ಪ್ರವಾಹ ಸ್ಥಿತಿ: ಸುವರ್ಣಸೌಧಕ್ಕೆ ರಾಜ್ಯಾಡಳಿತ ಶಿಫ್ಟ್ ಆಗಲಿ
ಬೆಂಗಳೂರು, ಆಗಸ್ಟ್ 08: "ಉತ್ತರ ಕರ್ನಾಟಕ ಪ್ರವಾಹ ಪರಿಸ್ಥಿತಿ ನಿಭಾಯಿಸುವುದು ರಾಜ್ಯದ ಸರ್ಕಾರದ ಜವಾಬ್ದಾರಿಯಾಗಿದ್ದು, ಪರಿಹಾರ ಕಾರ್ಯದ ನಿಮಿತ್ತ ಮುಂದಿನ ಒಂದು ವಾರದ ಕಾಲ ರಾಜ್ಯಾಡಳಿತ ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರವಾಗಲಿ" ಎಂದು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಆಗ್ರಹಿಸಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ ಗಂಭೀರವಾದ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಅದರಲ್ಲಿಯೂ ಉತ್ತರ ಕರ್ನಾಟಕದ ಬಹುತೇಕ ಕಡೆ ಲಕ್ಷಾಂತರ ಜನ ನೆರೆಯಲ್ಲಿ ಸಿಲುಕಿದ್ದಾರೆ ಹಾಗೂ ಆಸ್ತಿ-ಪಾಸ್ತಿ-ಜೀವನೋಪಾಯಗಳನ್ನು ಕಳೆದುಕೊಂಡಿದ್ದಾರೆ. ದುರದೃಷ್ಟವಶಾತ್ ಹಲವರ ಪ್ರಾಣಹಾನಿಯೂ ಆಗಿದೆ. ರಾಜ್ಯದಲ್ಲಿ ಪೂರ್ಣಪ್ರಮಾಣದ ಮಂತ್ರಿಮಂಡಲ ಇಲ್ಲದಿರುವ ಕಾರಣ ಇಂತಹ ಸಂದರ್ಭದಲ್ಲಿ ಪರಿಹಾರ ಕಾರ್ಯದಲ್ಲಿ ಮೇಲುಸ್ತುವಾರಿ ವಹಿಸಬಹುದಾಗಿದ್ದ ಮಂತ್ರಿಗಳೂ ಇಲ್ಲದಿರುವುದು ಪ್ರವಾಹದ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳು ತಮಗೆ ಅನುಕೂಲವಾದಾಗ ನೆರೆಪ್ರವಾಹ ಬಂದಿರುವ ಭಾಗಕ್ಕೆ ವಿಮಾನದಲ್ಲಿ ಹೋಗಿ ಪರಿಹಾರ ಕಾರ್ಯದಲ್ಲಿ ಮತ್ತು ಮೇಲುಸ್ತುವಾರಿಯಲ್ಲಿ ತೊಡಗುವುದು ಬೇಜವಾಬ್ದಾರಿತನ. ಹಾಗೆಯೇ ಅಗತ್ಯವಿದ್ದಲ್ಲಿ ಪ್ರವಾಹ ಇಲ್ಲದ ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಪ್ರವಾಹಪೀಡಿತ ಸ್ಥಳಗಳಿಗೆ ಪ್ರವಾಹ ಪರಿಹಾರ ಕಾರ್ಯಕ್ಕೆ ನಿಯೋಜಿಸಲು ಆಗ್ರಹಿಸುತ್ತದೆ.

ಒಂದು ವಾರದ ಕಾಲ ಬೆಳಗಾವಿಯಿಂದ ಕಾರ್ಯ ನಿರ್ವಹಣೆ
ಮುಂದಿನ ಒಂದು ವಾರದ ಕಾಲ ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯದ ಮುಖ್ಯಕಾರ್ಯದರ್ಶಿಗಳು ಹಾಗೂ ಕಂದಾಯ, ಗ್ರಾಮೀಣಾಭಿವೃದ್ಧಿ, ಕೃಷಿ, ನೀರಾವರಿ, ಲೋಕೋಪಯೋಗಿ ಮತ್ತಿತರ ಪ್ರಮುಖ ಇಲಾಖೆಗಳ ಎಲ್ಲಾ ಉನ್ನತಾಧಿಕಾರಿಗಳು ಬೆಳಗಾವಿಯ ಸುವರ್ಣಸೌಧದಿಂದ ಕಾರ್ಯನಿರ್ವಹಿಸಬೇಕು ಮತ್ತು ಅಗತ್ಯ ಸಮಯದಲ್ಲಿಯೆ ಜನರ ಸಂಕಷ್ಟ ಪರಿಹಾರಕ್ಕೆ ಮುಂದಾಗಬೇಕು ಎಂದು "ಕರ್ನಾಟಕ ರಾಷ್ಟ್ರ ಸಮಿತಿ" ಪಕ್ಷವು ಆಗ್ರಹಿಸುತ್ತದೆ.

100 ಕೋಟಿ ರೂಪಾಯಿಗಳನ್ನು ನೆರೆಗೆ ಮೀಸಲಿಡಿ
ಇದೇ ಸಂದರ್ಭದಲ್ಲಿ, ರಾಜ್ಯದ ಲಕ್ಷಾಂತರ ಕನ್ನಡಿಗರು ಉತ್ತರ ಕರ್ನಾಟಕದ ಜನರ ಸಂಕಷ್ಟಕ್ಕೆ ಮಿಡಿಯುತ್ತಿದ್ದಾರೆ. ಪರರ ಸಂಕಷ್ಟಕ್ಕೆ ಮತ್ತು ದುಃಖಕ್ಕೆ ಸಹಾನುಭೂತಿ ತೋರಿಸುವುದು ಮತ್ತು ಸಹಾಯ ಮಾಡುವುದು ಕನ್ನಡಿಗರ ರಕ್ತದಲ್ಲಿಯೇ ಇರುವ ಗುಣ. ಆದರೆ ಈಗಿನ ಸಮಸ್ಯೆಗೆ ಪರಿಹಾರ ನಾವು ತಲುಪಿಸುವ ವಸ್ತುಗಳಲ್ಲಿ ಇಲ್ಲ. ನಮ್ಮ ರಾಜ್ಯದ ಸರ್ಕಾರದ ಈ ವರ್ಷದ ಬಜೆಟ್ ಗಾತ್ರ ಎರಡು ಲಕ್ಷ ಮುವ್ವತ್ತನಾಲ್ಕು ಸಾವಿರ ಕೋಟಿ (2,34,00,00,00,00,000) ರೂಪಾಯಿಗಳು. ಈಗಿನ ಪ್ರವಾಹ ನಿಯಂತ್ರಣ ಮತ್ತು ತಕ್ಷಣದ ಪರಿಹಾರ ಕಾರ್ಯಗಳಿಗೆ ಬಹುಶಃ 100 ಕೋಟಿ ರೂಪಾಯಿಗಳು ಸಾಕಷ್ಟಾಗುತ್ತದೆ.

ಸರ್ಕಾರದ ಮೇಲೆ ಒತ್ತಡ ತರುವ ಕೆಲಸವಾಗಲಿ
ಇದು ಸರ್ಕಾರಕ್ಕೆ ನಗಣ್ಯವಾದ ಮೊತ್ತ. ಬೇಕಾಗಿರುವುದು ಚಿತ್ತಶುದ್ಧಿ ಮತ್ತು ಇಚ್ಛಾಶಕ್ತಿ. ಬೃಹತ್ ಗಾತ್ರದ ನಮ್ಮ ಆಡಳಿತ ಯಂತ್ರಾಂಗ ಪ್ರಾಮಾಣಿಕವಾಗಿ ತೊಡಗಿಸಿಕೊಂಡರೆ ಎಲ್ಲರಿಗಿಂತಲೂ ಮೊದಲು ಅವರು ಸಂತ್ರಸ್ತರನ್ನು ಮುಟ್ಟಬಹುದು ಮತ್ತು ಅವರಿಗೆ ಆಸರೆಯಾಗಬಹುದು. ಈ ಹಿನ್ನೆಲೆಯಲ್ಲಿ ಕಾಳಜಿಯುಳ್ಳ ಎಲ್ಲಾ ಕನ್ನಡಿಗರು ಮಾಡಬೇಕಾದ ಕೆಲಸ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಸ್ಥಿತಿಯನ್ನು ಎಲ್ಲರ ಗಮನಕ್ಕೆ ತರುವುದು ಮತ್ತು ಆ ಮೂಲಕ ಸರ್ಕಾರದ ಮೇಲೆ ಒತ್ತಡ ತರುವುದು. ಜೊತೆಗೆ ಪರಿಹಾರ ಕಾರ್ಯದಲ್ಲಿ ಯಾವುದೇ ಬೇಜವಾಬ್ದಾರಿತನ ಹಾಗೂ ಭ್ರಷ್ಟಾಚಾರ ನುಸುಳದ ರೀತಿಯಲ್ಲಿ ಆಧುನಿಕ ಮಾಧ್ಯಮಗಳ ಮೂಲಕ ಹದ್ದಿನ ಕಣ್ಣಿಟ್ಟು ಕಾಯುವುದು. ನಂತರವೂ ಅಗತ್ಯವಿದ್ದಲ್ಲಿ ಪರಿಹಾರ ಸಾಮಗ್ರಿಗಳ ಸಂಗ್ರಹ ಮತ್ತು ವಿತರಣೆಯಲ್ಲಿ ತೊಡಗುವ ಕಾರ್ಯವಾಗಬೇಕಿದೆ.

ಪರಿಹಾರ ಕಾರ್ಯದಲ್ಲಿ ತೊಡಗಿಕೊಳ್ಳಲಾಗುವುದು
"ಕರ್ನಾಟಕ ರಾಷ್ಟ್ರ ಸಮಿತಿ" ಪಕ್ಷದ ಪದಾಧಿಕಾರಿಗಳು ಸಹ ಆದಷ್ಟು ಶೀಘ್ರದಲ್ಲಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಲು ಹಾಗೂ ಸರ್ಕಾರ ನಿರ್ವಹಿಸುತ್ತಿರುವ ಪರಿಹಾರ ಕಾರ್ಯಕ್ಕೆ ತೊಂದರೆಯಾಗದ ರೀತಿಯಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಳ್ಳಲು ನಾನು ಈ ಮೂಲಕ ವಿನಂತಿಸುತ್ತೇನೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ತಿಳಿಸಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications