Get Updates
Get notified of breaking news, exclusive insights, and must-see stories!

ಪ್ರವಾಹದ ನಷ್ಟ; ಸದನದಲ್ಲಿ ಅಂಕಿ ಅಂಶ ಬಿಚ್ಚಿಟ್ಟ ಸಿದ್ದರಾಮಯ್ಯ

ಬೆಂಗಳೂರು, ಅಕ್ಟೋಬರ್ 11 : "ರಾಜ್ಯವನ್ನು ಭೀಕರ ಪ್ರವಾಹ ಕಾಡುತ್ತಿದೆ. ಪ್ರವಾಹ ಪರಿಸ್ಥಿತಿಯ ಬಗ್ಗೆ ಕನಿಷ್ಟ ಮೂರು ದಿನ ಚರ್ಚೆ ಮಾಡದೆ ಇಡೀ ಅಧಿವೇಶನವನ್ನು ಮೂರೇ ದಿನಕ್ಕೆ ಸೀಮಿತಗೊಳಿಸುವುದನ್ನು ನಾನು ಖಂಡಿಸುತ್ತೇನೆ. ಅಧಿವೇಶನವನ್ನು ಕನಿಷ್ಠ 6 ದಿನ ನಡೆಸಿ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆ ಅಧಿವೇಶನದ 2ನೇ ದಿನವಾದ ಶುಕ್ರವಾರವೂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದರು. ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಅಂಕಿ ಅಂಶಗಳ ಸಮೇತ ವಿವರವಾಗಿ ಮಾತನಾಡಿದರು.

ಕಲಾಪದಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಅರಣ್ಯ ಭೂಮಿಯಲ್ಲಿರುವ ಕೆಲವು ಹಳ್ಳಿಗಳು ಈ ಬಾರಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿವೆ. ಈಗ ಅರಣ್ಯ ಇಲಾಖೆಯವರು ಶೆಡ್‌ಗಳನ್ನು ಹಾಕಲು ಹಾಗೂ ಮನೆ ಕಟ್ಟಿಕೊಳ್ಳಲು ಅಲ್ಲಿನ ಜನರಿಗೆ ಅನುಮತಿ ನೀಡುತ್ತಿಲ್ಲ. ಹಾಗಾಗಿ ಸರ್ಕಾರ ಅರಣ್ಯ ಇಲಾಖೆಯ ಬಳಿ ಅರಣ್ಯ ಭೂಮಿಯನ್ನು ಪಡೆದು ಅದರ ಬದಲಾಗಿ ರೆವಿನ್ಯೂ ಭೂಮಿಯನ್ನು ನೀಡುವ ಒಪ್ಪಂದ ಮಾಡಿಕೊಳ್ಳಲಿ" ಎಂದರು.

ಕೇಂದ್ರದ ಪರಿಹಾರ

ಕೇಂದ್ರದ ಪರಿಹಾರ

ಸಿದ್ದರಾಮಯ್ಯ, "ಕೇಂದ್ರದಿಂದ ಕೇಳುತ್ತಿರುವುದು ಭಿಕ್ಷೆ ಅಲ್ಲ. ರೂ.35,160 ಕೋಟಿ ನಷ್ಟಕ್ಕೆ NDRF ನಿಯಮ ಪ್ರಕಾರವೇ ರೂ.9891ಕೋಟಿ ಮಧ್ಯಂತರ ಪರಿಹಾರ ಕೊಡಬೇಕಿತ್ತು, ಕೊಟ್ಟಿರುವುದು ರೂ.1200 ಕೋಟಿ. ಇದನ್ನೇ ನರೇಂದ್ರ ಮೋದಿ ಅವರನ್ನು ಕೇಳಿದರೆ ಆಕಾಶ ನೋಡಿ ಉಗುಳಿದರೆ ನಿಮ್ಮ ಮುಖಕ್ಕೆ ಬೀಳುತ್ತೆ ಎಂದು ಹೇಳ್ತೀರಿ" ಎಂದು ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಪ್ರತ್ಯೇಕ ಪರಿಹಾರ ಕೊಡಬೇಕು

ಪ್ರತ್ಯೇಕ ಪರಿಹಾರ ಕೊಡಬೇಕು

ಸಿದ್ದರಾಮಯ್ಯ, "ಪ್ರವಾಹದಿಂದ 25%ಕ್ಕಿಂತ ಹೆಚ್ಚು ಹಾನಿಯಾದ ಮನೆಗಳಿಗೆ ರೂ.5 ಲಕ್ಷ, ಪೂರ್ಣ ನಾಶವಾದ ಮನೆಗಳಿಗೆ ರೂ.10 ಲಕ್ಷ ಪರಿಹಾರ ನೀಡಬೇಕು. ಪೂರ್ಣ ಮತ್ತು ಭಾಗಶ: ಮುಳುಗಡೆಯಾಗಿರುವ 1000 ಹಳ್ಳಿಗಳನ್ನು ಸ್ಥಳಾಂತರಿಬೇಕು.‌ ಕೂಡು ಕುಟುಂಬದಲ್ಲಿರುವ ಅಣ್ಣ-ತಮ್ಮಂದಿರ ಕುಟುಂಬಗಳಿಗೆ ಪ್ರತ್ಯೇಕ ಪರಿಹಾರ ಕೊಡ್ಬೇಕು" ಎಂದು ಸರ್ಕಾರವನ್ನು ಒತ್ತಾಯಿಸಿದರು.

ಬಿಜೆಪಿ ಜನಪರ ಕಾಳಜಿಯ ಟೀಕೆ

ಬಿಜೆಪಿ ಜನಪರ ಕಾಳಜಿಯ ಟೀಕೆ

"ಆಗಸ್ಟ್ ಮೊದಲ ವಾರದಲ್ಲಿ ನೆರೆ ಶುರುವಾಗಿತ್ತು. ರೂ. 35,160 ಕೋಟಿ ನಷ್ಟ ಎಂದು ಕೇಂದ್ರಕ್ಕೆ ವರದಿ ಸಲ್ಲಿಸಿದ್ದು ಸೆ.9ರಂದು. ರೂ. 52,000 ಕೋಟಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ.2 ತಿಂಗಳ ನಂತರ ಕೇಂದ್ರ ಸರ್ಕಾರ ರೂ. 1,200 ಕೋಟಿ ಪರಿಹಾರ ನೀಡಿದೆ. ಇದು ಬಿಜೆಪಿ ಸರ್ಕಾರದ ಜನಪರ ಕಾಳಜಿಯೇ" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಬೆಳೆಗಳಿಗೆ ಪರಿಹಾರ ನೀಡಿ

ಬೆಳೆಗಳಿಗೆ ಪರಿಹಾರ ನೀಡಿ

ಸಿದ್ದರಾಮಯ್ಯ, "ಕಬ್ಬು ಬೆಳೆ ನಷ್ಟವಾದವರಿಗೆ ಎನ್‌ಡಿ‌ಆರ್‌ಎಫ್ ನಿಯಮದನ್ವಯ ಹೆಕ್ಟೇರ್‌ಗೆ ರೂ.13,500 ಪರಿಹಾರ ನೀಡಬೇಕೆಂದಿದೆ. ಆದರೆ, 1 ಹೆಕ್ಟೇರ್ ಕಬ್ಬು ಬೆಳೆ ಬಿತ್ತನೆಗೆ ಕನಿಷ್ಠ 1 ಲಕ್ಷ ರೂ. ವೆಚ್ಚ ತಗುಲುವುದರಿಂದ ಹೆಕ್ಟೇರ್‌ಗೆ 1 ಲಕ್ಷದಂತೆ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಇದೇ ರೀತಿ ಎಲ್ಲ ಬೆಳೆಗಳಿಗೂ ಸೂಕ್ತ ಪರಿಹಾರ ನೀಡಲಿ" ಎಂದರು.

ಖಜಾನೆ ಲೂಟಿ ಎಂದರೇನು?

ಖಜಾನೆ ಲೂಟಿ ಎಂದರೇನು?

"ಖಜಾನೆ ಲೂಟಿ ಆಗಿದೆ ಎಂದ್ರೇನು? ಯಾರೋ ಚೀಲ ತಕ್ಕೊಂಡು ಬಂದು ಹಣ ತುಂಬಿಸ್ಕೊಂಡು ಹೋಗೋದಾ?, ಎಂತಹ ಮಾತು?, ಆರ್ಥಿಕವಾಗಿ ಸದೃಡವಾಗಿರುವ ದೇಶದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಒಂದು. ಈ ಬಾರಿಯ ಬಜೆಟ್ ಗಾತ್ರ 2.30 ಲಕ್ಷ ಕೋಟಿ. ಹಣದ ಕೊರತೆ ಖಂಡಿತ ಇಲ್ಲ, ಜನರಿಗೆ ಸ್ಪಂದಿಸುವ ಮನಸ್ಸು ಸರ್ಕಾರಕ್ಕಿಲ್ಲ" ಎಂದು ಸಿದ್ದರಾಮಯ್ಯ ಆರೋಪಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+