆ. ರಾಮು, ದೊಡ್ಡಬಸವೇಗೌಡ, ಮಡಿವಾಳಪ್ಪ ಮ. ಕರಡಿ, ಎನ್.ಎಂ. ಶ್ವೇತಾ.
* ಕರ್ನಾಟಕ ಶಿಲ್ಪಕಲಾ ಅಕಾಡೆಮಿ: ಎಲ್. ಶಿವಲಿಂಗಪ್ಪ, ಡಾ. ಗೀತಾಂಜಲಿ, ಟಿ.ಎಂ. ತೀರ್ಥಚಾರ್, ಸುರೇಂದ್ರ ಕೆ. ವಿಶ್ವಕರ್ಮ, ಮೌನೇಶ್ ಕೆ. ಶಿಲ್ಪಿ, ಚಿದಾನಂದ ವೀರಭದ್ರಪ್ಪ ಕಮ್ಮಾರ, ಮಂಜುನಾಥ ಕಂಚುಗಾರ, ಎಚ್.ಎನ್. ಕೃಷ್ಣಮೂರ್ತಿ, ಶಿಲ್ಪ ಷಣ್ಮುಖ ಪ್ರಸಾದ್, ವೈ. ಕುಮಾರ್.

* ಕರ್ನಾಟ ಲಲಿತಾಕಲಾ ಅಕಾಡೆಮಿ: ಬಿ.ಎಲ್. ಚವ್ಹಾಣ್, ಮಹಲಿಂಗಪ್ಪ, ಪ್ರಭು ಅರಸು, ಬಿ.ಕೆ. ಬಡಿಗೇರ, ವಿಶೇಶ್ವರಿ ತಿವಾರಿ, ದೇವಋಷಿ, ಸಿ. ಚಿಕ್ಕಣ್ಣ, ಕೃಷ್ಣ ದೇವಾಡಿಗ, ಟಿ.ಎಚ್. ಷಣ್ಮುಖಪ್ಪ, ಖಾಸಿಮ್ ಐ ಕನ್ಸಾವಿ, ಬಿ.ಎಚ್. ಶರಣಪ್ಪ, ವಾಜೀದ್ ಸಾಜಿದ್, ವೇದಮೂರ್ತಿ, ಬಾಗೂರು ಮಾರ್ಕಂಡಯ್ಯ, ಸಿ. ರಾಜಶೇಖರ್.
* ಕರ್ನಾಟಕ ನಾಟಕ ಅಕಾಡೆಮಿ: ಎನ್.ಕೆ. ರಾಮಕೃಷ್ಣ, ವಿ.ಎನ್. ಅಕ್ಕಿ, ಕಲ್ಪನಾ ನಾಗನಾಥ್, ವಿ. ರಾಮಚಂದ್ರಯ್ಯ, ಉಮೇಶ್ ಸಾಲಿಯಾನ, ಪಿ. ತಿಪ್ಪೇಸ್ವಾಮಿ, ಎಚ್. ಷಡಕ್ಷರಪ್ಪ, ಎಸ್.ಕೆ. ಕೊನೆಸಾಗರ, ಅನ್ನಪೂರ್ಣ ಸಾಗರ, ಎ. ವರಲಕ್ಷ್ಮಿ, ಹಾಲ್ಕುರ್ಕೆ ಶಿವಶಂಕರ್, ರಾಜಪ್ಪ ಕಿರಸಗೂರು, ಎಸ್.ಕೆ. ಗುಣಶೀಲನ್, ಮುದ್ದಣ್ಣ ರಟ್ಟೆಹಳ್ಳಿ, ಕೆ. ಜಗುಚಂದ್ರ.
* ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ: ಡಾ.ಆರ್.ಟಿ. ಪ್ರಭಾರಾವ್, ಸುಕನ್ಯ ಪ್ರಭಾಕರ್, ಮಂಜುಳಾ ಪರಮೇಶ್, ರಫೀಕ್ ಖಾನ್, ಅಂಬಯ್ಯ ನುಲಿ, ಪಂಡಿತ್ ರಾಜ್‌ಪ್ರಭು ದೋತ್ರೆ, ರಾಜೇಂದ್ರಸಿಂಗ್ ಪವಾರ್, ಶಶಿಕಲಾ ಗುರವ್ವ ಕುಲಹಳ್ಳಿ, ಎ. ಅಶೋಕ್‌ಕುಮಾರ್, ಹೇಮಾ ದಿನೇಶ್ ವಾಘಮೊರೆ, ವಾನರಾಸಿ ಬಾಲಕೃಷ್ಣ ಭಾಗವತರ್, ಕಿಕ್ಕೇರಿ ಕೃಷ್ಣಮೂರ್ತಿ, ವಡವಾಟಿ ಶಾರದಾ ಭರತ್, ಬಸವರಾಜ್ ಬಂಟನೂರು, ಅನನ್ಯ ಭಾರ್ಗವ.
* ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ: ಡಾ. ಕಬ್ಬಿನಾತಿ ವಸಂತ ಭಾರದ್ವಾಜ್, ಡಾ. ವಿಜಯಾನಳಿನಿ ರಮೇಶ್, ಕೆಂಪವ್ವ ಹರಿಜನ, ಹಸನಸಾಬ ಮೌಲಸಾಬ್ ನದಾಫ, ಅಂಬಾತನಯ ಮುದ್ರಾಡಿ, ಬಿ. ಗಣಪತಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ದತ್ತಾತ್ರೇಯ ಅರಳಿಕಟ್ಟೆ, ಕೆ.ಎಂ. ಶೇಖರ್, ಪಿ. ಕಿಶನ್ ಹೆಗಡೆ.
* ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಡಾ. ಓ.ಎಲ್. ನಾಗಭೂಷಣಸ್ವಾಮಿ, ಡಾ. ನಟರಾಜ್ ಹುಳಿಯಾರ್, ಡಾ. ಅಬ್ಬಾಸ್ ಆಲಿಮನಿ, ಡಾ. ಎಚ್.ಎಸ್. ಅನುಪಮ, ಪ್ರೊ. ಕೆ. ಶಿವರಾಮಯ್ಯ, ಪ್ರೊ.ಕೆ.ಎಲ್. ರಾಧಾಕೃಷ್ಣ, ಡಾ. ನಾಗಬಾಯಿಬುಳ್ಳಾ, ಡಾ. ವಿನಯಾ ಒಕ್ಕುಂದ.
* ಕನ್ನಡ ಪುಸ್ತಕ ಪ್ರಾಧಿಕಾರ: ಮಾಧವಿ ಭಂಡಾರಿ, ಎಸ್. ರಘುನಾಥ್, ಡಾ. ಬೋರೆಗೌಡ, ರಾಜಶೇಖರ ಹತಗುಂದಿ, ಎಫ್.ಎಸ್. ದುರುಗಣ್ಣನವರ್.
* ಕೊಡವ ಸಾಹಿತ್ಯ ಅಕಾಡೆಮಿ: ಡಾ. ಮೇಕಿರ ಸುಭಾಷ್ ನಾಣಯ್ಯ, ಪಿ.ಜಿ.ಅಯ್ಯಪ್ಪ, ವಾಣಿ ಚೆಂಗು ಅಮ್ಮಯ್ಯ, ಮುಲ್ಲೆಂಗಡ ದೇವಿ ಚೋಂದಮ್ಮ, ಮದ್ರೀರ ಸಂಜು ಬೆಳ್ಳಪ್ಪ, ಐಮಂಡ ಭಾಸ್ಕರ, ಮುವ್ವೇರ ರೇಖಾ ಪ್ರಕಾಶ್, ಮೇದರ ತಾಣಿ, ಅಪಾಡಂಡ ರಘು, ಕುಡಿಯರ ಬೋಪಯ್ಯ.
* ತುಳು ಸಾಹಿತ್ಯ ಅಕಾಡೆಮಿ: ಪ್ರೊ. ವೇದಾವತಿ, ಡಿ.ಎಂ. ಕುಲಾಲ್, ಸುಭಾಷ್‌ಚಂದ್ರ ಪಡಿವಾಳ್, ದರ್ಗಾ ಪ್ರಸಾದ್ ರೈ ಕುಂಬ್ರಾ, ಜಯಶೀಲಾ, ಮೋಹನ್ ಕೊಪ್ಪಲ ಕದ್ರಿ, ವಸಂತಶೆಟ್ಟಿ ಬೆಳ್ಳಾರೆ, ಕೃಷ್ಣ ಪೂಪ್ಪೂರು, ರಘು ಇಡ್ಕಿದು, ರೂಪಕಲಾ ಆಳ್ವ.
* ಕೊಂಕಣಿ ಸಾಹಿತ್ಯ ಅಕಾಡೆಮಿ: ಡಾ. ಅರವಿಂದ ಚಂದ್ರಕಾಂತ ಶಾನಭಾಗ, ಡಾ. ವಾರಿಜಾ ನೀರೇಬೈಲ್, ಡಾ. ಚೇತನ ಎಸ್. ನಾಯಕ್, ಮಮತಾ ಕಾಮತ್, ಕಮಲಾಕ್ಷ ಸೇಠ್, ಯಾಕೂಬ್ ಅಹ್ಮದ್‌ಜೀ, ಜಯರಾಮ್ ಸಿದ್ದಿ, ಎಂ.ಎಂ. ಮೀರನ್, ಅಶೋಕ ಕಾಸರಕೋಡು, ಶೇಖರ ಗೌಡ.
* ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: ಹಮೀದ್ ಪಡುಬಿದ್ರಿ, ಇದಿನಬ್ಬ ಬ್ಯಾರಿ, ಮೊಹ್ಮದ್ ಫಿರ್‌ದೂಸ್, ಯು.ಎಚ್. ಉಮರ್, ಹುಸೇನ್ ಕಾಟಿಪಳ್ಳ, ಅಬ್ಬಾಸ್ ಕಿರುಗೊಂಡ, ಅಬ್ದುಲ್ ಹಮೀದ್, ಜೊಹರಾ ಕೃಷ್ಣಾಪುರ, ಹಮ್ಮೀದ್ ಕಲಡ್ಕ, ಬದ್ರುದ್ದೀನ್ ಕೆ. ಮಾಣಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+