ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಳವೆ ಬಾವಿ ದುರಂತ ತಡೆಯಲು ಖಡಕ್ ಮಾರ್ಗಸೂಚಿ

|
Google Oneindia Kannada News

ಬೆಂಗಳೂರು, ಆ.5 : ತೆರೆದ ಕೊಳವೆ ಬಾವಿ ದುರಂತಗಳನ್ನು ತಪ್ಪಿಸಲು ಸರ್ಕಾರ ಹೊಸ ಮಾರ್ಗಸೂಚಿಯನ್ನು ಸಿದ್ದಪಡಿಸಿದೆ. ಕೊಳವೆ ಬಾವಿ ಮುಚ್ಚುವ ಬಗ್ಗೆ ಸೂಕ್ತ ಗಮನ ಹರಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ 21 ಅಂಶಗಳ ಮಾರ್ಗಸೂಚಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿದ್ಧಪಡಿಸಿದೆ.

ಕೊಳವೆ ಬಾವಿ ದುರಂತಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಖಾಸಗಿ ಜಮೀನಿನಲ್ಲಿ ವಿಫಲಕೊಳವೆಬಾವಿ ಮುಚ್ಚದವರಿಗೆ ಮೊದಲ ಹಂತದಲ್ಲಿ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಡಿಸಿಗಳಿಗೆ ಸೂಚನೆ ನೀಡಿದ್ದೇನೆ. ಇಷ್ಟಾದರೂ ಮುಚ್ಚದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. [ತಿಮ್ಮಣ್ಣನ ರಕ್ಷಣೆ ಹೇಗೆ ಸಾಗಿದೆ?]

Siddaramaiah

ತೆರದ ಕೊಳವೆ ಬಾವಿಗಳನ್ನು ಕೂಡಲೇ ಮುಚ್ಚಲು ಕ್ರಮ ಕೈಗೊಂಡು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಆಗಸ್ಟ್ 30 ರೊಳಗೆ ಅನುಸರಣಾ ವರದಿಯನ್ನು ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

ಹೊಸ ಮಾರ್ಗಸೂಚಿಯಲ್ಲೇನಿದೆ?

* ತೆರೆದ ಕೊಳವೆಬಾವಿಗಳನ್ನು ಮುಚ್ಚದಿದ್ದರೆ ಪಿಡಿಒ, ಎಇಇ, ಉಪ ತಹಸೀಲ್ದಾರ್ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
* 15-20 ದಿನದಲ್ಲಿ ತಮ್ಮ ವ್ಯಾಪ್ತಿಯ ಎಲ್ಲ ಕೊಳವೆ ಬಾವಿಗಳ ಸಮೀಕ್ಷೆ ನಡೆಸಿ ಆ ಬಗ್ಗೆ ವರದಿ ನೀಡಬೇಕು.
* ಸರ್ಕಾರಿ ಕೊಳವೆಬಾವಿಗಳು ವಿಫಲವಾದರೆ ಅವುಗಳನ್ನು ಮುಚ್ಚಿದ ಛಾಯಾಚಿತ್ರ ಒದಗಿಸಿದರೆ ಮಾತ್ರ ಬಿಲ್ ಪಾವತಿ ಮಾಡಲಾಗುತ್ತದೆ.
* ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯ ರಚನೆ ಎಸ್ಪಿ, ಇಇ, ತಹಸೀಲ್ದಾರ್, ಇಒ ಸಮಿತಿ ಸದಸ್ಯರು. ಬೋರ್ ವೆಲ್ ಮುಚ್ಚಿರುವ ಬಗ್ಗೆ ಸಮಿತಿ ಪರಿಶೀಲನೆ
* ಕೊಳವೆ ಬಾವಿಯನ್ನು ಕೊರೆಯಲು ಸಂಬಂಧಪಟ್ಟ ಪ್ರಾಧಿಕಾರ ಅಥವಾ ಸ್ಥಳೀಯ ಸಂಸ್ಥೆಯಿಂದ ಅನುಮತಿ ಕಡ್ಡಾಯ.
* ಗ್ರಾಮ ಮಟ್ಟದಲ್ಲಿ ಕೊಳವೆಬಾವಿ ಕೊರೆಯಲು ಮುಚ್ಚಳಿಕೆ ಪತ್ರವನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಬೇಕು.
* ಒಂದು ವೇಳೆ ಕೊಳವೆಬಾವಿ ವಿಫಲವಾದರೆ ಅದನ್ನು 48 ಗಂಟೆಗಳಲ್ಲಿ ಮುಚ್ಚಿಸುವುದಾಗಿ ಈ ಮುಚ್ಚಳಿಕೆಯಲ್ಲಿ ತಿಳಿಸಬೇಕು.
* ನೀರು ಬಂದರೆ ಕೊಳವೆಬಾವಿಗೆ ಸೂಕ್ತ ಕ್ಯಾಪ್ ಅಥವಾ ಸುತ್ತಲೂ ಫೆನ್ಸಿಂಗ್ ಅಳವಡಿಸುವುದಾಗಿ ಅರ್ಜಿದಾರರು ದೃಢೀಕರಿಸಬೇಕು.
* ನಿರಾಕ್ಷೇಪಣಾ ಪತ್ರ (ಎನ್‌ಒಸಿ) ದೊರೆತ ನಂತರವಷ್ಟೇ ಕೊಳವೆಬಾವಿ ಕೊರೆಯಬಹುದು.

English summary
The Karnataka government announced strict guidelines for drilling and maintaining bore-wells while a six-year-old boy continued to battle for life after falling into a bore-well Sunday in Sulikeri village of Bagalkot district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X